ಅಮಾನತುಗೊಂಡ ಶಾಸಕರ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ 22: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತದಾನ ಮಾಡಿದ 8 ಜನ ಶಾಸಕರನ್ನು ಅಮಾನತು ಮಾಡಿ ಅವರಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ಅವರು ಉತ್ತರಿಸಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. 8 ಜನ ಶಾಸಕರು ಪಕ್ಷವಿರೋಧಿ ಚಟುವಟಿಕೆ ನಡೆಸಿದರೂ ಪಕ್ಷಕ್ಕೆ ಹಾನಿಯಾಗಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅವರು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಇನ್ನು ಎರಡು ವರ್ಷ ಬಾಕಿ ಇರುವುದರಿಂದ ಅಲ್ಲಿಯವರೆಗೆ ತಾವು ಬೇರೊಬ್ಬ ಅಭ್ಯರ್ಥಿಯನ್ನು ಸಿದ್ಧ ಮಾಡಿ ಗೆಲ್ಲಿಸುವ ತಾಕತ್ತು ಪಕ್ಷಕ್ಕಿದೆ ಎಂದರು.[ಜೆಡಿಯುನತ್ತ ಹೊರಟ ಜೆಡಿಎಸ್‌ನ 8 ಶಾಸಕರು?]

JDS has the ability to win elections: H D Kumaraswamy


ಜಾರ್ಜ್ ಮೊದಲೇ ರಾಜೀನಾಮೆ ನೀಡಿದ್ದರೆ 10 ದಿನದ ಕಲಾಪ ಬಲಿಯಾಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಡಿಕೇರಿ ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯುವ ಅವಶ್ಯಕತೆ ಏನಿತ್ತು? ಸುಮ್ಮನೇ ವಿಧಾನ ಮಂಡಲ ಅಧಿವೇಶನ ಹಾಳಾಯಿತು ಎಂದು ದೂರಿದರು.[ಜೆಡಿಎಸ್‌ನ 8 ಶಾಸಕರ ಅಮಾನತು, ಮುಂದೇನು?]

JDS has the ability to win elections: H D Kumaraswamy

ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಕಾಂಗ್ರೆಸ್ ಸಹಕಾರ ಬೇಕಿದ್ದರೂ ನಿರ್ಧಾರ ಅವರಿಗೆ ಬಿಡುತ್ತೇನೆ ಎಂದರು. ಕಲ್ಲಪ್ಪ ಹಂಡಿಗಭಾಗ್ ಅವರ ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಅವರೊಂದಿಗೆ ಚರ್ಚಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಡುತ್ತೇನೆ ಎಂದರು.

ಸಿದ್ಧರಾಮಯ್ಯನವರು ಯಾವುದೇ ಪ್ರಕರಣವನ್ನು ಕೇಳಿದರೂ ಯಾವುದೂ ಇಲ್ಲ ಎಂದು ಹೇಳುತ್ತಾರೆ. ಇಲ್ಲವಾದಲ್ಲಿ ಅದರ ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದ ಎಚ್ಡಿಕೆ, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮತ್ತೊಮ್ಮೆ ಹೋರಾಟ ಮಾಡಲಾಗುವುದು ಎಂದರು.

ನಂತರ ರಸ್ತೆ ಮಾರ್ಗದ ಮೂಲಕ ವಿಜಯಪುರಕ್ಕೆ ತೆರಳಿದ ಕುಮಾರಸ್ವಾಮಿಯವರೊಂದಿಗೆ ಕಿರಣ ಹಿರೇಮಠ, ರಾಜಣ್ಣ ಕೊರವಿ, ಬಸವರಾಜ ಹೊರಟ್ಟಿ ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: JD(S) leader H D Kumaraswamy on Thursday said that , The party do not think about suspended 8 MLA's activity. JDS has the ability to fulfill the the place.
Please Wait while comments are loading...