ಜೈನ ಮುನಿಗಳ ಹತ್ಯೆ; ಉಗ್ರಗಾಮಿಗಳ ಕೈವಾಡ: ಶಾಸಕ ಸಿದ್ದು ಸವದಿ ಆರೋಪ
ಬೆಂಗಳೂರು, ಜುಲೈ 10: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಖಂಡನೀಯ. ಜೈನ ಮುನಿಗಳ ಹತ್ಯೆ ಪ್ರಕರಣದ ಹಿಂದೆ ಐಸೀಸ್ ಚಿತಾವಣೆ ಇದೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೈನ ಮುನಿಗಳನ್ನ ಚಿತ್ರಹಿಂಸೆ ಮಾಡಿ ಕರೆಂಟ್ ಶಾಕ್ ಕೊಟ್ಡು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ. ಇನ್ನು ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಇದರ ಹಿಂದೆ ಐಸೀಸ್ ಉಗ್ರರ ಚಿತಾವಣೆ ಇದೆ, ಆದರೆ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ ಎಂದು ಹೇಳಿದರು.

ಸರ್ವ ಸಂಗತ್ಯಾಗ ಮಾಡಿದ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಬೇಕು ಆಗ ಸಂಪೂರ್ಣ ಸತ್ಯ ಹೊರ ಬರುತ್ತದೆ. ಸ್ವಾಮಿಗಳು ಅರ್ಥಿವ ವ್ಯವಹಾರ ಮಾಡಿರುವ ಸಾಧ್ಯತೆ ಇಲ್ಲ, ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಇದರ ಹಿಂದೆ ಪಿತೂರಿ ಇದೆ. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡುವ ಸಾಧ್ಯವಿಲ್ಲ. ಸರ್ಕಾರ ಮುಚ್ಚಿಡುವ ಯತ್ನ ಮಾಡುತ್ತಿದೆ. ಎಲ್ಲಾ ಮುನಿಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳಿದರು.
ಇನ್ನೂ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಈ ಕೃತ್ಯ ಖಂಡನೀಯ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಬೇಕು ಆಗ ಸಂಪೂರ್ಣ ಸತ್ಯ ಹೊರ ಬರುತ್ತದೆ ಎಂದು ಆಗ್ರಹಿಸಿದರು.
ವಿದ್ಯುತ್ ಶಾಕ್ ಕೊಟ್ಟು, ಕೈಕಾಲು ಕತ್ತರಿಸಿ ಕೊಳವೆಬಾವಿಗೆ ಹಾಕಿದ್ದಾರೆ. ಇದು ಇತಿಹಾಸದಲೇ ಕ್ರೂರ ಘಟನೆ. ಜೈನ ಸನ್ಯಾಸಿಗಳು ಸರ್ವಸಂಗ ಪರೀತ್ಯಾಗ ಮಾಡುತ್ತಾರೆ. ಅಂತವರನ್ನು ಹೀಗೆ ಹತ್ಯೆ ಮಾಡಿದ್ದು ಹೇಯ ಕೃತ್ಯ. ಜೈನಮುನಿಗಳ ವಿರುದ್ಧ ಸುಳ್ಳು ಹೇಳಿಕೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಶ್ರೀಗಳು ಕಾಣೆಯಾಗಿದ್ದಾರೆ ಎಂದ ಮೇಲೂ ಗಂಭೀರವಾಗಿ ಪರಿಗಣಿಸಲಿಲ್ಲ. ಅಭಯ ಪಾಟೀಲ್ ಗಂಭೀರ ಆರೋಪ ಮಾಡಿದಾಗ ಹೆಸರು ಹೇಳಿದರು.
ಇನ್ನೂ ಜೈನಮುನಿಗಳು ಕಟ್ಟಡ ಕಟ್ಟಲು ಹಣ ಕೊಟ್ಟಿದ್ದರು ಅಂತ ಮಾಹಿತಿ ಇದೆ. ಬಡ್ಡಿ ವ್ಯವಹಾರ ಮಾಡುತ್ತಿದ್ದರು ಅಂತ ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಯಾರೇ ತಪ್ಪು ಮಾಡಿದರೂ ಅಪರಾಧ. ಇದಕ್ಕೆ ಜಾತಿ ಇರಲ್ಲ ಎಂದು ಹೇಳಿದ ಅವರು, ಇನ್ನೂ ಜೈನ ಮುನಿಗಳ ಹತ್ಯೆ ಪ್ರಕರಣವನ್ನು ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರುತ್ತೇನೆ ಎಂದರು.












Click it and Unblock the Notifications