ನ್ಯಾ. ಅಂಜಾರಿಯಾ ಕರ್ನಾಟಕ ಹೈಕೋರ್ಟ್‌ನ ಹೊಸ ಸಿಜೆ

ಬೆಂಗಳೂರು, ಫೆಬ್ರವರಿ 08: ಗುಜರಾತ್‌ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್‌. ವಿ. ಅಂಜಾರಿಯಾ ಕರ್ನಾಟಕ ಹೈಕೋರ್ಟ್‌ನ ಹೊಸ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಪ್ರಸ್ತುತ ಪಿ. ಎಸ್. ದಿನೇಶ್ ಕುಮಾರ್ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿರುವ ಕನ್ನಡಿಗರೇ ಆದ ಪಿ. ಎಸ್‌. ದಿನೇಶ್‌ ಕುಮಾರ್‌ ಫೆಬ್ರವರಿ 24ಕ್ಕೆ ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ನ್ಯಾಯಮೂರ್ತಿ ಎನ್‌. ವಿ. ಅಂಜಾರಿಯಾ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ.

Justice NV Anjaria New Chief Justice Of Karnataka High Court

ನ್ಯಾಯಮೂರ್ತಿ ಎನ್‌. ವಿ. ಅಂಜಾರಿಯಾ ಅವರನ್ನು ನೇಮಿಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ನೇತೃತ್ವದಲ್ಲಿ ಬುಧವಾರ ನಡೆದ ಕೊಲಿಜಿಯಂ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.

ಕೊಲಿಜಿಯಂ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುತ್ತದೆ. ಕಾನೂನು ಸಚಿವಾಲಯ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ಬಳಿಕ ನೇಮಕಾತಿ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದೆ.

'ನ್ಯಾಯಮೂರ್ತಿಯಾಗಿ ಅಂಜಾರಿಯಾ ಉತ್ತಮ ರೀತಿಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಅವರು, ಎಲ್ಲಾ ರೀತಿಯಲ್ಲೂ ಕರ್ನಾಟಕ ಹೈಕೋರ್ಟ್‌ ಸಿಜೆ ಸ್ಥಾನ ಅಲಂಕರಿಸಲು ಅರ್ಹರಾಗಿದ್ದಾರೆ. ಹಾಗಾಗಿ ಅವರ ಹೆಸರನ್ನು ಕರ್ನಾಟಕ ಹೈಕೋರ್ಟ್‌ ಸಿಜೆ ಸ್ಥಾನಕ್ಕೆ ಶಿಫಾರಸು ಮಾಡಲಾಗುತ್ತಿದೆ ' ಎಂದು ಕೊಲಿಜಿಯಂ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿಗಳ ಹಿನ್ನೆಲೆ: 1965ರ ಮಾರ್ಚ್ 23ರಂದು ಅಹಮದಾಬಾದ್‌ನಲ್ಲಿ ಜನಿಸಿದ ಅಂಜಾರಿಯಾ 1988ರಲ್ಲಿ ಎ.ಎ. ಶಾ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದರು. ಆನಂತರ ವಕೀಲಿಕೆ ವೃತ್ತಿ ಕೈಗೊಂಡು ಸಿವಿಲ್‌, ಸಾಂವಿಧಾನಿಕ, ಕಂಪನಿ, ಕಾಮ್ಕಿ ಮತ್ತು ಸೇವಾ ವಿಷಯಗಳ ವ್ಯಾಜ್ಯಗಳನ್ನು ಮುನ್ನಡೆಸಿದ ಅನುಭವ ಸಂಪಾದಿಸಿದ್ದಾರೆ.

ಅದಕ್ಕೂ ಮುನ್ನ ಅವರು ಗುಜರಾತ್‌ ಹೈಕೋರ್ಟ್‌ನಲ್ಲಿ ಸಿವಿಲ್‌ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. 2011ರ ನವೆಂಬರ್ 21ರಿಂದ ಎನ್‌. ವಿ. ಅಂಜಾರಿಯಾ ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಫೆಬ್ರವರಿ 3ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿ. ಎಸ್‌. ದಿನೇಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದ್ದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+