ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಜೆಡಿಎಸ್ ಭಯಂಕರ ಆರೋಪ

Recommended Video

      ಜೋರಾಯ್ತು ಕುಮಾರಣ್ಣ, ವಿಜಯೇಂದ್ರ ವಾರ್ | Oneindia Kannada

      ಬೆಂಗಳೂರು, ಅ 3: ಕೇಂದ್ರದಿಂದ ಬರಪರಿಹಾರ ವಿಳಂಬದ ವಿಚಾರದಲ್ಲಿ ಸಾಲುಸಾಲು ಟೀಕೆ ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ, ಜೆಡಿಎಸ್ ಗುರುತರ ಆರೋಪವೊಂದನ್ನು ಮಾಡಿದೆ.

      ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳ ಪುತ್ರರೂ ಆಗಿರುವ ಬಿ.ವೈ.ವಿಜಯೇಂದ್ರ , ತಮ್ಮ ತಂದೆಯನ್ನು ಸಮರ್ಥಿಸಿಕೊಂಡು ಹೇಳಿಕೆಯೊಂದನ್ನು ನೀಡಿದ್ದರು.

      ಇದಕ್ಕೆ ಟ್ವೀಟ್ ಮೂಲಕ ಉತ್ತರ ನೀಡಿರುವ ಜೆಡಿಎಸ್, "ಹೌದು..ಹೌದು.. ನಿಮ್ಮ ತಂದೆ ಪುಕ್ಸಟೆಯಾಗಿ ಮುಖ್ಯಮಂತ್ರಿಯಾಗಿದ್ದಲ್ಲ" ಎಂದು ಭಾರೀ ಆರೋಪವೊಂದನ್ನು ಮಾಡಿದೆ.

      ವಿಜಯೇಂದ್ರ ಮತ್ತು ಕುಮಾರಸ್ವಾಮಿ ನಡುವೆ, ಟೆಲಿಫೋನ್ ಕದ್ದಾಲಿಕೆಯ ವಿಚಾರದಲ್ಲಿ ಹಲವು ಸುತ್ತಿನ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ಜೆಡಿಎಸ್, ಯಡಿಯೂರಪ್ಪ ಮೇಲೆ ಮಾಡಿದ ಆರೋಪ, ಮುಂದೆ...

      ಸಿದ್ದರಾಮಯ್ಯನವರ ನಾಟಕ ನನಗೆ ತಿಳಿದಿದೆ, ಎಂದ ಕುಮಾರಸ್ವಾಮಿ

      ಸಿದ್ದರಾಮಯ್ಯನವರ ನಾಟಕ ನನಗೆ ತಿಳಿದಿದೆ, ಎಂದ ಕುಮಾರಸ್ವಾಮಿ

      " ಸಿದ್ದರಾಮಯ್ಯನವರ ನಾಟಕ ನನಗೆ ತಿಳಿದಿದೆ" ಎಂದು ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ವಿಜಯೇಂದ್ರ ಟ್ವೀಟ್ ಮೂಲಕ ನೀಡಿದ ಉತ್ತರ ಹೀಗಿತ್ತು, " ದುರ್ದೈವ ಎಂದರೆ ನಿಮ್ಮ ಹಾಗು ಕಾಂಗ್ರೆಸ್ ಪಕ್ಷದ ನಾಟಕಗಳು ಇಡೀ ರಾಜ್ಯದ ಜನರಿಗೆ ತಿಳಿದುಬಿಟ್ಟಿದೆ ಕುಮಾರಸ್ವಾಮಿಯವರೇ! ಬೆಳಗ್ಗೆ ಒಂದು ಮಾತು, ಸಂಜೆ ಇನ್ನೊಂದು, ಅಧಿಕಾರ ಇರುವಾಗ ಒಂದು ರಾಗ, ಇಲ್ಲದಿರುವಾಗ ಭಿನ್ನರಾಗ! ಮೈತ್ರಿ ಮಾಡಿಕೊಳ್ಳುವಾಗ ಅವರ ನಾಟಕಗಳು ತಿಳಿದಿರಲಿಲ್ಲವೆ ಎನ್ನುವುದನ್ನೂ ಹಾಗೆ ಹೇಳಿಬಿಡಿ!".

      ನಮ್ಮಪ್ಪ ಪುಕ್ಸಟೆಯಾಗಿ ಮುಖ್ಯಮಂತ್ರಿ ಆಗಿದ್ದಲ್ಲ, ವಿಜಯೇಂದ್ರ

      ನಮ್ಮಪ್ಪ ಪುಕ್ಸಟೆಯಾಗಿ ಮುಖ್ಯಮಂತ್ರಿ ಆಗಿದ್ದಲ್ಲ, ವಿಜಯೇಂದ್ರ

      ಎರಡು ದಿನಗಳ ಕೆಳಗೆ ವಿಜಯೇಂದ್ರ, "ನಮ್ಮಪ್ಪ ಪುಕ್ಸಟೆಯಾಗಿ ಮುಖ್ಯಮಂತ್ರಿ ಆಗಿದ್ದಲ್ಲ" ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಸ್ವಪಕ್ಷೀಯರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಘ ಪರಿವಾರದ ಮುಖಂಡರೂ ಎಚ್ಚರಿಕೆಯನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ. ವಿಜಯೇಂದ್ರ ಹೇಳಿಕೆಗೆ ಜೆಡಿಎಸ್ ಕೂಡಾ ಅಪಹಾಸ್ಯ ಮಾಡಿದೆ.

      ವರ್ಗಾವಣೆಗೆ ದುಡ್ಡು, ಬಿಲ್ಡರ್ಗಳಿಂದ ದುಡ್ಡು

      ವರ್ಗಾವಣೆಗೆ ದುಡ್ಡು, ಬಿಲ್ಡರ್ಗಳಿಂದ ದುಡ್ಡು

      ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, " ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ, ಬಿಜೆಪಿ 'ವರಿಷ್ಠ'(?) ವಿಜಯೇಂದ್ರ ಹೇಳಿದ್ದಾರೆ‌. ಹೌದು ವರಿಷ್ಠರೇ, ವರ್ಗಾವಣೆಗೆ ದುಡ್ಡು, ಬಿಲ್ಡರ್ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ 'ಪುಕ್ಸಟ್ಟೆ' ಆಗಲು ಸಾಧ್ಯವೇ? #ಪುಕ್ಸಟ್ಟೆCM" ಇದು ಜೆಡಿಎಸ್ ಮಾಡಿರುವ ಟ್ವೀಟ್.

      ರಾಜ್ಯದ ಶಕ್ತಿಕೇಂದ್ರ ದಂಧೆಯ ಕೇಂದ್ರವಾಗಿದೆ

      ರಾಜ್ಯದ ಶಕ್ತಿಕೇಂದ್ರ ದಂಧೆಯ ಕೇಂದ್ರವಾಗಿದೆ

      ಸಂಪುಟ ರಚನೆಗೆ ಮುನ್ನ, " ರಾಜ್ಯದ ಶಕ್ತಿಕೇಂದ್ರ ದಂಧೆಯ ಕೇಂದ್ರವಾಗಿದೆ. ವರ್ಗಾವಣೆಯನ್ನು ಬೇಕಾಬಿಟ್ಟಿ ಮಾಡಲಾಗುತ್ತಿದೆ. ಇದೆಲ್ಲಾ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅಣತಿಯಂತೆ ನಡೆಯುತ್ತಿದೆ" ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಈ ವಿಚಾರ ಬಿಜೆಪಿ ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿತ್ತು.

      ಆದಿಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ

      ಆದಿಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ

      ಆದಿಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ ವಿಚಾರವನ್ನು ಇನ್ನೊಂದು ಆಯಾಮಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸುತ್ತಿದೆ. ಈ ವೇಳೆ, ಜೆಡಿಎಸ್, ಪರ್ಸಂಟೇಜ್ ಎನ್ನುವ ಹೊಸ ದಾಳವನ್ನು ಬಿಟ್ಟಿದೆ. ಜೆಡಿಎಸ್ ಮಾಡಿರುವ ಈ ಟ್ವೀಟ್, ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+