• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಸಿಬಿ ಕಚೇರಿಯಲ್ಲೇ ರಾತ್ರಿ ಕಳೆದ ರೆಡ್ಡಿ, ಇಂದು ಸಹ ಮುಂದುವರೆದ ವಿಚಾರಣೆ

|

ಬೆಂಗಳೂರು, ನವೆಂಬರ್ 11: ಆಂಬಿಡೆಂಟ್ ಸಂಸ್ಥೆ ಪ್ರಕರಣದಲ್ಲಿ ಲಂಚ ಪಡೆದ ಹಾಗೂ ನೀಡಿದ ಆರೋಪಕ್ಕೆ ಗುರಿ ಆಗಿರುವ ಜನಾರ್ದನ ರೆಡ್ಡಿ ಅವರನ್ನು ಸಿಸಿಬಿಯು ನಿನ್ನೆಯಿಂದಲೂ ವಿಚಾರಣೆ ನಡೆಸುತ್ತಿದ್ದು ಇಂದು ಸಹ ವಿಚಾರಣೆ ಮುಂದುವರೆಯಲಿದೆ.

ಕೆಲ ದಿನಗಳಿಂದ ತಲೆ ಮರೆಸಿಕೊಂಡಿದ್ದ ಜನಾರ್ದನ ರೆಡ್ಡಿ ಅವರು ನಿನ್ನೆ ಸಂಜೆ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾದರು ನಿನ್ನೆ ರಾತ್ರಿಯಿಡಿ ಜನಾರ್ದನ ರೆಡ್ಡಿ ಅವರನ್ನು ವಿಚಾರಣೆ ಮಾಡಲಾಗಿದೆ. ಇಂದು ಸಹ ವಿಚಾರಣೆ ಮುಂದುವರೆಯುವ ಸಾಧ್ಯತೆ ಇದೆ.

ನಾನು ಓಡಿ ಹೋಗಿಲ್ಲ, ಬೆಂಗಳೂರಲ್ಲೇ ಇದ್ದೇನೆ: ಜನಾರ್ದನ ರೆಡ್ಡಿ ವಿಡಿಯೋ

ಜನಾರ್ದನ ರೆಡ್ಡಿ ಅವರ ಹೇಳಿಕೆಗಳು ಸಿಸಿಬಿಗೆ ತೃಪ್ತಿಕರವಾಗದೇ ಇದ್ದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ. ಬಂಧಿಸಿದರೆ ಜಾಮೀನಿಗೆ ಸಾಮವಾರ ಹೊಸದಾಗಿ ಜಾಮೀನು ಅರ್ಜಿ ಹಾಕಬೇಕಾಗುತ್ತದೆ.

ರಾತ್ರಿ ವಿಚಾರಣೆ ವೇಳೆ ಸಿಸಿಬಿ ಅವರ ಮೇಲೆ ರೆಡ್ಡಿ ಅವರು ಹಲವು ಬಾರಿ ಗರಂ ಆದರು ಎನ್ನಲಾಗಿದೆ. ಸಿಸಿಬಿ ತನ್ನ ಕಾರ್ಯವ್ಯಾಪ್ತಿ ಮೀರಿ ವರ್ತಿಸುತ್ತಿದೆ ಇದಕ್ಕೆ ನ್ಯಾಯಾಲಯದಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ರೆಡ್ಡಿ ಅವರು ಸಿಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.

ಗಾಲಿ ರೆಡ್ಡಿ ತಿಜೋರಿ ಬಗ್ಗೆ ಎಷ್ಟೆಲ್ಲ ಗುಮಾನಿ! ಬಾಯಿ ಕೊಟ್ಟು ಕೋಲಲ್ಲಿ ಬಡಿಸಿಕೊಂಡರೆ?

ರೆಡ್ಡಿ ಆಪ್ತ ಅಲಿಖಾನ್‌ ಅವರ ವಿಚಾರಣೆ ಮುಗಿಸಿರುವ ಸಿಸಿಬಿ ಅವರನ್ನು ಮನೆಗೆ ಹೋಗಲು ಹೇಳಿದೆ ಆದರೆ ರೆಡ್ಡಿ ಅವರೊಂದಿಗೆಯೇ ತಾನು ಹೋಗುವುದಾಗಿ ಹೇಳಿ ಸಿಸಿಬಿ ಕಚೇರಿಯಲ್ಲೇ ಉಳಿದಿದ್ದಾರೆ.

English summary
Janardhan Reddy facing ccb inquiry from yesterday it may continue today also. If his statements did not satisfy CCB then they will arrest Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X