ಭಾರತವನ್ನೇ ಆಳಿದ ಕನ್ನಡಿಗರ ಅತಿದೊಡ್ಡ ರಾಜಮನೆತನಗಳು ಇವು!
ಕನ್ನಡಿಗರಿಗೆ ಸಾವಿರಾರು ವರ್ಷ ಇತಿಹಾಸ ಇದೆ, ಹಾಗೇ ಕನ್ನಡ ನೆಲವನ್ನು ಆಳಿದ ನಮ್ಮ ರಾಜರಿಗೂ ಸಾವಿರ ಸಾವಿರ ವರ್ಷ ಇತಿಹಾಸ ಇದೆ. ಯಾರೋ, ಎಲ್ಲೋ ಸಾಧನೆ ಮಾಡಿದ ವಿಚಾರವನ್ನು ನಾವು ಪ್ರಸ್ತಾಪ ಮಾಡುತ್ತೇವೆ. ಬೇರೆ ಯಾವುದೋ ರಾಜರ ಬಗ್ಗೆ ನಾವೆಲ್ಲಾ ಹೊಗಳುತ್ತೇವೆ, ಮೆರೆಸುತ್ತೇವೆ. ಆದರೆ ನಮ್ಮ ಕನ್ನಡ ನೆಲದಲ್ಲಿ ಆಳಿ, ಭಾರತವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ಕನ್ನಡಿಗರ ರಾಜ ಮನೆತನಗಳ ಬಗ್ಗೆ ನಿಮಗೆ ಗೊತ್ತಾ?
ಇಡೀ ಜಾಗತಿಕ ಇತಿಹಾಸದಲ್ಲಿ ಕನ್ನಡಿಗರ ಸ್ಥಾನಮಾನ ದೊಡ್ಡದು. ಅದರಲ್ಲೂ ನಮ್ಮ ಈ ಭಾಷೆಗೆ 2500 ವರ್ಷ ಇತಿಹಾಸ ಇದೆ. ಕನ್ನಡಿಗರು ಶಾಂತಿ ಪ್ರಿಯರು ಮಾತ್ರವಲ್ಲ, ತಂಟೆಗೆ ಬಂದ ಪ್ರತಿಯೊಬ್ಬ ಶತ್ರುವನ್ನೂ ಸೋಲಿಸಿ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟ ಇತಿಹಾಸ ನಮ್ಮದು. ಹಾಗಾದರೆ ನಮ್ಮ ಹೆಮ್ಮೆಯ ಕನ್ನಡ ನಾಡನ್ನು ಆಳಿರುವ ರಾಜವಂಶ ಯಾವುವು? ಅವರ ಸಾಧನೆಗಳು ಏನು? ಕನ್ನಡಿಗರ ರಾಜವಂಶಗಳು ಎಷ್ಟು ಶ್ರೀಮಂತವಾಗಿ ಇದ್ದವು ಗೊತ್ತಾ?

ಕನ್ನಡಿಗರ ಹೆಮ್ಮೆಯ ರಾಜಮನೆತನಗಳು
| ಕ್ರಮ ಸಂಖ್ಯೆ | ರಾಜವಂಶದ ಹೆಸರು | ಆಡಳಿತ ನಡೆಸಿದ ಅವಧಿ | ಪ್ರಮುಖ ರಾಜರು |
| 1 | ಶಾತವಾಹನ ಸಾಮ್ರಾಜ್ಯ | ಕ್ರಿ.ಪೂ. 300 | ಗೌತಮಿಪುತ್ರ ಶಾತಕರ್ಣಿ |
| 2 | ಬನವಾಸಿಯ ಕದಂಬರು | ಕ್ರಿ.ಶ. 325 - ಕ್ರಿ.ಶ. 540 | ಮಯೂರ ವರ್ಮ |
| 3 | ತಲಕಾಡಿನ ಗಂಗರು | ಕ್ರಿ.ಶ. 325 - ಕ್ರಿ.ಶ. 999 | ಅವನೀತ & ದುರ್ವಿನೀತ |
| 4 | ಬಾದಾಮಿ ಚಾಲುಕ್ಯರು | ಕ್ರಿ.ಶ. 500 - ಕ್ರಿ.ಶ. 757 | 2ನೇ ವಿಕ್ರಮಾದಿತ್ಯ |
| 5 | ರಾಷ್ಟ್ರಕೂಟ ಸಾಮ್ರಾಜ್ಯ | ಕ್ರಿ.ಶ. 757 - ಕ್ರಿ.ಶ. 973 | ಅಮೋಘವರ್ಷ ನೃಪತುಂಗ |
| 6 | ಹೊಯ್ಸಳ ಸಾಮ್ರಾಜ್ಯ | ಕ್ರಿ.ಶ. 1000 - ಕ್ರಿ.ಶ. 1346 | 2ನೇ ವೀರ ಬಲ್ಲಾಳ |
| 7 | ವಿಜಯನಗರ ಸಾಮ್ರಾಜ್ಯ | ಕ್ರಿ.ಶ. 1336 - ಕ್ರಿ.ಶ. 1565 | ಕೃಷ್ಣದೇವರಾಯ |
| 8 | ಕೆಳದಿ ನಾಯಕರು | ಕ್ರಿ.ಶ. 1500 - ಕ್ರಿ.ಶ. 1763 | ರಾಣಿ ಚನ್ನಮ್ಮ |
| 9 | ಮೈಸೂರು ಒಡೆಯರು | ಕ್ರಿ.ಶ. 1399 | ನಾಲ್ವಡಿ ಕೃಷ್ಣರಾಜರು |
| 10 | ಕರ್ನಾಟಕ ರಾಜ್ಯ | ಕ್ರಿ.ಶ. 1956 |
ಮಂಗಳೂರು: ಈ ಕೇರಳಿಗನ ಕನ್ನಡ ಭಾಷಾ ಪ್ರೇಮಕ್ಕೆ ನೀವು ಫಿದಾ ಆಗುವುದಂತೂ ಗ್ಯಾರಂಟಿ
ಜಗತ್ತಿಗೆ ಗೊತ್ತು ಕನ್ನಡ ನಾಡಿನ ಗತ್ತು!
ಕನ್ನಡ ಭಾಷೆ & ಕನ್ನಡ ನಾಡಿನ ಸಂಸ್ಕೃತಿ ಬಗ್ಗೆ ಜಗತ್ತಿಗೆ ಗೊತ್ತು. ಸಾವಿರಾರು ವರ್ಷಗಳಿಂದ ಕನ್ನಡಿಗರ ಜೊತೆಗೆ ವ್ಯವಹರಿಸುತ್ತಿರುವ ವಿವಿಧ ದೇಶಗಳಲ್ಲಿ, ಕನ್ನಡ ಭಾಷೆ ಇತಿಹಾಸ ಸಾರುವ ಸಾಕ್ಷ್ಯ ಸಿಗುತ್ತವೆ. ಹಾಗೇ ಕನ್ನಡ ನಾಡಿನ ರಾಜವಂಶಗಳ ಕುರುಹು ಕೂಡ ಇದೆ.
ಇಂತಿಪ್ಪ ಕನ್ನಡ ನಾಡು ಹರಿದು ಹಂಚಿಹೋಗಿ, ಹಲವು ರಾಜ್ಯಗಳಲ್ಲಿ ಸೇರಿತ್ತು. ಆದರೆ ಬೇರೆಯಾಗಿದ್ದ ಕರ್ನಾಟಕ ಒಗ್ಗೂಡಿ, ಕರ್ನಾಟಕ ಎಂಬ ಹೆಸರು ಪಡೆದು ಈಗ ಅರ್ಧಶತಮಾನ ಕಳೆದಿದೆ. ಈ ಸಂಭ್ರಮದಲ್ಲಿ ಕನ್ನಡ ನಾಡಿನ ಕೀರ್ತಿ ಕೂಡ ಇಡೀ ಜಗತ್ತಿನಾದ್ಯಂತ ನಳನಳಿಸುತ್ತಿದೆ.
ಒಟ್ಟಾರೆ ಜಗತ್ತಿನ ಎಲ್ಲಾ ಭಾಷೆಗಳ ರಾಣಿ 'ಕನ್ನಡ', ಹೀಗಾಗಿ ಕನ್ನಡ ಭಾಷೆಗೆ ಜಗತ್ತಿನಾದ್ಯಂತ ಸುಂದರ ಭಾಷೆ ಎಂಬ ಬಿರುದು ಸಿಕ್ಕಿದೆ. ಹಾಗೆ ಕನ್ನಡ ಭಾಷೆಗೆ 2000 ವರ್ಷ ಇತಿಹಾಸ ಕೂಡ ಇದ್ದು, ಕರ್ನಾಟಕ ಸೇರಿ ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಭಾಷೆಯನ್ನು ಕೋಟಿ ಕೋಟಿ ಜನರು ಕಲಿಯುತ್ತಿದ್ದಾರೆ.
ಹಾಗೇ ಕನ್ನಡ ನಾಡಿನ ಇತಿಹಾಸವನ್ನು ಅರಿತುಕೊಳ್ಳಲು ಸಾವಿರ ಸಾವಿರ ಸಂಖ್ಯೆಯ ವಿದೇಶಿಗರು ಇಂದಿಗೂ ನಮ್ಮ ನೆಲಕ್ಕೆ ಬರುತ್ತಾರೆ. ಆದರೆ ನಮ್ಮ ನೆಲದ ಬಗ್ಗೆ ಇಂದಿಗೂ ನಮ್ಮವರಿಗೆ ಅಭಿಮಾನ ಕಡಿಮೆ ಎಂಬ ಮಾತು ಕೇಳಿಬರುತ್ತೆ. ಇದನ್ನೆಲ್ಲಾ ಸುಳ್ಳು ಮಾಡಲು ಕನ್ನಡಿಗರು ಇನ್ನಾದರೂ ಕನ್ನಡ ನೆಲದ ಇತಿಹಾಸ ಅರಿಯಬೇಕಿದೆ. ಈ ಸಮಯದಲ್ಲೇ ತಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೂ ಕನ್ನಡದ ಇತಿಹಾಸ ಪಾಠ ಮಾಡಬೇಕಿದೆ.












Click it and Unblock the Notifications