ಸತತ ವಿಚಾರಣೆ ಬಳಿಕ ಜನಾರ್ದನ ರೆಡ್ಡಿಯನ್ನು ಬಂಧಿಸಿದ ಸಿಸಿಬಿ

ಬೆಂಗಳೂರು, ನವೆಂಬರ್ 11: ಆಂಬಿಡೆಂಟ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಜನಾರ್ದನ ರೆಡ್ಡಿ ಅವರನ್ನು ನಿನ್ನೆಯಿಂದ ವಿಚಾರಣೆ ನಡೆಸಿದ ಸಿಸಿಬಿ ಇಂದು ಮಧ್ಯಾಹ್ನ 1 ಗಂಟೆಗೆ ಜನಾರ್ದನ ರೆಡ್ಡಿ ಅವರನ್ನಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಿನ್ನೆಯಿಂದ 20 ಗಂಟೆಗಳ ಕಾಲ ಜನಾರ್ದನ ರೆಡ್ಡಿ ಅವರನ್ನು ಸತತ ವಿಚಾರಣೆ ನಡೆಸಿದ ಬಳಿಕ, ರೆಡ್ಡಿ ಅವರ ಹೇಳಿಕೆಯಿಂದ ಜನಾರ್ದನ ರೆಡ್ಡಿ ಅವರು ಅಪರಾಧ ಮಾಡಿರುವ ಅನುಮಾನ ಎದ್ದ ಕಾರಣ ರೆಡ್ಡಿ ಅವರನ್ನು ಬಂಧಿಸುವ ನಿರ್ಣಯ ಕೈಗೊಂಡಿದೆ ಸಿಸಿಬಿ.

ಈಗ ಜನಾರ್ದನ ರೆಡ್ಡಿ ಅವರನ್ನು ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಆ ನಂತರ ಅವರನ್ನು ಕೋರಮಂಗಲದಲ್ಲಿ ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗಿ ಹಾಜರುಪಡಿಸಲಾಗುತ್ತದೆ.

Janardhan Reddy arrested by CCB police

ಅಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಸಿಬಿ ವಶಕ್ಕೆ ಅಥವಾ ನ್ಯಾಯಾಂಗ ವಶಕ್ಕೆ ನೀಡಲಾಗುತ್ತದೆ. ಸಿಸಿಬಿ ವಶಕ್ಕೆ ನೀಡಿದಲ್ಲಿ ಮತ್ತೆ ಸಿಸಿಬಿ ಕಚೇರಿಗೆ ರೆಡ್ಡಿ ಅವರು ಬರುತ್ತಾರೆ. ನ್ಯಾಯಾಂಗ ಬಂಧನಕ್ಕೆ ನೀಡಿದಲ್ಲಿ ಪರಪ್ಪನ ಅಗ್ರಹಾರಕ್ಕೆ ಹೋಗಬೇಕಾಗುತ್ತದೆ. ಇಂದು ರಜೆ ಇರುವ ಕಾರಣ ಜಾಮೀನು ದಕ್ಕುವ ಅವಕಾಶವೇ ಇಲ್ಲ.

ನಾಳೆ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಹೊಸ ಅರ್ಜಿ ಹಾಕಬೇಕಾಗುತ್ತದೆ. ನಾಳೆ ಖ್ಯಾತ ವಕೀಲ ಬಿ.ವಿ.ಆಚಾರ್ಯ ಅವರು ಜಾಮೀನಿಗಾಗಿ ವಾದ ಮಾಡಲಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+