ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾನತ್ ಬ್ಯಾಂಕ್ ಅವ್ಯವಹಾರ, ಉಪವಾಸ ಕೂತ ಜಾಫರ್ ಷರೀಫ್

|
Google Oneindia Kannada News

ಬೆಂಗಳೂರು, ಮೇ 06 : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅಮಾನತ್ ಬ್ಯಾಂಕ್ ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.

ಶಿವಾಜಿನಗರದಲ್ಲಿರುವ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ಮುಂದೆ ಗುರುವಾರ ಸಿ.ಕೆ.ಜಾಫರ್ ಷರೀಫ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಇಂದು ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. 1975ರ ಸುಮಾರಿಗೆ ಸ್ಥಾಪನೆಯಾದ ಬ್ಯಾಂಕ್‌ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. [ಕೆನರಾ ಜೊತೆ ಅಮಾನತ್ ಬ್ಯಾಂಕ್ ವಿಲೀನ]

jaffer sharief

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಾಫರ್ ಷರೀಫ್ ಅವರು ಹಗರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರು ಇದುವರೆಗೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಉಪವಾಸ್ ಸತ್ಯಾಗ್ರಹ ಆರಂಭಿಸಿದ್ದಾರೆ. [ಅಮಾನತ್ ವಿಲೀನಕ್ಕೆ ಕೆನರಾ ಸಮ್ಮತಿ]

ಏನಿದು ಅವ್ಯವಹಾರ? : 1975ರ ಸುಮಾರಿಗೆ ಆರಂಭವಾದ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ 1998ರ ತನಕ ಸರಿಯಾಗಿ ನಡೆಯುತ್ತಿತ್ತು. ಆದರೆ, ನಂತರ ಬ್ಯಾಂಕ್ ದಿವಾಳಿಯಾಯಿತು. ಬ್ಯಾಂಕ್ ಲೆಕ್ಕಪತ್ರಗಳ ತಪಾಸಣೆ ನಡೆಸಿದ್ದ ಸಹಕಾರಿ ಸಂಘಗಳ ನೋಂದಣಿ ಇಲಾಖೆಯು ಅವ್ಯವಹಾರ ಪತ್ತೆ ಹಚ್ಚಿತ್ತು.

ಬ್ಯಾಂಕ್‌ನಲ್ಲಿ 102 ಕೋಟಿ ಬೋಗಸ್ ಸಾಲ ಮತ್ತು 50 ಕೋಟಿ ಬಡ್ಡಿ ಹಣ ದುರುಪಯೋಗವಾಗಿದೆ. ತಪ್ಪಿತಸ್ಥರಿಂದ ಹಣ ವಸೂಲಿ ಮಾಡಲು ನಿರ್ಧರಿಸಿದ ಸಹಕಾರಿ ಸಂಘಗಳ ನೋಂದಣಿ ಇಲಾಖೆಯು ಬ್ಯಾಂಕ್ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿ ನೇಮಿಸಿತ್ತು. ಆದರೆ, ಹಣ ಮಾತ್ರ ಇನ್ನೂ ವಸೂಲಿಯಾಗಿಲ್ಲ.

ಅಮಾನತ್ ಬ್ಯಾಂಕ್‌ ನಲ್ಲಿ ಒಟ್ಟು 2.20 ಲಕ್ಷ ಗ್ರಾಹಕರಿದ್ದು, ಅದರಲ್ಲಿ 90 ಸಾವಿರ ಖಾತೆದಾರರಿದ್ದಾರೆ. ಹಣ ವಸೂಲಿ ಆಗದಿರುವುದಕ್ಕೆ ಅವರು ಆತಂಕಗೊಂಡಿದ್ದಾರೆ. ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಷರೀಫ್ ಪ್ರತಿಭಟನೆ ಆರಂಭಿಸಿದ್ದಾರೆ.

English summary
Former Union minister C.K.Jaffer Sharief launched an indefinite hunger strike demanding for CBI investigation into the alleged corruption in the Amanath Bank. He has begun his protest in front of the Amanath Bank Shivaji Nagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X