ಉ.ಕರ್ನಾಟಕಕ್ಕೆ ಚಾಚಿದ ಮುಂಗಾರು, ಬೀದರ್, ಕಲಬುರಗಿ ಮಳೆ

ಬೆಂಗಳೂರು, ಜೂನ್ 22: ಕರಾವಳಿಯಲ್ಲಿ ಎಂದಿಗಿಂತ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಜಾಗರೂಕರಾಗಿರುವಂತೆ ಹವಾಂಆನ ಇಲಾಖೆ ಸೂಚಿಸಿದೆ.

ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕರ್ನಾಟಕಗಳಲ್ಲಿ ಇಂದು ಹೆಚ್ಚಿನ ಮಳೆ ಆಗಲಿದ್ದು, ಇದೇ ಪರಿಸ್ಥಿತಿ ಇನ್ನೂ ಮೂರು ದಿನಗಳ ವರೆಗೆ ಮುಂದುವರೆಯಲಿದೆ.

June 22 Monsoon updates of Karnataka

ಮುಂಗಾರು ಮಾರುತಗಳು ಮತ್ತೆ ಚುರುಕಾಗುವ ಮುನ್ಸೂಚನೆ ಇದ್ದು, ಬೀದರ್, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳೂ ಸಹ ಇಂದು ಮಳೆಯ ಪಸೆ ಕಾಣಲಿವೆ. ಇಲ್ಲಿ ಗಾಳಿ ಸಹಿತ ಅಲ್ಪ ಮಳೆಯಾಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು, ಹಾಸನ, ಕೊಡಗೂ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆಯಾಗಲಿದ್ದು, ಗುಡುಗು-ಮಿಂಚು ದರ್ಶನವಾಗಲಿದೆ. ಇಲ್ಲೂ ಸಹ ಕಳೆದ ಮೂರು ದಿನಗಳಿಂದ ಮಳೆ ಆಗುತ್ತಲಿದ್ದು ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ.

ಬೆಂಗಳೂರು ನಗರದಲ್ಲಿ ನಿನ್ನೆಯಂತೆ ಭಾಗಷಃ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಪ ಪ್ರಮಾಣದಲ್ಲಿ ಮಳೆಯ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಇನ್ನೂ 2 ದಿನ ಮುಂದುವರೆಯಲಿದೆ. ಜೂನ್ 24ರ ನಂತರ ಮಳೆ ಜೋರಾಗುವ ಸಂಭವವಿದೆ.

ನೈಋತ್ಯ ಮುಂಗಾರು ಮಾರುತ ಉತ್ತರ ಭಾರತದೆಡೆ ಚಲಿಸುತ್ತಿದ್ದು, ಭಾರತದ ಮಧ್ಯ ಭಾಗವನ್ನು ಸಂಪೂರ್ಣ ಆವರಿಸಿಕೊಳ್ಳುವ ಸಾಧ್ಯತೆ ಇದೆ. ಅಸ್ಸಾಂ, ಮಹಾರಾಷ್ಟ್ರದ ಕೆಲವು ಭಾಗ, ಒಡಿಸ್ಸಾ, ಪಶ್ಚಿಮ ಬಂಗಾಳಗಳಲ್ಲಿ ಈಗಾಗಲೇ ಮಳೆ ಆಗುತ್ತಿದೆ.

ಜೂನ್ 23ರ ನಂತರ ಜೊತೆಗೆ ಗುಜರಾತ್‌ನ ಕೆಲವು ಭಾಗ, ರಾಜಸ್ಥಾನ, ಬಿಹಾರ, ಜಾರ್ಖಂಡ್, ಉತ್ತರ ಮಧ್ಯ ಪ್ರದೇಶದಲ್ಲಿ ಜೂನ್ 23ರಿಂದ ಮುಂಗಾರು ಚುರುಕು ಪಡೆದುಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+