ಕರಸೇವಕರ ಬಳಸಿಕೊಂಡ ಬಿಜೆಪಿ ಕೇಸ್ ವಾಪಾಸ್ ಪಡೆಯಲು ಯತ್ನಿಸಲಿಲ್ಲ: ಸತ್ಯ ಬಿಚ್ಚಿಟ್ರಾ ಜಗದೀಶ್ ಶೆಟ್ಟರ್?

ಹುಬ್ಬಳ್ಳಿ, ಜನವರಿ 05: ತಾವು ಲೋಕಸಭೆ ಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ರೂಪಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರಸೇವಕರನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೀಗೆಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಾಸ್ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಅವಧಿಯಲ್ಲಿ ಆಗಿದ್ದೇನು ಎಂದು ವಿವರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ಮೂರು ದಶಕಗಳ ಹಿಂದೆ ಪ್ರಕರಣಗಳು ಹಿಂಡೆಯಬೇಕಿತ್ತು. ಈ ಬಗ್ಗೆ ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಬಹಳ ಪ್ರಯತ್ನಿಸಿದ್ದೇನೆ. ನನ್ನ ಬಳಿಕ ಆಡಳಿತ ನಡೆಸಿದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಹಿಂದೂ ಕಾರ್ಯಕರ್ತರ ಮೇಲಿನ ಹಿಂಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ದೂರಿದರು.

Jagadish Shettar Allengers BJP Not Honest Effort For Withdraw of Hindu Activists Related cases

ಈಗ ಪ್ರತಿಭಟನೆಯ ನಾಟಕವಾಡುತ್ತಿರುವ ಆರ್.ಅಶೋಕ ಗೃಹ ಸಚಿವರಾಗಿದ್ದಾಗ ಎಷ್ಟು ಪ್ರಕರಣವನ್ನು ಹಿಂಪಡೆಯಲು ಸೂಚಿಸಿದ್ದರು. ರಾಜಕೀಯ ಲಾಭಕ್ಕಾಗಿ ರಸ್ತೆಗೆ ಇಳಿದು ಹೋರಾಟ ಮಾಡುವ ಬಿಜೆಪಿ ನಾಯಕರು ತುಷಾರ್ ಮೆಹ್ತಾ ಅವರನ್ನು ಕರೆಯಿಸಿ ಕೇಸ್ ಫೈಟ್ ಮಾಡಿಸಲಿ.

ವ್ಯಕ್ತಿ ಬಂಧನದಿಂದ ಅನ್ಯಾಯ ಹೇಗಾಗುತ್ತದೆ?

ದೀರ್ಘ ಕಾಲ (ಲಾಂಗ್ ಪೆಂಡಿಂಗ್) ಕೇಸ್ ಹಿನ್ನೆಲೆಯಲ್ಲಿ ಪೊಲೀಸರು ಶ್ರೀಕಾಂತ ಪೂಜಾರಿಯನ್ನು ಬಂಧಿಸಿದ್ದಾರೆ. ಒಬ್ಬ ವ್ಯಕ್ತಿಯ ಬಂಧನವಾದರೆ ಕೋಟ್ಯಾಂತರ ಹಿಂದೂಗಳಿಗೆ ಅನ್ಯಾಯ ಆಗುತ್ತಾ? ಎಂದು ಪ್ರಶ್ನಿಸಿದ ಶೆಟ್ಟರ, ಶ್ರೀಕಾಂತ ಜಾಮೀನು ಸಿಕ್ಕರೆ ನಾನು ಖುಷಿ ಪಡುತ್ತೇನೆ ಎಂದು ಹೇಳಿದರು.

ಇದು ಚುನಾವಣಾ ಗಿಮಿಕ್

ರಾಜ್ಯದಲ್ಲಿ ನಿರಂತರ 7-8 ವರ್ಷ ಅಧಿಕಾರ ಅನುಭವಿಸಿದ ಬಿಜೆಪಿ ಸರ್ಕಾರಕ್ಕೆ ಅಂದು ಕರಸೇವಕರು ನೆನಪಾಗಲಿಲ್ಲವೇ. ಈ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಅಯೋಧ್ಯ ಶ್ರೀರಾಮ ಜನ್ಮ ಭೂಮಿ ಹೋರಾಟ ವಿಚಾರವನ್ನು ಜೋಶಿ ಅಸ್ತ್ರವನ್ನಾಗಿಸಿಕೊಳ್ಳುತ್ತಿದ್ದಾರೆ. ಕೇವಲ ಇದೊಂದು ಚುನಾವಣಾ ಗಿಮಿಕ್ ಎಂದು ಅವರು ಆಪಾದಿಸಿದರು.

Jagadish Shettar Allengers BJP Not Honest Effort For Withdraw of Hindu Activists Related cases

ಹಿಂದೂ, ಮುಸ್ಲಿಂ ಸಮುದಾಯಗಳ ನಡುವೆ ಒಡ ಸೃಷ್ಟಿಸುವುದೇ ಬಿಜೆಪಿ ಉದ್ದೇಶ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಹತ್ತಾರು ಕ್ರಿಮಿನಲ್ ಪ್ರಕರಣಗಳಿವೆ. ಅಂಥವರಿಗೆ ಬಿಜೆಪಿ ವಿಧಾನಸಭೆಗೆ ಟಿಕೆಟ್ ಕೊಟ್ಟಿದ್ದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿ ಬಿಜೆಪಿ ಕೈ ಸುಟ್ಟುಕೊಂಡಿದೆ. ಕೇವಲ ಧಾರ್ಮಿಕ ವಿಚಾರಗಳ ಆಧಾರದ ಮೇಲೆ ಅಧಿಕಾರಕ್ಕೆ ಬರುವ ಕನಸು ಕನಸಾಗಿಯೇ ಉಳಿಯಲಿದೆ ಎಂದರು.

ಅಯ್ಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನದ ವಿಚಾರವಾಗಿ ಮಾತನಾಡಿದ ಶೆಟ್ಟರ, ನನ್ನನ್ನು ಕರೀರಿ ಎಂದು ನಾನು ಎಲ್ಲೂ ಹೇಳಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+