ಲೋಕಾಯುಕ್ತ ಹುದ್ದೆ ಬೇಡವೆಂದು ಪತ್ರ ಬರೆದ ವಿಕ್ರಂಜಿತ್ ಸೇನ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 08 : ಕರ್ನಾಟಕದ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರು ನೇಮಕಗೊಳ್ಳುವ ಸಾಧ್ಯತೆ ಇದೆ. ನೂತನ ಲೋಕಾಯುಕ್ತ ನೇಮಕದ ಕುರಿತು ಸರ್ಕಾರ ಕಡತ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ರಾಜ್ಯಪಾಲರಿಗೆ ಕಳುಹಿಸಲಿದೆ.

ನ್ಯಾ.ಎಸ್.ಆರ್‌.ನಾಯಕ್ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾ.ವಿಕ್ರಂಜಿತ್ ಸೇನ್ ಅವರ ಹೆಸರುಗಳು ಲೋಕಾಯುಕ್ತ ಹುದ್ದೆಗೆ ಕೇಳಿಬರುತ್ತಿದ್ದವು. ವಿಕ್ರಂಜಿತ್ ಸೇನ್ ಅವರು ಲೋಕಾಯುಕ್ತರಾಗಲು ಆಸಕ್ತಿ ಹೊಂದಿಲ್ಲ ಎಂದು ಕಾನೂನು ಇಲಾಖೆಗೆ ಪತ್ರ ಬರೆದಿದ್ದಾರೆ. ಆದ್ದರಿಂದ, ಎಸ್.ಆರ್.ನಾಯಕ್ ಆಯ್ಕೆಯಾಗುವ ಸಾಧ್ಯತೆ ಇದೆ. [ಲೋಕಾಯುಕ್ತ ಹುದ್ದೆಗೆ ಕನ್ನಡಿಗರನ್ನು ನೇಮಿಸಿ]

vikramjit singh

ಜನವರಿ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷದ ನಾಯಕರು ವಿಕ್ರಂಜಿತ್ ಸೇನ್ ಅವರನ್ನು ನೇಮಕಮಾಡಬಹುದು ಎಂದು ಸಲಹೆ ನೀಡಿದ್ದರು. ಆದರೆ, ವಿಕ್ರಂಜಿತ್ ಸೇನ್ ಅವರು ಕಾನೂನು ಇಲಾಖೆಗೆ ಪತ್ರ ಬರೆದು ಲೋಕಾಯುಕ್ತರಾಗಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]

ಬೆಂಗಳೂರು ವಕೀಲರ ಸಂಘದ ಸದಸ್ಯರು ವಿಕ್ರಂಜಿತ್ ಸೇನ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸುವುದು ಬೇಡ. ಕನ್ನಡಿಗರನ್ನು ನೇಮಿಸಿ ಎಂದು ಸಹಿ ಸಂಗ್ರಹಣೆ ಮಾಡಿದ್ದಾರೆ. ವಿಕ್ರಂಜಿತ್ ಸೇನ್ ಅವರು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿದ್ದಾಗ, ಜಿಲ್ಲೆಗಳಿಗೆ ಭೇಟಿ ಕೊಟ್ಟಿಲ್ಲ, ಸಿಟಿ ಸಿವಿಲ್ ಕೋರ್ಟ್ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

ನ್ಯಾ.ಎಸ್.ಆರ್‌.ನಾಯಕ್ ಅವರ ನೇಮಕದ ಬಗ್ಗೆಯೂ ಅಪಸ್ವರವಿದೆ. ಆದ್ದರಿಂದ, ಸರ್ಕಾರ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ. ಎಸ್‌.ಆರ್.ನಾಯಕ್ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government of Karnataka is likely to appoint Justice S.R.Nayak as the new Lokayukta of Karnataka. His name has been in the running since December 2015.
Please Wait while comments are loading...