ಚಿತ್ರಗಳು : ಸಿದ್ದರಾಮಯ್ಯ ಜೊತೆ ಮುದ್ದೆ ಸವಿದ ಜಮೀರ್!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 20 : ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮುದ್ದೆ ಸವಿದಿದ್ದಾರೆ. ಪಕ್ಷದ ಸಭೆ, ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ನಾಯಕರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಜಮೀರ್ ಅಹಮದ್ ಖಾನ್ ರಾಗಿ ಮುದ್ದೆ ಸವಿಯುವ ಫೋಟೋಗಳು ಫೇಸ್‌ಬುಕ್‌ನಲ್ಲಿವೆ. ಜಮೀರ್ ಅಹಮದ್ ಖಾನ್ ಅವರ B.Z Zameer Ahmed Khan ಫೇಸ್‌ಬುಕ್ ಖಾತೆಯಲ್ಲಿ 9 ಗಂಟೆಗಳ ಹಿಂದೆ ಈ ಪೋಟೋಗಳು ಅಪ್‌ಲೋಡ್ ಆಗಿವೆ. ['ಜೆಡಿಎಸ್ ಪಕ್ಷ ತಾಯಿ ಇದ್ದಂತೆ, ತಾಯಿ ಮರೆತರೆ ಅನ್ನ ಸಿಗುವುದಿಲ್ಲ']

zameer ahmed khan

ಮಂಗಳವಾರ ರಾತ್ರಿ ಜಮೀರ್ ಅಹಮದ್ ಖಾನ್ ಮತ್ತು ಸಿದ್ದರಾಮಯ್ಯ ಅವರು ಒಟ್ಟಿಗೆ ರಾಗಿ ಮುದ್ದೆ ಸವಿದಿರುವ ಸಾಧ್ಯತೆ ಇದೆ. Delight to have Dinner with Honourable Chief Minister of Karnataka Sri Siddaramaiah ಎಂದು ಬರೆದು 19 ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕಲಾಗಿದೆ. [ಸದ್ಯಕ್ಕೆ ಜಮೀರ್ ಉಚ್ಛಾಟನೆ ಮಾಡುವುದಿಲ್ಲ]

-
-
-
-

ಜಮೀರ್ ಅಹಮದ್ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕಿಕೊಂಡು ಬರುತ್ತಿರುವುದು, ಇಬ್ಬರು ಒಟ್ಟಿಗೆ ಮುದ್ದೆ ಸವಿಯುತ್ತಿರುವುದು, ಮಾತನಾಡುತ್ತಿರುವ ಫೋಟೋಗಳು ಜಮೀರ್ ಫೇಸ್‌ಬುಕ್ ಖಾತೆಯಲ್ಲಿವೆ. ಊಟದ ಜೊತೆ ರಾಜಕೀಯ ಚರ್ಚೆ ನಡೆಯಿತಾ?, ಜಮೀರ್ ಕಾಂಗ್ರೆಸ್ ಸೇರುತ್ತಾರಾ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. [ಜಮೀರ್ ಉಲ್ಟಾ ಹೊಡೆಯಲು ಕಾರಣ ಹೀಗೂ ಇರಬಹುದೇ?]

ಅಂದಹಾಗೆ ಕಳೆದ ಶನಿವಾರ ಮೈಸೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಜಮೀರ್ ಅಹಮದ್ ಖಾನ್ ಗೈರು ಹಾಜರಾಗಿದ್ದರು. ಶಾಸಕರ ಗೈರು ಹಾಜರಿಯನ್ನು ಸಮರ್ಥಿಸಿಕೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಪೂರ್ವಾನುಮತಿ ಪಡೆದು ಗೈರುಹಾಜರಾಗಿರುವುದಾಗಿ ಹೇಳಿದ್ದರು.

-
-
-
-

ಜೆಡಿಎಸ್ ಪಕ್ಷ ತಾಯಿ ಇದ್ದಂತೆ : ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆಗ ಪ್ರತಿಕ್ರಿಯೆ ಕೊಟ್ಟಿದ್ದ ಅವರು, 'ಜೆಡಿಎಸ್ ಪಕ್ಷ ತಮಗೆ ತಾಯಿ ಇದ್ದಂತೆ, ತಾಯಿಯನ್ನು ಮರೆತರೆ ಅನ್ನ ಸಿಗುವುದಿಲ್ಲ. ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ' ಎಂದು ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajpet JDS MLA Zameer Ahmed Khan on Facebook page shared photos of dinner with Chief Minister Siddaramaiah. Zameer Ahmed Khan on April 15th not participate in the party meeting held on Mysuru.
Please Wait while comments are loading...