ಉದ್ಯೋಗ ಹುಡುಕುವವರಿಗೆ ಭಾರಿ ಭರ್ಜರಿ ಸುದ್ದಿ: ಕನ್ನಡ ನೆಲದಲ್ಲಿ ‘ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್’ ಸ್ಥಾಪನೆ!
ಕರ್ನಾಟಕ ಅಂದ್ರೆ ಭಾರತದಲ್ಲೇ ಕೈಗಾರಿಕೆ ಅಭಿವೃದ್ಧಿಗೆ ಫೇಮಸ್. ಹಾಗೇ ಜಗತ್ತಿನ ಹಲವು ದೇಶಗಳಲ್ಲೂ ಕರ್ನಾಟಕ ಈ ವಿಚಾರದಲ್ಲಿ ಹೆಸರು ಮಾಡಿದೆ. ಅಲ್ಲದೆ ಕನ್ನಡಿಗರ ರಾಜಧಾನಿ ಬೆಂಗಳೂರು ಕೈಗಾರಿಕೆಗಳ ತವರು ಅಂತಾ ಕರೆಸಿಕೊಂಡಿದೆ. ಹೀಗಿದ್ದಾಗ ಬೆಂಗಳೂರು ಬಿಟ್ಟು ಬೇರೆ ಬೇರೆ ಜಿಲ್ಲೆಗಳಲ್ಲೂ ಕೈಗಾರಿಕೆ ಅಭಿವೃದ್ಧಿ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದೀಗ ಈ ಒತ್ತಾಯಕ್ಕೆ ನಿಧಾನವಾಗಿ ಮನ್ನಣೆ ಸಿಗುತ್ತಿದ್ದು, ತುಮಕೂರು ಜನರಿಗೆ ಬಂಪರ್ ಸಿಕ್ಕಿದೆ!
ಹೌದು, ಕರ್ನಾಟಕ ರಾಜ್ಯದಲ್ಲಿ ಐಟಿ-ಬಿಟಿ ಮಾತ್ರ ಅಲ್ಲದೆ ಕೈಗಾರಿಕೆಗಳು ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಸ್ಥಾಪನೆ ಆಗಿವೆ. ಕನ್ನಡಿಗರು ಈ ವಿಚಾರದಲ್ಲಿ ಭಾರತದ ಇತರ ರಾಜ್ಯಕ್ಕಿಂತ ಮುಂದೆ ಇದ್ದಾರೆ. ಆದರೆ ಬೆಂಗಳೂರು ನಗರವನ್ನ ಮಾತ್ರ ಅಭಿವೃದ್ಧಿ ಮಾಡುತ್ತಿದ್ದು, ಇದು ಭವಿಷ್ಯದಲ್ಲಿ ಸಮಸ್ಯೆ ತರಲಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಿದ್ದಾಗಲೇ ಸಿದ್ದರಾಮಯ್ಯ ಅವರ ಸರ್ಕಾರವು ಈ ಅಸಮತೋಲನ ಸರಿ ಮಾಡಲು ನಿರ್ಧರಿಸಿದಂತೆ ಕಾಣುತ್ತಿದ್ದು, ಈಗ ತುಮಕೂರು ಜನರಿಗೆ ಕೈಗಾರಿಕೆ ವಿಚಾರವಾಗಿ ಭರ್ಜರಿ ಬಂಪರ್ ಸಿಕ್ಕಂತಾಗಿದೆ.

ತುಮಕೂರಿಗೆ 'ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್'
ಅಂದಹಾಗೆ ಇದೀಗ ತುಮಕೂರು ಜಿಲ್ಲೆಯ ವಸಂತನರಸಾಪುರ ಪ್ರದೇಶದಲ್ಲಿ ಮಹತ್ವದ ಹೊಸ ಕೈಗಾರಿಕಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 2ನೇ 'ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್'ನ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಈ ಬಗ್ಗೆ ಕೈಗಾರಿಕಾ ಅಭಿವೃದ್ಧಿ ಆಯುಕ್ತ & ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒ ಗುಂಜನ್ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರ್ಕಾರ ಶೀಘ್ರ ಕ್ಲೀನ್ ಮೊಬಿಲಿಟಿ ನೀತಿ ಪರಿಚಯಿಸಲಿದೆ ಎಂದು ಕೂಡ ತಿಳಿಸಿದ್ದಾರೆ.
ಹೊಸ ಯೋಜನೆಗಳು ಕೂಡ ಜಾರಿಗೆ
ಇದೇ ಸಮಯದಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒ ಗುಂಜನ್ ಕೃಷ್ಣ ಅವರು, ಭಾರತ & ಜಪಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಹಯೋಗ ಮತ್ತಷ್ಟು ಹೆಚ್ಚಿಸುವ ಗುರಿಯನ್ನ ಈ ಪಾರ್ಕ್ ಹೊಂದಿದೆ ಎಂದು ತಿಳಿಸಿದ್ದಾರೆ. ಹಾಗೇ ಮತ್ತೊಂದು ಕಡೆ ಕರ್ನಾಟಕ ಸರ್ಕಾರ ಅತಿ ಶೀಘ್ರದಲ್ಲೇ ಕ್ಲೀನ್ ಮೊಬಿಲಿಟಿ ನೀತಿ ಪರಿಚಯ ಮಾಡಲಿದೆ. ಈ ಮೂಲಕ ವಿದ್ಯುತ್ ವಾಹನ ಅಂದ್ರೆ ಇವಿ ಬದಲಾಗಿ ಹೈಡ್ರೋಜನ್ ಮತ್ತು ಹೈಬ್ರಿಡ್ ವಾಹನಗಳನ್ನ ಉತ್ತೇಜಿಸುತ್ತೆ ಎಂದು ತಿಳಿಸಿದ್ದಾರೆ.
ಒಟ್ನಲ್ಲಿ ಈ ಯೋಜನೆ ಇದೀಗ ಸಾಕಷ್ಟು ಗಮನ ಸೆಳೆದಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮೂಲಕ 'ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್' ರೂಪುಗೊಳ್ಳಲಿದೆ. ಹೀಗಾಗಿ ಇಡೀ ಜಗತ್ತಿನ ಗಮನ ಇದೀಗ ತುಮಕೂರು ಜಿಲ್ಲೆಯ ಮೇಲೆ ನೆಟ್ಟಿದೆ, ಎಂದರೆ ತಪ್ಪಾಗಲಾರದು. ಈ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಕರ್ನಾಟಕ ಸದ್ದು ಮಾಡುತ್ತಿದ್ದು, ಕೈಗಾರಿಕೆ ಅಭಿವೃದ್ಧಿ ವಿಚಾರದಲ್ಲಿ ಇನ್ನಷ್ಟು ಸಹಾಯಕವಾಗಲಿದೆ.












Click it and Unblock the Notifications