ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಜಮೀರ್ ಅಹಮದ್ ಕನ್ನಡ ಭಾಷಣಕ್ಕೆ ಗಹಗಹಿಸಿ ನಕ್ಕ ನಾಗಮಂಗಲ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಜಮೀರ್ ಅಹಮದ್ ಖಾನ್ ಕನ್ನಡದ ಭಾಷಣಕ್ಕೆ ಗಹ ಗಹಿಸಿ ನಕ್ಕ ಜನರು | Oneindia Kannada

    ಮಂಡ್ಯ, ನ 21: ಜೆಡಿಎಸ್ ಭಿನ್ನಮತೀಯ ಶಾಸಕ, ಚಾಮರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುವ ಜಮೀರ್ ಅಹಮದ್ ಖಾನ್ ಅವರನ್ನು ಕಾಂಗ್ರೆಸ್ ಒಳಗೆ ಬಿಟ್ಟುಕೊಳ್ಳುತ್ತೋ ಇಲ್ಲವೋ, ಜಮೀರ್ ಮಾತ್ರ ಹೋದಲೆಲ್ಲಾ, ಸಿದ್ದರಾಮಯ್ಯನವರನ್ನು ಹೊಗಳಿದ್ದೇ ಹೊಗಳಿದ್ದು.

    ಚಾಮರಾಜಪೇಟೆಯಲ್ಲಿ ಜಮೀರ್ ಚಾಯ್ ಪೇ ಚರ್ಚಾ!

    ಹೊಗಳಲಿ.. ಅದು ಅವರವರ ವೈಯಕ್ತಿಕ ಪಕ್ಷ ಅಥವಾ ವ್ಯಕ್ತಿನಿಷ್ಠೆಯ ವಿಚಾರ. ಆದರೆ, ಜಮೀರ್ ಭಾಯ್.. ಕನ್ನಡದಲ್ಲಿ ಮಾಡಿದ ಭಾಷಣ ಕೇಳಿ.. ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ .. ಅವರಿಗೊಂದು 'ಉಮ್ಮಾ..' ಕೊಡೋಣ ಅಂದೆನಿಸಿದರೆ ತಪ್ಪಿಲ್ಲಾ..

    JDS rebel MLA Zameer Ahmed Khan, wrongly pronounced Ksheera bhagya Plan

    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ, ಕೆಂಪೇಗೌಡ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಜಮೀರ್, ನಮ್ಮ ಮುಖ್ಯಮಂತ್ರಿಗಳು ಮಾಡಿದ ಒಳ್ಳೆ ಕೆಲಸ ಒಂದಾ..ಎರಡಾ.. ಅನ್ನಭಾಗ್ಯ, ಶೀಲಭಾಗ್ಯ, ಶೂಭಾಗ್ಯ ಇರಲಿ..ಹೀಗೆ ಬಹಳಷ್ಟು ಒಳ್ಳೆ ಕೆಲಸವನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ಜಮೀರ್ ಹೊಗಳಿದ್ದಾರೆ.

    ಜಮೀರ್ ಗೆ ಎಚ್ಚರಿಕೆ ಕೊಟ್ಟ ದೇವೇಗೌಡರ ಮಾನಸ ಪುತ್ರ

    ವೇದಿಕೆಯಲ್ಲಿದ್ದ ಮುಖಂಡರಿಗೆ ಮತ್ತು ನೆರೆದಿದ್ದವರಿಗೆ, ಇದ್ಯಾವುದು 'ಶೀಲ ಭಾಗ್ಯ' ನಮಗೆ ಗೊತ್ತಿಲ್ಲದ ಹೊಸಭಾಗ್ಯ ಎಂದು ತಲೆಕೆಡಿಸಿಕೊಂಡಾಗ, "ಕ್ಷೀರ ಭಾಗ್ಯ" ಅನ್ನುವ ಬದಲು ಜಮೀರ್, ಶೀಲ ಭಾಗ್ಯ ಎಂದು ಉಚ್ಚಾರಣೆಯಲ್ಲಿ ತಪ್ಪು ಮಾಡಿದ್ದಾರೆ ಎಂದು ಗೊತ್ತಾಗಿದ್ದು..

    ಇಷ್ಟೂ ಸಾಲದು ಅನ್ನುವಂತೆ, ಜಮೀರ್ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಸಾಹೇಬ್ರು, ಅನ್ನೋ ಬದಲು, "ನಮ್ಮ ಸಿದ್ದರಾಮಯ್ಯ ಸಾಬ್ರು, ನಾವು ಮುಸ್ಲಿಮರು ಸರಕಾರಕ್ಕೆ ಅರ್ಜಿ ಹಾಕಿಲ್ಲಾ.. ನಾವು ಕೇಳಿಲ್ಲಾಂದ್ರಾನೂ ಟಿಪ್ಪುಜಯಂತಿ ಆಚರಿಸಿದ್ದಾರೆ" ಎಂದು ಮುಖ್ಯಮಂತ್ರಿಗಳನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

    ತಾಕತ್ತಿದ್ದರೆ ರೇವಣ್ಣ ನನ್ನೆದುರು ಸ್ಪರ್ಧಿಸಲಿ : ಜಮೀರ್ ಅಹಮದ್ ಸವಾಲ್

    ಕೆಲವೊಂದು ಪದಗಳು ಏನೇನು ಅರ್ಥ ನೀಡುತ್ತದೆ ಅನ್ನುವುದನ್ನು ಅರಿಯದ ಜಮೀರ್, ಸಿದ್ದರಾಮಯ್ಯ ನನ್ನ ಗುರುಗಳು, ನಾನು ಮತ್ತು ಚೆಲುವಣ್ಣ (ಚೆಲುವರಾಯಸ್ವಾಮಿ) ಸ್ವಂತ ಅಣ್ಣ ತಮ್ಮಂದಿರಂತೆ ಎನ್ನುವ ಡೈಲಾಗನ್ನೂ ಹೊಡೆದಿದ್ದಾರೆ..

    ಮತ್ತೆ ಮತ್ತೆ ತಮ್ಮ ಭಾಷಣದಲ್ಲಿ 'ಶೀಲಭಾಗ್ಯ' ಎಂದು ಜಮೀರ್ ಹೇಳುತ್ತಿದ್ದಾಗಲೆಲ್ಲಾ.. ವಿಷಲ್ ಹೊಡೆಯುತ್ತಿದ್ದ ಜನಗಳನ್ನು ನೋಡಿ.. ಜಮೀರ್ ತಮ್ಮ ಭಾಷಣಕ್ಕೆ ಈ ಮಟ್ಟಿನ ರೆಸ್ಪಾನ್ಸ್ ಸಿಗುತ್ತಿದೆ ಅಂದು ಅಪಾರ್ಥ್ ಮಾಡಿಕೊಂಡ್ರೋ ಏನೋ?

    ಭಾಷಣ ಮುಗಿಸಿ, ಖುರ್ಚಿಯಲ್ಲಿ ಕೂತಾಗ, ವೇದಿಕೆಯಲ್ಲಿ ಇದ್ದವರು.. ಮೆತ್ತಗೆ.., "ವೋ ಆಕೋ.. ಶೀಲ ಭಾಗ್ಯ ನಹೀ.. ಕ್ಷೀರ ಭಾಗ್ಯ", " ಸಿದ್ದರಾಮಯ್ಯ ಸಾಬ್ರು ಅಲ್ಲ.. ಸಿದ್ದರಾಮಯ್ಯ ಸಾಹೇಬ್ರು" ಅಂದು ತಿದ್ದಿದಾಗಲೇ ಜಮೀರ್ ಭಾಯ್ ಗೆ ತಾನು ಮಾಡಿದ ಎಡವಟ್ಟಿನ ಅರ್ಥವಾಗಿದ್ದು..

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    JDS rebel MLA from Chamarajpet (Bengaluru) Zameer Ahmed Khan, wrongly pronounced Ksheera bhagya Plan. In a speech in Nagamangala Taluk in Mandya district, Zameer, instead of pronounce Ksheera Bhagya, he said Sheela Bhagya.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more