Breaking; ಕಲಬುರಗಿ-ಬೆಂಗಳೂರು ಹೊಸ ರೈಲು, ಕೇಂದ್ರ ಸಚಿವರ ಸ್ಪಂದನೆ
ಬೆಂಗಳೂರು, ಡಿಸೆಂಬರ್ 20; ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಬೆಂಗಳೂರು- ಕಲಬುರಗಿ ನಡುವೆ ಹೊಸ ರೈಲು ಆರಂಭಿಸುವ ಬೇಡಿಕೆಗೆ ಕೇಂದ್ರ ರೈಲ್ವೆ ಸಚಿವರು ಸ್ಪಂದಿಸಿದ್ದಾರೆ.
ಲೋಕಸಭೆ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕಲಬುರಗಿಯ ಸಂಸದ ಡಾ. ಉಮೇಶ್ ಜಾಧವ್ ಮಂಗಳವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಕೇಂದ್ರ ರೈಲ್ವೆ ವಲಯದ ವ್ಯಾಪ್ತಿಗೆ ಬರುವ ಎಲ್ಲ ಸಂಸದರು ಸಚಿವರನ್ನು ಭೇಟಿಯಾದರು.
ಉಮೇಶ್ ಜಾಧವ್ ಈ ಕುರಿತು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸಚಿವರ ಬಳಿ ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಲಾಯಿತು. ಅದರಲ್ಲಿ ಮುಖ್ಯವಾಗಿ ಕಲಬುರಗಿಗೆ ಸಂಬಂಧಿಸಿದ ಈ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಬೇಡಿಕೆಗಳು
* ಕಲಬುರಗಿ ರೈಲ್ವೆ ಡಿವಿಷನ್ ಮಂಜುರಾತಿ
* ಶಾಬಾದ ಹಾಗೂ ಕಮಲಾಪುರನಲ್ಲಿ ವಿವಿಧ ರೈಲು ನಿಲುಗಡೆ
* ಕಲಬುರಗಿ-ಬೆಂಗಳೂರು ನಡುವೆ ನೂತನ ರೈಲಿಗೆ ಚಾಲನೆ
* ಮಹಾಗಾಂವ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಮಾರ್ಪಡಿಸುವ ಬಗ್ಗೆ. ಈ ಮೇಲಿನ ಬೇಡಿಕೆಗಳಿಗೆ ಸಚಿವರು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಡಾ. ಉಮೇಶ್ ಜಾಧವ್ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
1) ಕಲಬುರಗಿ ರೈಲ್ವೆ ಡಿವಿಷನ್ ಮಂಜುರಾತಿ.
— Dr. Umesh G Jadhav MPLS (@UmeshJadhav_BJP) December 20, 2022
2) ಶಾಬಾದ ಹಾಗೂ ಕಮಲಾಪುರನಲ್ಲಿ ವಿವಿಧ ರೈಲ್ವೆಗಳ ನಿಲುಗಡೆ.
3) ಕಲಬುರಗಿ ಯಿಂದ ಬೆಂಗಳೂರಿಗೆ ನೂತನ ರೈಲ್ವೆಗೆ ಚಲಾನೆ.
4) ಮಹಾಗಾಂವ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಮಾರ್ಪಡಿಸುವ ಬಗ್ಗೆ.
ಈ ಮೇಲಿನ ಬೇಡಿಕೆಗಳಿಗೆ ಸಚಿವರು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 2/2
ಹೊಸ ಪ್ರಸ್ತಾವನೆಯಲ್ಲ; ಬೆಂಗಳೂರು-ಕಲಬುರಗಿ ಹೊಸ ರೈಲು ಪ್ರಸ್ತಾಪ ಹೊಸದಲ್ಲ. ಈ ಹಿಂದೆಯೇ ರೈಲ್ವೆ ಇಲಾಖೆಗೆ ಈ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಕಳೆದ ವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಉತ್ತರ ನೀಡುವಾಗ ಕಲಬುರಗಿ-ಬೆಂಗಳೂರು ಹೊಸ ರೈಲಿನ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಮಾಹಿತಿ ನೀಡಿದ್ದರು.
ಡಾ. ಉಮೇಶ್ ಜಾಧವ್ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, "ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲಿಗಾಗಿ ಪ್ರಸ್ತಾವನೆ ಬಂದಿದೆ. ಆದರೆ ಸದ್ಯಕ್ಕೆ ಹೊಸ ರೈಲು ಸಂಚಾರ ಆರಂಭಿಸುವುದಿಲ್ಲ. ಪ್ರಯಾಣಿಕರ ದಟ್ಟಣೆ, ಸಂಪನ್ಮೂಲ ಮುಂತಾದ ಅಂಶಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದರು.
ಆದರೆ ಮಂಗಳವಾರ ಕೇಂದ್ರ ರೈಲ್ವೆ ವಲಯದ ಸಂಸದರ ನಿಯೋಗ ಭೇಟಿ ಮಾಡಿದಾಗ ಸಚಿವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಉಭಯ ನಗರಗಳ ನಡುವೆ ಹೊಸ ರೈಲು ಸಂಚಾರ ಆರಂಭವಾದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.












Click it and Unblock the Notifications