ನಿಮ್ಮ ಧಮ್ಮು,ತಾಕತ್ ಅನ್ನು ಪ್ರಧಾನಿ ಅತ್ರ ತೋರಿಸಿ ಬನ್ನಿ: ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ
ಮಂಡ್ಯ, ಡಿಸೆಂಬರ್ 26: ಬೆಳಗಾವಿ ವಿಷಯದಲ್ಲಿ ಧಮ್ಮು, ತಾಕತ್ ಅನ್ನು ಪ್ರಧಾನಿ ಅತ್ರ ತೋರಿಸಿ ಬನ್ನಿ ಎಂದು ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ ಎಂಬ ಠಾಕ್ರೆ ಹೇಳಿಕೆ ವಿಚಾರವಾಗಿ ಬಿಜೆಪಿ ವಿರುದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಬಿಂಡಿಗನವಿಲೆ ಬಳಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುನಃ ಮಹಾರಾಷ್ಟ್ರದ ಹಲವು ಪಕ್ಷ ಮತ್ತು ಸರ್ಕಾರ ಜೊತೆಗೆ ಬಿಜೆಪಿ ಪಕ್ಷ ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಸೇರ್ಪಡೆಗೆ ಒತ್ತಾಯ ಇದೆ. ಇದು ಅತ್ಯಂತ ದೇಶದ ಒಕ್ಕೂಟದ ವ್ಯವಸ್ಥೆಯನ್ನ ಅಡ್ಡಿ ಪಡಿಸುವಂತ ಅನಾಹುತ ತರುವಂತ ಜವಾಬ್ದಾರಿ. ಒಂದು ದೇಶ ಒಂದು ಭಾಷೆ,ಒಂದು ದೇಶ ಒಂದು ಚುನಾವಣೆ ಅನ್ನೋ ಬಿಜೆಪಿ ನಾಯಕರು. ಒಂದು ಸ್ವಲ್ಪ ಕಾಮನ್ ಸೆನ್ಸ್ ಇದ್ರೆ ಇಂತಹ ವಿಷಯಗಳನ್ನ ಪ್ರವೆಕೆಟ್ ಮಾಡುವುದು ಸೂಕ್ತವಲ್ಲ. ಈಗಾಗಲೇ ಕರ್ನಾಟಕದ ಸ್ವತ್ತು ಬೆಳಗಾವಿಯಾಗಿದೆ. ಇಲ್ಲಿ ಯಾವುದೇ ವಿವಾದ ಇಲ್ಲ ಎಂದಿದ್ದಾರೆ.
ಇನ್ನೂ ನಮ್ಮ ಮುಖ್ಯಮಂತ್ರಿ ಬೆಳಗಾವಿ ವಿವಾದ ಅಂತ ಪದ ಬಳಿಸಿದ್ದಾರೆ. ತಕ್ಷಣವೇ ವಿವಾದ ಅನ್ನೋ ಪದವನ್ನು ಮುಖ್ಯಮಂತ್ರಿಗಳು ವಾಪಸು ಪಡೆಯಬೇಕು.ಇದು ವಿವಾದ ಅಲ್ಲ, ಬೆಳಗಾವಿ ವಿಷಯ. ಬೆಳಗಾವಿ ವಿಷಯವನ್ನ ಮಹಾರಾಷ್ಟ್ರ ಎತ್ತಿಕೊಂಡಿದ್ದಾರೆ. ಅವರು ವಿವಾದ ಸೃಷ್ಟಿ ಮಾಡ್ಕೊಂಡ್ರೆ, ನಾವು ಯಾಕೆ ವಿವಾದ ಅಂತ ಅನ್ಕೊಳ್ಳೋಣಾ.? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಏಕೀಕರಣದಲ್ಲಿ ಕರ್ನಾಟಕದ ಭಾಗದ ತಿರ್ಮಾನವಾಗಿದೆ. ಇವತ್ತು ಕರ್ನಾಟಕ ರಾಜ್ಯಕ್ಕೆ ಬೆಳಗಾವಿಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಗೆ ಕನ್ನಡಿಗರ ದುಡ್ಡನ್ನ ಬಂಡವಾಳ ಹಾಕಿದ್ದೇವೆ. ಸಕ್ಕರೆ ಕಾರ್ಖಾನೆ ನಡೆಯುತ್ತಿದ್ರೆ ಕನ್ನಡಿಗ ಕೊಟ್ಟಿರುವಂತ ಕೊಡುಗೆ. ಮಹಾರಾಷ್ಟ್ರದಲ್ಲಿ ಪಕ್ಷಗಳು ಬೆಳಗಾವಿಯ ಆರ್ಥಿಕ ಶಕ್ತಿ ಗಮನಿಸಿ ಲಪಟಯಿಸಲು ಹೊರಟಿದ್ದಾರೆ. ಠಾಕ್ರೆ ಮಾತಿನ ಜಾಕ್ಟೆಗೆ ಸರ್ಕಾರ ಡ್ರಮ್ ಹೊಡೆಲು ಹೊರಟಿದ್ದಾರೆ. ಇದು ಬಿಜೆಪಿಯ ನಾಚಿಗೆ ಗೇಡಿನ ಕೆಲಸ ಎಂದು ಕಿಡಿಕಾರಿದ್ದಾರೆ.
ಈ ದೇಶದಲ್ಲಿ ಒಕ್ಕೂಟದ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಕಾಪಾಡಬೇಕಾದ್ರೆ, ಮಹಾರಾಷ್ಟ್ರದ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುವುದನ್ನ ಕಲಿಯಬೇಕು. ಅಕ್ಕ ಪಕ್ಕದ ರಾಜ್ಯದಲ್ಲಿ ದ್ವೇಷ ಉಂಟುಮಾಡಿ, ಸಂಘರ್ಷ ಮಾಡ್ತಾರೆ. ಮುಖ್ಯಮಂತ್ರಿ ಈ ವಿಷಯವನ್ನ ಸುಲಭವಾಗಿ ತೆಗೆದುಕೊಳ್ಳಬೇಡಿ. ಮಹಾರಾಷ್ಟ್ರದವರು ಮಾಡುವ ಕುತಂತ್ರಕ್ಕೆ ಬಲಿಯಾಗ್ತಿರಿ ಎಂದು ಹೇಳಿದರು.

ದೆಹಲಿಯಲ್ಲಿ ನಿಮ್ಮ ಕೇಂದ್ರ ಸರ್ಕಾರ ಡಬಲ್ ಇಂಜಿನ್ ಸರ್ಕಾರ ಕರ್ನಾಟಕದವರನ್ನ ಲೆಕ್ಕಕ್ಕೆ ಇಟ್ಟಿಲ್ಲ. 25 ಜನ ಲೋಕಸಭಾ ಮೆಂಬರ್ ಇದ್ದಾರೆ ಅವರನ್ನು ಎಲ್ಲಿಟ್ಟುದ್ದಾರೆ ಗೊತ್ತಿದ್ದೆ. ಧಮ್,ತಾಕತ್ ಬಗ್ಗೆ ಸಿಎಂ ಪ್ರತಿನಿತ್ಯ ಭಾಷಣ ಮಾಡ್ತಾರೆ. ಈ ವಿಷಯದಲ್ಲಿ ಧಮ್,ತಾಕತ್ ಅನ್ನು ಪ್ರಧಾನಿ ಅತ್ರ ತೋರಿಸಿ ಬನ್ನಿ, ಇದನ್ನು ಮೊದಲು ನಿಲ್ಲಿಸಿ. ಹೋಂ ಮಿನಿಸ್ಟರ್ ನ ಮೀಟ್ ಮಾಡಿದ್ದಿರಿ ಧಮ್ಮು, ತಾಕತ್ ಬಗ್ಗೆ ಹೇಳಿ. ಇದು ಅತ್ಯಂತ ಖಂಡನಿಯ ಒಗ್ಗಟ್ಟಿನಿಂದ ಎದುರಿಸಬೇಕು. ಈ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಒಳೆಯ ಅವಕಾಶ ಅಂತ ಮಹಾರಾಷ್ಟ್ರ ದಬ್ಬಾಳಿಕೆ ಮಾಡ್ತಿದೆ. ಮಗು ಚಿವುಟಿ, ಅಳಿಸುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡ್ತಿದೆ ಎಂದು ವ್ದಾಗ್ದಾಳಿ ನಡೆಸಿದರು.












Click it and Unblock the Notifications