ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಕ್ಕಲಿಗರ ಭವನದಲ್ಲಿ ಜೆಡಿಎಸ್ ತಾತ್ಕಾಲಿಕ ಕಚೇರಿ

|
Google Oneindia Kannada News

ಬೆಂಗಳೂರು, ಫೆ.5 : ಬೆಂಗಳೂರಿನ ಒಕ್ಕಲಿಗರ ಭವನದಲ್ಲಿ ತಾತ್ಕಾಲಿಕವಾಗಿ ಜೆಡಿಎಸ್‌ ಕಚೇರಿಯನ್ನು ಆರಂಭಿಸಲು ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆರು ತಿಂಗಳ ಕಾಲ ಜೆಡಿಎಸ್ ಇಲ್ಲಿ ಕಚೇರಿಯನ್ನು ಹೊಂದಿರುತ್ತದೆ.

ಬುಧವಾರ ಸಂಜೆ ನಡೆದ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದ 28 ನಿರ್ದೇಶಕರ ಪೈಕಿ 15 ನಿರ್ದೇಶಕರು ಜೆಡಿಎಸ್ ಕಚೇರಿಗೆ ಸ್ಥಳಾವಕಾಶ ನೀಡಲು ಒಪ್ಪಿಗೆ ನೀಡಿದ್ದಾರೆ. ಮಾರುಕಟ್ಟೆಯ ದರದಂತೆ ಜೆಡಿಎಸ್ ಬಾಡಿಗೆ ನೀಡಬೇಕಾಗಿದೆ. [ಒಕ್ಕಲಿಗ ಭವನದಲ್ಲಿ ಜೆಡಿಎಸ್ ಕಚೇರಿ ಆರಂಭ?]

jds

ಸಭೆಯ ಬಳಿಕ ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸುಪ್ರೀಂಕೋರ್ಟ್‌ ಆದೇಶದಂತೆ ರೇಸ್ ಕೋರ್ಸ್ ಕಚೇರಿ ಬಿಟ್ಟು ಕೊಡಬೇಕಿದೆ. ಪರ್ಯಾಯ ವ್ಯವಸ್ಥೆ ಆಗುವ ತನಕ ಜಾಗ ನೀಡುವಂತೆ ದೇವೇಗೌಡರು ಮನವಿ ಸಲ್ಲಿಸಿದ್ದರು, ಅದರ ಅನ್ವಯ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಹಡ್ಸನ್ ವೃತ್ತದ ಬಳಿಯ ಒಕ್ಕಲಿಗರ ಭವನದ ನಾಲ್ಕನೇ ಮಹಡಿಯಲ್ಲಿ 4 ಸಾವಿರ ಚದರ ಅಡಿ ಜಾಗ ಒಂದೂವರೆ ವರ್ಷದಿಂದ ಖಾಲಿ ಇದೆ. ಇದನ್ನು ಆರು ತಿಂಗಳ ಮಟ್ಟಿಗೆ ಜೆಡಿಎಸ್‌ ಪಕ್ಷದ ಕಚೇರಿಗೆ ನೀಡಲಾಗುತ್ತದೆ. ಮಾರುಕಟ್ಟೆ ದರದ ಅನ್ವಯ ಪಕ್ಷದಿಂದ ಬಾಡಿಗೆ ಸಂಗ್ರಹಿಸಲಾಗುತ್ತದೆ ಎಂದರು. [ಜೆಡಿಎಸ್ ಕಾನೂನು ಹೋರಾಟ ಅಂತ್ಯ]

ನಿರ್ದೇಶಕರ ಅಸಮಾಧಾನ : ಒಕ್ಕಲಿಗರ ಸಂಘ ಒಂದು ಜನಾಂಗವನ್ನು ಪ್ರತಿನಿಧಿಸುವ ಸಂಸ್ಥೆ. ಅದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಸಮಾಜದ ಉದ್ಧಾರಕ್ಕಾಗಿ ಸಂಘವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಪಕ್ಷದ ಕಚೇರಿ ತೆರೆಯಲು ಅವಕಾಶ ನೀಡಬಾರದು ಎಂಬುದು ಕೆಲವು ನಿರ್ದೇಶಕರ ವಾದ.

ಸಂಘದ ನಿರ್ದೇಶಕರಾದ ಪ್ರೊ ಎಂ.ನಾಗರಾಜು ಮತ್ತು ಎ.ಪ್ರಸಾದ್‌ ಸೇರಿದಂತೆ 15 ಮಂದಿ ಅಪ್ಪಾಜಿ ಗೌಡರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದು ನಡಾವಳಿ ಪುಸ್ತಕದಲ್ಲಿ ಬರೆದು­ಕೊಂಡು ಸುಳ್ಳು ಹೇಳಲಾಗುತ್ತಿದೆ ಎಂದು ನಿರ್ದೇಶಕರು ದೂರಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ಕಾಂಗ್ರೆಸ್‌ ಪಕ್ಷಕ್ಕೆ ರೇಸ್‌ ಕೋರ್ಸ್ ರಸ್ತೆಯಲ್ಲಿರುವ ಕಚೇರಿಯನ್ನು ಜೆಡಿಎಸ್ ಬಿಟ್ಟು ಕೊಡಬೇಕಿದೆ. ಬೆಂಗಳೂರಿನಲ್ಲಿ ಕಚೇರಿಗಾಗಿ ಜಾಗ ಹುಡುಕುತ್ತಿದ್ದ ಜೆಡಿಎಸ್ ಪಕ್ಷಕ್ಕೆ ಒಕ್ಕಲಿಗ ಭವನದಲ್ಲಿ ತಾತ್ಕಾಲಿಕವಾಗಿ ಜಾಗ ಸಿಕ್ಕಿದೆ.

English summary
Janata Dal Secular(JDS) get temporary office for rent in Vokkaligara Bhavana near Corporation circle, Bengaluru. Party to vacate its old office on Race Course Road following a Supreme Court judgment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X