ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ವಿರುದ್ಧ ಗುಡುಗಿದ ಜಮೀರ್, ಚೆಲುವರಾಯಸ್ವಾಮಿ

|
Google Oneindia Kannada News

ಬೆಂಗಳೂರು, ಫೆ.3 : ಜೆಡಿಎಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶಾಸಕರಾದ ಜಮೀರ್ ಅಹಮದ್ ಖಾನ್ ಮತ್ತು ಚೆಲುವರಾಯ ಸ್ವಾಮಿ ಅವರು ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇಪದೇ ಪಕ್ಷ ಬಿಡಿ ಎಂಬ ಹೇಳಿಕೆ ನೀಡುತ್ತಿದ್ದರೆ ನಮ್ಮ ದಾರಿ ನಮಗೆ ಎಂಬ ಸಂದೇಶ ಕಳುಹಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಮಾಗಡಿ ಬಳಿಯ ಸಾವನದುರ್ಗ ಬೆಟ್ಟದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸುದ್ದಿ ಮಾಡಿರುವ ನಾಗಮಂಗಲ ಶಾಸಕ ಎನ್. ಚಲುವರಾಯಸ್ವಾಮಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮಂಗಳವಾರ ಗೌಡರ ವಿರುದ್ಧ ಗುಡುಗಿದ್ದಾರೆ. [ಡಿಕೆಶಿ ಜೊತೆ ಜೆಡಿಎಸ್ ನಾಯಕರ ರಹಸ್ಯ ಚರ್ಚೆ!]

'ತಾವು ರಾಜಕೀಯ ಕುಟುಂಬದಿಂದ ಬಂದವರಲ್ಲ, ತಮಗೂ ಸ್ವಾಭಿಮಾನವಿದೆ, ದೇವೇಗೌಡರು ಪದೇ-ಪದೇ ಪಕ್ಷ ಬಿಡಲಿ ಎಂಬ ಹೇಳಿಕೆ ನೀಡುತ್ತಿದ್ದರೆ ನಮ್ಮ ದಾರಿ ನಮಗೆ' ಎಂದು ಚೆಲುವರಾಯ ಸ್ವಾಮಿ ಹೇಳಿದ್ದಾರೆ. 'ನಾನು ಪಕ್ಷದ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ' ಎಂದು ಜಮೀರ್ ಅಹಮದ್ ಸ್ಪಷ್ಟಪಡಿಸಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದಾರೆ ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದರು. ಈಗ ಇನ್ನಿಬ್ಬರು ಶಾಸಕರು ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದಾರೆ. ಜೆಡಿಎಸ್ ಶಾಸಕರು ಯಾರು, ಏನು ಹೇಳಿದರು ನೋಡೋಣ ಬನ್ನಿ

ಪಕ್ಷ ಬಿಡೋಲ್ಲ, ಸಮಾವೇಶಕ್ಕೆ ಹೋಗೋಲ್ಲ

ಪಕ್ಷ ಬಿಡೋಲ್ಲ, ಸಮಾವೇಶಕ್ಕೆ ಹೋಗೋಲ್ಲ

'ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ, ಪಕ್ಷದ ಯಾವುದೇ ಚಟುವಟಿಕೆಯಲ್ಲಿಯೂ ಪಾಲ್ಗೊಳ್ಳದೇ ಸಾಮಾನ್ಯ ಕಾರ್ಯಕರ್ತನಾಗಿರುವೆ' ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಪಕ್ಷದ ಯಾವುದೇ ಸಮಾವೇಶ, ಸಭೆ, ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ದೇವೇಗೌಡರು ಪದೇ-ಪದೇ ಪಕ್ಷ ಬಿಡಲಿ ಎಂಬ ಹೇಳಿಕೆ ನೀಡುತ್ತಿದ್ದರೆ, ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮುಜುಗರ ಉಂಟು ಮಾಡುವ ಹೇಳಿಕೆ ಬೇಡ

ಮುಜುಗರ ಉಂಟು ಮಾಡುವ ಹೇಳಿಕೆ ಬೇಡ

ಚೆಲುವರಾಯ ಸ್ವಾಮಿ ಅವರು 'ಮುಖ್ಯಮಂತ್ರಿ ಕಚೇರಿಯಿಂದ ದೇವೇಗೌಡರ ಫೋಟೋ ತೆಗೆದುಹಾಕಿದಾಗ ನಾನೇ ವಿರೋಧಿಸಿದ್ದೆ, ಆದರೆ, ಈಗ ದೇವೇಗೌಡರು ಪಕ್ಷ ಬಿಡುವವರು ಬಿಡಲಿ ಎಂದು ಹೇಳುತ್ತಿದ್ದಾರೆ. ಮುಜುಗರ ಉಂಟುಮಾಡುವ ಇಂತಹ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷದ ಸಮಾವೇಶಕ್ಕೆ ಹೋಗುತ್ತಿಲ್ಲ' ಎಂದು ಹೇಳಿದ್ದಾರೆ.

ದೇವೇಗೌಡರು ಹೇಳಿದ್ದೇನು?

ದೇವೇಗೌಡರು ಹೇಳಿದ್ದೇನು?

ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ದೇವೇಗೌಡರು 'ಪಕ್ಷ ಬಿಟ್ಟು ಹೋಗುವವರೆಲ್ಲ ಸಂತೋಷದಿಂದ ಹೋಗಿ, ಯಾರು ಪಕ್ಷ ಬಿಟ್ಟರೂ ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್, ಬಿಜೆಪಿ ಸೇರಿದ ಮುಖಂಡರು ಈಗ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದೂ ಗೊತ್ತಿದೆ' ಎಂದು ಹೇಳಿದ್ದರು. ಯಾವ ನಾಯಕರು ಬೇಕಾದರೂ ಪಕ್ಷ ಬಿಟ್ಟು ಸಂತೋಷದಿಂದ ಹೋಗಿ ಎಂದು ತಿಳಿಸಿದ್ದರು.

ಸುದ್ದಿಯಲ್ಲಿರುವ ಶಾಸಕರು ಯಾರು?

ಸುದ್ದಿಯಲ್ಲಿರುವ ಶಾಸಕರು ಯಾರು?

ನಾಗಮಂಗಲ ಶಾಸಕ ಎನ್. ಚೆಲುವರಾಯಸ್ವಾಮಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್, ಮಾಗಡಿ ಶಾಸಕ ಬಾಲಕೃಷ್ಣ, ಗಂಗಾವತಿ ಶಾಸಕ ಇಕ್ಬಾಲ್‌ ಅನ್ಸಾರಿ ಪಕ್ಷದ ನಾಯಕತ್ವದ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅನ್ಸಾರಿ ಸಹ ಪಕ್ಷದಿಂದ ದೂರ

ಅನ್ಸಾರಿ ಸಹ ಪಕ್ಷದಿಂದ ದೂರ

ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು 'ಜೆಡಿಎಸ್‌ ಪಕ್ಷ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಮಕ್ಕಳ ಸ್ವಂತ ಬಸ್‌ ಇದ್ದ ಹಾಗೆ. ತಾವೆಲ್ಲ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಂತೆ, ಜೆಡಿಎಸ್ ಪಕ್ಷದ ಬೆಳಗವಣಿಗೆಗಳು ಬೇಸರ ಮೂಡಿಸಿವೆ, ಆದರೆ ಪಕ್ಷ ಬಿಡುವ ಬಗ್ಗೆ ಯಾವುದೇ ನಿರ್ಧಾರವನ್ನು ಸದ್ಯ ಕೈಗೊಂಡಿಲ್ಲ' ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಅವರು ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ.

ಡಿಕೆಶಿ ಭೇಟಿ ಮಾಡಿದ ಶಾಸಕ ಬಾಲಕೃಷ್ಣ

ಡಿಕೆಶಿ ಭೇಟಿ ಮಾಡಿದ ಶಾಸಕ ಬಾಲಕೃಷ್ಣ

ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಾಗಡಿ ಶಾಸಕ ಬಾಲಕೃಷ್ಣ ಅವರು ಭೇಟಿ ಮಾಡಿದ್ದರು. ಡಿ.ಕೆ.ಶಿವಕುಮಾರ್ ಪಕ್ಷ ಸೇರಲು ಆಹ್ವಾನಿಸಿದ್ದಾರೆ,
ಆದರೆ, ಸದ್ಯಕ್ಕೆ ಜೆಡಿಎಸ್‌ ತೊರೆಯುವುದಿಲ್ಲ. ಚುನಾವಣೆ ವೇಳೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬಾಲಕೃಷ್ಣ ಹೇಳಿದ್ದಾರೆ.

English summary
Janata Dal(Secular) MLAs Zameer Ahmed Khan (Chamarajpet), N.Cheluvaraya Swamy (Nagamangala) unhappy over Hd Deve Gowda and recent developments in party. MLAs said they will not quit party and not need any post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X