ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಕೆ. ರತ್ನಪ್ರಭಾ ನೇಮಕ

|
Google Oneindia Kannada News

ಬೆಂಗಳೂರು, ನವೆಂಬರ್ 28: ರಾಜ್ಯ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ಕೆ.ರತ್ನಪ್ರಭಾ ನೇಮಕಗೊಂಡಿದ್ದಾರೆ

1981ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ರತ್ನಪ್ರಭಾ ಅವರನ್ನು ಮುಖ್ಯಕಾರ್ಯದರ್ಶಿಯಾಗಿ ಹಾಗೂ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ವಿಜಯ್ ಭಾಸ್ಕರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ರಾಜು ಆಯ್ಕೆರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ರಾಜು ಆಯ್ಕೆ

ಹಾಲಿ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅಧಿಕಾರಾವಧಿ ತಿಂಗಳಾಂತ್ಯಕ್ಕೆ ಮುಗಿಯಲಿದೆ. ಆದ್ದರಿಂದ ಭಾಷ್ ಚಂದ್ರ ಅವರ ಸ್ಥಾನಕ್ಕೆ ರತ್ನಪ್ರಭಾ ಅವರನ್ನು ನೇಮಕ ಮಾಡಿದೆ.

K Ratna Prabha appointed chief secretary to government of Karnataka

ಇನ್ನು 1983ರ ಬ್ಯಾಚ್ ನ ಐಎಎಸ್ ಅಧಿಕಾರಿ T.M ವಿಜಯ್ ಭಾಸ್ಕರ್ ಅವರನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಮುಖ್ಯಕಾರ್ಯದರ್ಶಿ ರೇಸ್‍ ನಲ್ಲಿ ಪಟ್ಟನಾಯಕ್, ವಿಜಯಭಾಸ್ಕರ್ ಅವರ ಹೆಸರುಗಳು ಕೇಳಿಬಂದಿದ್ದವು.

ರತ್ನಪ್ರಭಾ ಮುಖ್ಯಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರಿಂದ ಎರಡು ಪ್ರಬಲ ಹುದ್ದೆಗಳು ಮಹಿಳಾ ಮಣಿಗಳಿಗೆ ದಕ್ಕಿದಂತಾಗಿದೆ. ಈಗಾಗಲೇ ಪೊಲೀಸ್ ಇಲಾಖೆಯ ಮಹಾನಿರ್ದೇಶಕರಾಗಿ ನೀಲಮಣಿ ರಾಜು ನೇಮಕವಾಗಿದ್ದಾರೆ.

ಇದರ ಜತೆಗೆ ರತ್ನಪ್ರಭಾ ಅವರನ್ನು ಮುಖ್ಯಕಾರ್ಯದರ್ಶಿಯಾಗಿ ಸರ್ಕಾರ ನೇಮಕಗೊಳಿಸಿದೆ. ಇದರಿಂದ ರಾಜ್ಯದ ಮೂರನೇ ಮಹಿಳಾ ಮುಖ್ಯಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.

ಕಳೆದ 2000ರಲ್ಲಿ ತೆರೆಸಾ ಭಟ್ಟಾಚಾರ, 2006ರಲ್ಲಿ ಮಾಲತಿದಾಸ್ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

English summary
The Karnataka government appointed senior IAS officer K Ratna Prabha has a chief secretary of state government on November 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X