ಮಾಧ್ಯಮ ನಿಯಂತ್ರದ ಮೊದಲ ಹೆಜ್ಜೆ, ವಿಧಾನಸೌಧಕ್ಕೆ ವಾಹನ ಎಂಟ್ರಿ ಬಂದ್

ಬೆಂಗಳೂರು, ಜುಲೈ 26: ಮಾಧ್ಯಮಗಳ ಮೇಲೆ ಪರೋಕ್ಷವಾಗಿ ನಿಯಂತ್ರಣ ಹೇರಲು ಮುಂದಾಗಿರುವ ಕುಮಾರಸ್ವಾಮಿ ಅದರ ಮೊದಲ ಹೆಜ್ಜೆಯಾಗಿ ಇಂದು ಮಾಧ್ಯಮದವರ ವಾಹನಗಳು ವಿಧಾನಸೌಧ ಗೇಟ್ ಪ್ರವೇಶಿಸಲು ನಿರ್ಬಂಧಿಸಿದ್ದಾರೆ.

ವಿಧಾನಸೌಧದ ಒಳಗೆ ಮಾಧ್ಯಮದವರ ನಿಯಂತ್ರಣದ ಬಗ್ಗೆ ಮೊನ್ನೆಯಷ್ಟೆ ಮಾತನಾಡಿದ್ದ ಕುಮಾರಸ್ವಾಮಿ, ನಿಗದಿತ ಸಮಯದಲ್ಲಿ ಮಾತ್ರವೇ ಮಾಧ್ಯಮದವರು ವಿಧಾನಸೌದದ ಒಳಗೆ ಪ್ರವೇಶಿಸುವಂತೆ ನಿಯಮ ರೂಪಿಸಲಾಗುವುದು ಎಂದಿದ್ದರು.

ಅದರಂತೆ ಇಂದು ಮಾಧ್ಯಮದವರ ವಾಹನಗಳನ್ನು ವಿಧಾನಸೌಧದ ಗೇಟ್‌ ಒಳಗೆ ಬಿಡಲಿಲ್ಲ, ಗೇಟ್‌ನ ಹೊರಗಡೆಯೇ ವಾಹನಗಳನ್ನು ನಿಲ್ಲಿಸಿ ಒಳಕ್ಕೆ ನಡೆದುಕೊಂಡು ಹೋಗಬೇಕಾಯಿತು. ಸಾರ್ವಜನಿಕರ ವಾಹನಗಳಿಗೂ ಇದೇ ಪರಿಸ್ಥಿತಿ ಎದುರಾಯಿತು.

Journalists vehicles stopped front of Vidhan souda gate

ಸರ್ಕಾರಿ ವಾಹನಗಳು ಮತ್ತು ವಕೀಲರ ವಾಹನಗಳನ್ನು ಮಾತ್ರವೇ ವಿಧಾನಸೌಧದ ಗೇಟ್‌ನ ಒಳಕ್ಕೆ ಬಿಡಲಾಯಿತು. ಇದರಿಂದ ಕೆಲ ಕಾಲ ಮಾಧ್ಯಮದವರೂ ಹಾಗೂ ಅಲ್ಲಿನ ಪೊಲೀಸರ ನಡುವೆ ವಾಕ್ಸಮರ ಕೂಡಾ ನಡೆಯಿತು.

ಇತ್ತೀಚೆಗೆ ಬಹಿರಂಗವಾಗಿ ಮಾಧ್ಯಮಗಳ ಮೇಲೆ ಅಸಮಾಧಾನ ಹೊರಹಾಕಿದ್ದ ಸಿಎಂ ಅವರು, ಮುಯ್ಯಿ ತೀರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರಾ ಎಂಬ ಅನುಮಾನ ಇಂದಿನ ಘಟನೆಯಿಂದ ಎದ್ದಿದೆ. ಅಲ್ಲದೆ ಮೊನ್ನೆಯಷ್ಟೆ ವಿಧಾನಸೌಧದಲ್ಲಿ ಕಾರ್ಯದರ್ಶಿ ಎಸ್.ಮೂರ್ತಿ ಅವರ ಹುಟ್ಟುಹಬ್ಬ ಆಚರಣೆ ಮಾಡಿದ್ದ ಮಾಧ್ಯಮಗಳಲ್ಲಿ ಪ್ರಸಾರವಾದ ಕಾರಣ ವಿಧಾನಸೌಧದ ಅಧಿಕಾರಿಗಳೂ ಸಹ ಮಾಧ್ಯಮದವರನ್ನು ವಿಧಾನಸೌಧದಿಂದ ಹೊರಗಿಡಲು ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+