ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸಂಪತ್ತು ವೃದ್ದಿ!

|
Google Oneindia Kannada News

ಬೆಂಗಳೂರು, ಮಾರ್ಚ್ 22: ಕರ್ನಾಟಕ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಸಾಮಾಜಿಕ ಘಟಕಗಳ ನಡುವಿನ ಟ್ವೀಟ್ ಬೇರೆ ಬೇರೆ ಆಯಾಮದತ್ತ ಹೊರಳುತ್ತಿದೆ. ರಾಜ್ಯದ ಅಭಿವೃದ್ದಿ ವಿಚಾರಕ್ಕಿಂತ ಹೆಚ್ಚಾಗಿ, ಪರಸ್ಪರ ದೋಷಾರೊಪಾಣೆ ಮಾಡುವುದಕ್ಕೆ ಇದು ಸೀಮಿತವಾದಂತಿದೆ.

ರಮೇಶ್ ಜಾರಕಿಹೊಳಿಯವರ ಸಿಡಿ ವಿಚಾರದಿಂದ ಹಿಡಿದು ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತೊಂಬತ್ತು ಪಂಚೆ ಖರೀದಿಸುವ ತನಕ, ಎರಡು ಪಕ್ಷಗಳ ನಡುವೆ ಟ್ವೀಟ್ ಸಮರ ನಡೆಯುತ್ತಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ

ಕಲ್ಯಾಣ ಕರ್ನಾಟಕದ ಅಭಿವೃದ್ದಿ ವಿಚಾರದಲ್ಲಿ ಮತ್ತೆ ಎರಡು ಪಕ್ಷಗಳು ಆರೋಪ, ಪ್ರತ್ಯಾರೋಪ ಮಾಡುತ್ತಿವೆ. ಇದರ ಜೊತೆಗೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನೂ ಈ ವಿಚಾರದಲ್ಲಿ ಬಿಜೆಪಿ ಎಳೆದು ತಂದಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂದು ಬಿಜೆಪಿ ಶುರು ಮಾಡಿದ ಟ್ವೀಟ್ ಗೆ, ಕಾಂಗ್ರೆಸ್ ಪ್ರತಿಕ್ರಿಯೆ ನೀಡುತ್ತಾ, ಅದಕ್ಕೆ ಕೌಂಟರ್ ಕೊಡುವಾಗ ಖರ್ಗೆ ಸಂಪತ್ತು ವೃದ್ದಿಯಾಗಿದ್ದನ್ನು ಬಿಜೆಪಿ ತನ್ನ ಟ್ವೀಟ್ ನಲ್ಲಿ ಹೇಳಿರುವುದು ಆಶ್ಚರ್ಯ ಮೂಡಿಸಿದೆ.

 ಕೆಪಿಸಿಸಿ ಅಧ್ಯಕ್ಷರೇ ಆರೋಪಿಯನ್ನು ರಕ್ಷಿಸುತ್ತಿದ್ದಾರಾ? ಭಾರೀ ವಿವಾದಕ್ಕೆ ಕಾರಣವಾದ ಡಿಕೆಶಿ ನಡೆ ಕೆಪಿಸಿಸಿ ಅಧ್ಯಕ್ಷರೇ ಆರೋಪಿಯನ್ನು ರಕ್ಷಿಸುತ್ತಿದ್ದಾರಾ? ಭಾರೀ ವಿವಾದಕ್ಕೆ ಕಾರಣವಾದ ಡಿಕೆಶಿ ನಡೆ

ಬಿಜೆಪಿ ಮೊದಲು ಟ್ವೀಟ್ ಮಾಡಿದ್ದು ಹೀಗೆ

ಬಿಜೆಪಿ ಮೊದಲು ಟ್ವೀಟ್ ಮಾಡಿದ್ದು ಹೀಗೆ, "ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ @INCKarnataka ಪಕ್ಷ ಇಷ್ಟು ವರ್ಷ ಊದಿದ್ದು ಕೇವಲ ತುತ್ತೂರಿ ಮಾತ್ರ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ ರೂ. 1500 ಕೋಟಿ ಅನುದಾನ ಒದಗಿಸಿದ್ದು ಬಿಜೆಪಿ ಸರ್ಕಾರ. ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೊಡುಗೆ ಏನು?

 ಡಬಲ್ ಇಂಜಿನ್ ಸರ್ಕಾರಗಳು

ಡಬಲ್ ಇಂಜಿನ್ ಸರ್ಕಾರಗಳು

ಇದಕ್ಕೆ ಕಾಂಗ್ರೆಸ್ ಮೊದಲು ಕೊಟ್ಟ ಉತ್ತರ ಹೀಗಿತ್ತು, "ಕಲ್ಯಾಣ ಕರ್ನಾಟಕಕ್ಕೆ ನಾಮಕರಣ ಮಾಡಿದ್ದು ಬಿಟ್ಟರೆ, @BJP4Karnataka ಸರ್ಕಾರ ಮಾಡಿದ್ದು ದ್ರೋಹದ ಮೇಲೆ ದ್ರೋಹ. ಡಬಲ್ ಇಂಜಿನ್ ಸರ್ಕಾರಗಳು ಕೆಕೆಆರ್‌ಡಿಬಿ ಅನುದಾನಕ್ಕೆ ಕತ್ತರಿ ಹಾಕಿವೆ. ಬಜೆಟ್‌ನಲ್ಲೂ ಯಾವುದೇ ಯೋಜನೆಗಳಿಲ್ಲ. ಬದಲಿಗೆ ಪ್ರತಿ ಬಜೆಟ್‌ನಲ್ಲೂ ಅನುದಾನಕ್ಕೆ ಕತ್ತರಿ ಹಾಕಾಲಾಗುತ್ತಿದೆ".

 ಕಲ್ಯಾಣ ಕರ್ನಾಟಕ ಏಕೆ ಅಭಿವೃದ್ಧಿ ಕಂಡಿಲ್ಲ

ಕಲ್ಯಾಣ ಕರ್ನಾಟಕ ಏಕೆ ಅಭಿವೃದ್ಧಿ ಕಂಡಿಲ್ಲ

ಇದಕ್ಕೆ ಮತ್ತೆ ಬಿಜೆಪಿ ಕೊಟ್ಟ ಉತ್ತರ ಹೀಗಿತ್ತು, "ಕಲ್ಯಾಣ ಕರ್ನಾಟಕ ಏಕೆ ಅಭಿವೃದ್ಧಿ ಕಂಡಿಲ್ಲ ಎಂಬ @INCKarnataka ಪ್ರಶ್ನೆಗೂ @kharge ಅವರ ಸಂಪತ್ತಿನ ವೃದ್ಧಿಗೂ ಸಂಬಂಧವಿದೆ. ಖರ್ಗೆ ಆಸ್ತಿಯ ಬಗ್ಗೆ ಕಾಂಗ್ರೆಸ್ ಮೊದಲು ಪ್ರಶ್ನೆ ಮಾಡಬೇಕು. ಆಗ ಈ ಜಿಲ್ಲೆಗಳು ಹಿಂದುಳಿದಿರುವುದಕ್ಕೆ ಉತ್ತರ ಸಿಗುತ್ತದೆ. ಕಲ್ಯಾಣ ಕರ್ನಾಟಕದ ನಿಜವಾದ ವೈರಿಯೇ ಕಾಂಗ್ರೆಸ್".

Recommended Video

ಇಂದು ಕೂಡ ಸದನದಲ್ಲಿ ಸಿಡಿ ವಿಚಾರ ಚರ್ಚೆ ಆರಂಭಿಸಿದ ಕಾಂಗ್ರೆಸ್ | Oneindia Kannada
 ಮಲ್ಲಿಕಾರ್ಜುನ ಖರ್ಗೆ ಇಚ್ಚಾಶಕ್ತಿ ಅಪಾರ

ಮಲ್ಲಿಕಾರ್ಜುನ ಖರ್ಗೆ ಇಚ್ಚಾಶಕ್ತಿ ಅಪಾರ

ಮತ್ತೆ ಕಾಂಗ್ರೆಸ್ ಇದಕ್ಕೆ ಕೊಟ್ಟ ಉತ್ತರ, "ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ @kharge ಅವರ ಇಚ್ಛಾಶಕ್ತಿ ಅಪಾರ. ಅವರ ಶ್ರದ್ಧೆಯಲ್ಲಿ ಅನುಷ್ಠಾನಗೊಂಡ ಯೋಜನೆಗಳ ಹಲವು ಇವೆ. ನೀವು ಆರ್ಟಿಕಲ್ 371ಜೆ ಜಾರಿಗೊಳಿಸಲು ವಿರೋಧಿಸಿದ್ದೀರಿ. ಅಧಿಕಾರ ನಿಮ್ಮ ಕೈಲಿದೆ ಖರ್ಗೆಯವರ ಆಸ್ತಿ ತನಿಖೆಯನ್ನು ದಾರಾಳವಾಗಿ ಮಾಡಬಹುದು.ಇಲ್ಲವೇ ಅನಗತ್ಯ ಸುಳ್ಳುಗಳನ್ನು ನಿಲ್ಲಿಸಬೇಕು"ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

English summary
Kalyana Karnataka Development And Mallikarjun Kharge Growth In Wealth, BJP And Congress Tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X