ಸಿಎಂ ಸಿದ್ದು ಭೇಟಿ ಮಾಡಿದ ಜಮೀರ್ ಹೇಳಿದ್ದೇನು?

Subscribe to Oneindia Kannada

ಬೆಂಗಳೂರು, ಡಿಸೆಂಬರ್, 05: ಜೆಡಿಎಸ್ ಶಾಸಕ ಜಮೀರ್ ಅಹಮದ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿದ್ದಾರೆ. ಇದು ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ವಿಧಾನಪರಿಷತ್ ಚುನಾವಣೆ ಸಂಬಂಧ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾತುಕತೆಗೆ ಮುಂದಾಗಿ ನಂತರ ಮುಖ್ಯಮಂತ್ರಿ ಬಳಿ ಸಾರಿ ಕೇಳಿದ್ದ ಜಮೀರ್ ಇದೀಗ ಸಿಎಂ ಭೇಟಿ ಮಾಡಿರುವುದು ಜೆಡಿಎಸ್ ಪಾಳೆಯದಲ್ಲಿ ಕೊಂಚ ತಲ್ಲಣ ಸೃಷ್ಟಿ ಮಾಡಿರುವುದೆಂತೂ ನಿಜ.[ಭಿನ್ನ ಮತ ಮರೆತ ಜೆಡಿಎಸ್ ನಾಯಕರು]

jds

ಮುಖ್ಯಮಂತ್ರಿಗೆ ಭೇಟಿಗೆ ತೆರಳಿ ಹೊರಬಂದ ಜಮೀರ್ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಆಚರಿಸಲಿರುವ ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಅವರಿಗೆ ಆಹ್ವಾನ ನೀಡಲು ಬಂದಿದ್ದೆ. ಪ್ರತಿ ವರ್ಷವೂ ಅವರು ನಮ್ಮ ಕಾರ್ಯಕ್ರಮಕ್ಕೆ ಬರುತ್ತಾರೆ. ಈ ಬಾರಿಯೂ ಅದೇ ರೀತಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.[ಐ ಯಾಮ್ ಸಾರಿ ಎಂದ ಜಮೀರ್ ಅಹಮದ್ ಖಾನ್!]

ಜೆಡಿಎಸ್ ಭಿನ್ನಮತ ಶಮನಕ್ಕೆ ಎಚ್ ಡಿ ಕುಮಾರಸ್ವಾಮಿ ಮಾಗಡಿಯಲ್ಲಿ ಸಮಾವೇಶ ನಡೆಸಿದ್ದರು. ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಸಹ ಅಂದು ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ವೇಳೆ ಬಾಲಕೃಷ್ಣ, ಜಮೀರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಆದರೆ ಇದೀಗ ಮತ್ತೆ ಜಮೀರ್ ಸಿಎಂ ಅವರನ್ನು ಭೇಟಿ ಮಾಡಿದ್ದು ಹೊಸ ಸಂಚಲನಕ್ಕೆ ಕಾರಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajpet JD(S) MLA Zameer Ahmed Khan met Chief Minister Siddaramaiah on Saturday, December 05.
Please Wait while comments are loading...