ವೀರೇಂದ್ರ ಪಾಟೀಲ್ ಮೂಲಕ ಬಂದ್ ಆಗಿದ್ದ ಲಿಂಗಾಯತರ ಮತಗಳು, ಸವದಿ, ಶೆಟ್ಟರ್ ಮೂಲಕ ಕಾಂಗ್ರೆಸ್‌ಗೆ ಬರಲಿವೆಯೇ?
ಬೆಂಗಳೂರು, ಏಪ್ರಿಲ್. 18: 1990 ರ ದಶಕದವರೆಗೂ ಕಾಂಗ್ರೆಸ್ ಜೊತೆಗಿದ್ದ ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ಮತಗಳು ಬಿಜೆಪಿ ಕಡೆಗೆ ವಾಲಿದ್ದು ಎಲ್ಲರಿಗೂ ತಿಳಿಸಿದೆ. ಅಂದಿನಿಂದ ಕಾಂಗ್ರೆಸ್ ಲಿಂಗಾಯತರ ವಿರೋಧಿ ಎಂಬುದನ್ನು ಬಿಜೆಪಿ ಪದೇ ಪದೇ ಒತ್ತಿ ಹೇಳುತ್ತಲೇ ಇದೆ. ಇದು ಆ ಸಮುದಾಯವನ್ನು ದೇಶದ ಹಳೆಯ ಪಕ್ಷ ಕಾಂಗ್ರೆಸ್‌ನಿಂದ ಹೊರಗಿಡುವುದೇ ಆಗಿದೆ.
ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪ್ರಬಲ ಬಿಜೆಪಿ ನಾಯಕರು, ದಶಕಗಳ ಕಾಲ ಬಿಜೆಪಿಯನ್ನು ಕಟ್ಟಿ ಬೆಳಸಿದವರೇ ಪಕ್ಷವನ್ನು ತೊರೆದಿದ್ದಾರೆ. ಬಿಜೆಪಿಯಲ್ಲಿ ಸಮುದಾಯದ ನಾಯಕರಿಗೆ ಬೆಲೆಯಿಲ್ಲ. ಅಗೌರವ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಕಾರಣರಾದ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರನ್ನು ರಾಜಕೀಯದಿಂದ ದೂರವಿರಿಸಲಾಗಿದೆ.

ಬಣಜಿಗ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಗಾಣಿಗ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮಾಜಿ ಡಿಸಿಎಂ ಲಕ್ಷ್ಮಣ ಈಗಗಲೇ ಕೇಸರಿ ಶಲ್ಯ ಬಿಟ್ಟು ಕಾಂಗ್ರೆಸ್ ಶಲ್ಯ ಧರಿಸಿದ್ದಾರೆ. ಬಿಜೆಪಿ ತಮ್ಮನ್ನು ಕಡೆಗಣಿಸಿದೆ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ. ಇದು ಚುನಾವಣೆಗೆ ಕೆಲವೇ ದಿನಗಳಿರುವಾಗ ಆಡಳಿತರೂಢ ಬಿಜೆಪಿ ಮೇಲೆ ಭಾರೀ ಪ್ರಭಾವ ಬೀರಲಿದೆ.
ಏಕೆಂದರೇ, ಕಳೆದ ಎರಡು ದಶಕಗಳಿಂದ ಲಿಂಗಾಯತ ಸಮುದಾಯದ ಬೆಂಬಲದಿಂದ ಬೀಗುತ್ತಿದ್ದ ಬಿಜೆಪಿ ಈಗ ಮತ್ತೆ ತನ್ನ ನಿರ್ಧಾರದತ್ತ ತಿರುಗಿ ನೋಡಬೇಕಿದೆ. ಕಾಂಗ್ರೆಸ್ ಮಾಡಿದ್ದ ತಪ್ಪನ್ನೇ ಬಿಜೆಪಿ ಮಾಡುತ್ತಿರುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಅದು, 1990 ರ ದಶಕದಲ್ಲಿ ಆಗಿನ ಮುಖ್ಯಮಂತ್ರಿ ಪಾರ್ಶ್ವವಾಯುದಿಂದ ಚೇತರಿಸಿಕೊಳ್ಳುತ್ತಿದ್ದ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಅವರನ್ನು ಆಗಿನ ಪ್ರಧಾನಿ ರಾಜೀವ್ ಗಾಂಧಿ ವಜಾಗೊಳಿಸಿದರು. ಇದು ಸಮುದಾಯವನ್ನು ಕಾಂಗ್ರೆಸ್ ವಿರುದ್ಧವಾಗಿ ತಿರುಗಿಸಿತು. ಅಂದಿನಿಂದ ಲಿಂಗಾಯತರು ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್.
*ಲಿಂಗಾಯಿತ ನಾಯಕರು ಅವಮಾನ ಮರೆತರು ಸಮುದಾಯ ಮರೆಯುವುದಿಲ್ಲ!*
ಅಂದು ಕಾಂಗ್ರೆಸ್ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಅವರನ್ನು ವಜಾ ಗೊಳಿಸಿದ್ದನ್ನು ಲಿಂಗಾಯಿತ ಸಮುದಾಯ ಮರೆಯಲಿಲದಲ. ಹಾಗೆಯೇ ಇಂದು ಬಿಜೆಪಿಗೆ ರಾಜ್ಯದಲ್ಲಿ ನೆಲೆಯೊದಗಿಸಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿದ್ದನ್ನು ಮರೆತಿಲ್ಲ. ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ನಿವೃತ್ತಿ ಘೋಷಿಸಿದರೂ ಕೂಡ, ಪಕ್ಷ ಅವರಿಗೆ ಅಗೌರವ ತೋರಿಸಿದೆ. ಅವರನ್ನು ಬಿಟ್ಟು ಟಿಕೆಟ್ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಮಾತುಗಳು ಸಮುದಾಯದಲ್ಲಿ ಹರಿದಾಡುತ್ತಿದೆ.
2008 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೊದಲ ಸಲ ಅಧಿಕಾರಕ್ಕೆ ಏರಿಸಿದರು, ಬಳಿಕ ಮತ್ತೊಂದು ಬಾರಿಗೂ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಯಿತು. ಆದರೂ ಲಿಂಗಾಯಿತ ಸಮುದಾಯದವರನ್ನೇ ಸಿಎಂ ಮಾಡಿದ್ದರೂ ಕೂಡ ಉಂಟಾದ ಸಣ್ಣ ಸಣ್ಣ ಬಿರುಕುಗಳು ಇಂದು ದೊಡ್ಡವಾಗಿವೆ.
*ಲಿಂಗಾಯತರ ಮೇಲೆ ಬ್ರಾಹ್ಮಣರ ಸವಾರಿ*
ಇನ್ನು, ಲಿಂಗಾಯಿತ ಸಮುದಾಯ ಕಾಂಗ್ರೆಸ್ ಕಡೆಗೆ ವಾಲಲಿದೆ ಎಂಬುದಕ್ಕೆ ಪೂರಕ ಅಂಶವಾಗಿ ಲಿಂಗಾಯತರ ಮೇಲೆ ಬ್ರಾಹ್ಮಣ ಸಮುದಾಯದ ಸವಾರಿ ಕೂಡ ಕಾರಣ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿರುವ ಬ್ರಾಹ್ಮಣ ಸಿಎಂ ವಿಚಾರ ಕೂಡ ಲಿಂಗಾಯತ ನಾಯಕರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ಕಾರಣ ಎಂಬ ವದಂತಿ ಹರಡಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಪದೇ ಪದೇ ಕೇಳಿಬರುತ್ತಿದೆ. ಬ್ರಾಹ್ಮಣ ಸಮುದಾಯದ ಈ ಇಬ್ಬರು ನಾಯಕರು ಲಿಂಗಾಯತ ಸಮುದಾಯ ಮೇಲೆ ಪ್ರಾಬಲ್ಯ ಸಾಧಿಸೋಕೆ ಪ್ರಯತ್ನಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದೇನು ನಿನ್ನೆ ಮೊನ್ನೆಯದಲ್ಲ. ಆದರೆ, ಬ್ರಾಹ್ಮಣ ಸಿಎಂ ವಿಚಾರ ಮುನ್ನೆಲೆಗೆ ಬಂದ ನಂತರ ಅಂದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯನ್ನು ಸಿಎಂ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಆರೋಪದ ನಂತರ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ.
ಈಗ ಇದಕ್ಕೆ ಪೂರಕವಾಗಿ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕರು ಅದರಲ್ಲೂ ರಾಜ್ಯ ವಿಧಾನಸಭೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಪ್ರತಿನಿಧಿಸುವ ಉತ್ತರ ಕರ್ನಾಟಕದ ನಾಯಕರಾದ ಸವದಿ ಮತ್ತು ಶೆಟ್ಟರ್ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಇದು ಮತ್ತೆ ಕಾಂಗ್ರೆಸ್ ನಲ್ಲಿ ಹೊಸ ಭರವಸೆ ಮೂಡಿಸಿದೆ. ಬಿಜೆಪಿ ಲಿಂಗಾಯತ ಸಮುದಾಯದ ನಾಯಕರನ್ನು ನಡೆಸಿಕೊಂಡಿರುವ ರೀತಿಯನ್ನು ಕಾಂಗ್ರೆಸ್ ತನಗೆ ಬೇಕಾದಂತೆ ಬಳಸಿಕೊಂಡರೆ ಯಾವುದೇ ಅಚ್ಚರಿಯಿಲ್ಲ. ಇಬ್ಬರು ನಾಯಕರು ಕಾಂಗ್ರೆಸ್ ಸೇರಿಸುವುದು ಲಿಂಗಾಯತರನ್ನು ಪಕ್ಷದತ್ತ ವಾಲಿಸಬಹುದು. ಆದರೆ, ಕಾಂಗ್ರೆಸ್ ಇದಕ್ಕೆ ಸಾಕಷ್ಟು ಪ್ರಯತ್ನ ಮಾಡಲೇಬೇಕಿದೆ. ಲಿಂಗಾಯಿತ ವಿರೋಧಿ ತಾನಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications