ಮುಖ್ಯಮಂತ್ರಿ ಆಗೋಕೆ ಮಾತ್ರ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋಗಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ
2018ರಲ್ಲಿ ಕಾಂಗ್ರೆಸ್ ಷರತ್ತು ಹಾಕಿ ಅಧಿಕಾರ ನೀಡಿತ್ತು. ಆದ್ರೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಕಾಂಗ್ರೆಸ್ ನಾಯಕರು ನನಗೆ ಬಿಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಬಳ್ಳಾರಿ, ಜನವರಿ31: ಮುಖ್ಯಮಂತ್ರಿ ಆಗೋಕೆ ಮಾತ್ರ ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಮಾಜಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಗೆ ಮತ ಹಾಕಿದರೇ ಬಿಜೆಪಿಗೆ ಮತ ಹಾಕಿದ ಹಾಗೆ. ಜೆಡಿಎಸ್ ಗೆ ಮತ ಹಾಕಿದರೇ ಪ್ರಯೋಜವಿಲ್ಲ ಎಂದು ಟೀಕಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಕಾಂಗ್ರೆಸ್ ಬೆಂಬಲ ನೀಡದಿದ್ದಕ್ಕೆ ನಿಖಿಲ್ ಮತ್ತು ಹೆಚ್.ಡಿ ದೇವೇಗೌಡರು ಸೋತರು. ಸಿದ್ಧರಾಮಯ್ಯರನ್ನ ಡಿಸಿಎಂ ಮಾಡಿದ್ದು ಹೆಚ್.ಡಿ ದೇವೇಗೌಡರು. 30 ವರ್ಷದಿಂದ ನಮಗೆ ಕುಟುಂಬ ರಾಜಕಾರಣದ ಲೇಬಲ್ ಕೊಟ್ಟಿದ್ದಾರೆ. ವರುಣಾದಲ್ಲಿ ಪುತ್ರನ ಭವಿಷ್ಯಕ್ಕೆ ಸಿದ್ದರಾಮಯ್ಯ ಹೊರಗೆ ಹೋಗುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗೋಕೆ ಆಗಲ್ಲ ಹಾಗಾಗಿ ಪುತ್ರನ ತರುತ್ತಿದ್ದಾರೆ. ಬಿ.ಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪಗೂ ಅವರ ಮಕ್ಕಳದ್ದೆ ಚಿಂತೆ ಎಂದು ಲೇವಡಿ ಮಾಡಿದರು.

ಇನ್ನೂ ಅಕ್ರಮ ಗಣಿಗಾರಿಕೆ ಹೊರಗೆ ಬರುವುದಕ್ಕೆ ಕುಮಾರಸ್ವಾಮಿಯೇ ಕಾರಣ. ನನ್ನ ವಿರುದ್ಧ 150 ಕೋಟಿ ಆರೋಪ ಮಾಡಿದವರು ಎಲ್ಲಿಗೆ ಹೋದರು? ಜನಾರ್ದನ ರೆಡ್ಡಿ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ಎಲ್ಲಿ ಬೇಕಾದ್ರಲ್ಲಿ ಸ್ಪರ್ಧೆ ಮಾಡೋಕೆ ನನ್ನದು ಟೂರಿಂಗ್ ಟಾಕೀಸ್ ಅಲ್ಲ. ಸಿದ್ದರಾಮಯ್ಯ ಒಂದು ಕ್ಷೇತ್ರ ಹುಡುಕೋಕೆ ಅಗ್ತಿಲ್ಲ. ಇವರು ಮುಖ್ಯಮಂತ್ರಿ ಆದವರು, 13 ಬಾರಿ ಬಜೆಟ್ ಮಂಡಿಸಿದವರು ಎಂದು ಹೆಚ್.ಡಿ.ಕುಮಾರಸ್ವಾಮಿ ಟೀಕೆಸಿದರು.
2018ರಲ್ಲಿ ಕಾಂಗ್ರೆಸ್ ಷರತ್ತು ಹಾಕಿ ಅಧಿಕಾರ ನೀಡಿತ್ತು. ಆದ್ರೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಕಾಂಗ್ರೆಸ್ ನಾಯಕರು ನನಗೆ ಬಿಡಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದರೆ ಬಡತನವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಎರಡೂ ಪಕ್ಷದ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿ ಅನುಭವ ಇದೆ. ಈಗಿರೋದು 2006ರ ಬಿಜೆಪಿ ಅಲ್ಲ, ರಾಷ್ಟ್ರ ನಾಯಕರ ಶಕ್ತಿ ಇರುವ ಬಿಜೆಪಿ. 2018ರಲ್ಲಿ ಕಾಂಗ್ರೆಸ್ ಜೊತೆ ಹೋಗಿದ್ದಕ್ಕೆ ಗುಲಾಮನಾಗಿರುವ ಹಾಗೆ ಆಯ್ತು. ಸಿದ್ದರಾಮಯ್ಯ ಅಧಿಕಾರ ಹೋದರೂ ನನಗೆ ಮನೆ ಬಿಟ್ಟು ಕೊಡಲಿಲ್ಲ. ಸಮ್ಮಿಶ್ರ ಸರ್ಕಾರ ಮಾಡಿ ಕಾಂಗ್ರೆಸ್ನವರು ಕುತ್ತಿಗೆ ಕೊಯ್ದರು.












Click it and Unblock the Notifications