ಐಟಿ ದಾಳಿ: ಕುಮಾರಸ್ವಾಮಿ, ಕಾಂಗ್ರೆಸ್ಸಿಗೆ, ಬಿಜೆಪಿ ಎಸೆದ ಖಡಕ್ 'ಪಂಚ' ಪ್ರಶ್ನೆಗಳು

Recommended Video

      ಐಟಿ ರೈಡ್ ಹಿನ್ನೆಲೆ ಎಚ್ ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಗೆ ಬಿ ಎಸ್ ವೈ ಕೇಳಿದ 5 ಪ್ರಶ್ನೆಗಳು

      ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ರಾಜ್ಯದಲ್ಲಿ ಜೆಡಿಎಸ್ ಮುಖಂಡರು, ಅನುಯಾಯಿಗಳ ಮನೆ. ಕಚೇರಿಗಳ ಮೇಲೆ ನಡೆಸಿದ ದಾಳಿಯ ನಂತರ ಸಮ್ಮಿಶ್ರ ಸರಕಾರ, ಬೆಂಗಳೂರು ಐಟಿ ಕಚೇರಿಯ ಮುಂದೆ ದೊಡ್ಡ ಪ್ರತಿಭಟನೆಯನ್ನು ನಡೆಸಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಉಭಯ ಪಕ್ಷಗಳ ಮುಖಂಡರು ಬಿಜೆಪಿ, ಅದರಲ್ಲೂ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಒಬ್ಬರನ್ನೊಬ್ಬರು ಮೀರಿಸುವಂತೆ ವಾಗ್ದಾಳಿ ನಡೆಸಿದರು. ಜೊತೆಗೆ, ಕರ್ನಾಟಕ - ಗೋವಾ ಆದಾಯ ತೆರಿಗೆ ವಲಯದ ಮುಖ್ಯಸ್ಥ ಬಿ ಆರ್ ಬಾಲಕೃಷ್ಣನ್ ವಿರುದ್ದವೂ ವಾಗ್ದಾಳಿ ನಡೆಸಿದರು.

      ಬುಧವಾರ ಸಂಜೆಯೇ ಮಂಡ್ಯದಲ್ಲಿ, ಆದಾಯ ತೆರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ್ದ ಕುಮಾರಸ್ವಾಮಿ, ಬಿಜೆಪಿಯಲ್ಲಿರುವ ನನ್ನ ಆತ್ಮೀಯರೊಬ್ಬರು ದಾಳಿಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆಂದು ಹೇಳಿಕೆ ನೀಡುವ ಮೂಲಕ, ಬಿಜೆಪಿ ವಲಯದಲ್ಲಿ ಒಬ್ಬರು ಇನ್ನೊಬ್ಬರನ್ನು ಸಂಶಯದಿಂದ ನೋಡಿಕೊಳ್ಳುವಂತೆ ಮಾಡಿದ್ದಾರೆ.

      ಕುಮಾರಸ್ವಾಮಿಯವರಿಗೆ ದಾಳಿಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಇದ್ದಿದ್ದರಿಂದ ಮುಂಜಾಗೃತಾ ಕ್ರಮ ತೆಗೆದುಕೊಂಡಿರಬಹುದೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಮ್ಮಿಶ್ರ ಸರಕಾರದ ಪ್ರತಿಭಟನೆಯನ್ನು ಲೇವಡಿ ಮಾಡಿದ್ದಾರೆ.

      ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಸ್ವೈ, ನಾನು ಜೆಡಿಎಸ್ ಹಾಗು ಕಾಂಗ್ರೆಸ್‍ನವರ ಈ ಸಂವಿಧಾನ ವಿರೋಧಿ ಧೋರಣೆಯನ್ನು ಖಂಡಿಸುತ್ತೇನೆಂದು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

      ಜೆಡಿಎಸ್ - ಕಾಂಗ್ರೆಸ್ಸಿಗೆ ಯಡಿಯೂರಪ್ಪ ಕೇಳಿದ ಪ್ರಶ್ನೆಗಳು

      ಜೆಡಿಎಸ್ - ಕಾಂಗ್ರೆಸ್ಸಿಗೆ ಯಡಿಯೂರಪ್ಪ ಕೇಳಿದ ಪ್ರಶ್ನೆಗಳು

      1. ಐ.ಟಿ ದಾಳಿ ಪೂರ್ವನಿಯೋಜಿತವಾಗಿದ್ದು ಹಾಗೂ ಒಂದೇ ದಿನದಲ್ಲಿ ನಿರ್ಧಾರವಾಗುವಂತದ್ದಲ್ಲ ಎನ್ನುವುದು ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಎರಡೂ ಪಕ್ಷದ ಮುಖಂಡರಿಗೆ ಅರಿವಿಲ್ಲವೇ? ಈ ವಿಚಾರವನ್ನು ಎರಡೂ ಪಕ್ಷದ ಮುಖಂಡರು ಮೊದಲು ಅರಿತುಕೊಳ್ಳಲಿ.

      ಎಸಿಬಿ ವ್ಯವಸ್ಥೆಯನ್ನು ಹೊಂದಿರುವವರಿಗೆ ಇದು ಗೊತ್ತಿಲ್ಲವೇ?

      ಎಸಿಬಿ ವ್ಯವಸ್ಥೆಯನ್ನು ಹೊಂದಿರುವವರಿಗೆ ಇದು ಗೊತ್ತಿಲ್ಲವೇ?

      2. ದಾಳಿ ನಡೆಸುವ ಮುನ್ನ ಹಲವಾರು ಕ್ರಮ ಕೈಗೊಳ್ಳಬೇಕಾಗುತ್ತದೆಂದು ಗೃಹ ಇಲಾಖೆ/ಎಸಿಬಿ ಸೇವೆಯನ್ನು ಹೊಂದಿರುವ ಈ ರಾಜ್ಯ ಆಳುತ್ತಿರುವ ನಾಯಕರಿಗೆ ತಿಳಿದಿಲ್ಲವೇ ಅಥವಾ ತಿಳಿದೂ ಈ ಪ್ರತಿಭಟನೆ ಅನ್ನುವ ನಾಟಕವನ್ನು ಆಡುತ್ತಿದ್ದೀರಾ?

      ಆದಾಯ ತೆರಿಗೆ ದಾಳಿಯ ಬಗ್ಗೆ ಬಿಜೆಪಿಯ ಕೆಲವು ಪ್ರಶ್ನೆಗಳು

      ಆದಾಯ ತೆರಿಗೆ ದಾಳಿಯ ಬಗ್ಗೆ ಬಿಜೆಪಿಯ ಕೆಲವು ಪ್ರಶ್ನೆಗಳು

      3. ಈ ಆದಾಯ ತೆರಿಗೆ ದಾಳಿ ಯಾರೋ ಸಾಮಾನ್ಯರ ಮನೆಯಲ್ಲಿ ನಡೆದಿದ್ದಲ್ಲ, ಸಂಸದರು, ಶಾಸಕರು ಹಾಗೂ ರಾಜಕೀಯ ಮುಖಂಡರ ನಿಕಟವರ್ತಿಗಳ ಮನೆ ಹಾಗೂ ಕಚೇರಿ ಮೇಲೆ ನಡೆದಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೊಡಿಕೊಂಡಂತೆ.. ಬೊಬ್ಬೆ ಹೊಡೆಯುತ್ತಿರುವುದು ಯಾಕೆ?

      ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

      ಮುಖ್ಯಮಂತ್ರಿಗಳು ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ದಾಳಿಯ ಬಗ್ಗೆ ಮಾತನಾಡಿದ್ದಾರೆ

      ಮುಖ್ಯಮಂತ್ರಿಗಳು ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ದಾಳಿಯ ಬಗ್ಗೆ ಮಾತನಾಡಿದ್ದಾರೆ

      4. ಹಾಸ್ಯಾಸ್ಪದವೆಂದರೆ ದಾಳಿಯ ಮುಂಚೆಯೆ ಮುಖ್ಯಮಂತ್ರಿಗಳು ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ದಾಳಿಯ ಬಗ್ಗೆ ಮಾತನಾಡಿದ್ದಾರೆ. ಈಗ ಐಟಿ ಇಲಾಖೆಯ ವಿರುದ್ಧ ಇವರೇ, ತಮ್ಮ ಪಕ್ಷದ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಪ್ರತಿಭಟಿಸುತ್ತಾರೆ. ಇದು ತಮಾಷೆ ರಾಜಕೀಯ ನಡೆಯಲ್ಲವೇ?

      ಬಿಜೆಪಿ ನಾಯಕರ ಮನೆಯ ಮೇಲೆ ದಾಳಿ ನಡೆದಾಗ

      ಬಿಜೆಪಿ ನಾಯಕರ ಮನೆಯ ಮೇಲೆ ದಾಳಿ ನಡೆದಾಗ

      5. ಈ ರೀತಿಯ ದಾಳಿಗಳು ಹಿಂದೆ ಬಿಜೆಪಿ ನಾಯಕರ ಮನೆಗಳ ಮೇಲೂ ನಡೆದಿವೆ. ಇದಕ್ಕೆ ತಾಜಾ ಉದಾಹರಣೆ ಸಂಸದ ಸಿದ್ದೇಶ್ವರ, ಶಾಸಕ ಅಶ್ವಥ್ ನಾರಾಯಣ ಹಾಗೂ ನಾಯಕರಾದ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥರವರ ಮನೆಗಳ ಮೇಲೆ ನಡೆದ ದಾಳಿಗಳು. ಆಗ ಈ ಬಗ್ಗೆ ಬಿಜೆಪಿ ಒಂದು ಚಕಾರವನ್ನು ಎತ್ತಲಿಲ್ಲ, ಈಗ ಈ ಜೋಡೆತ್ತಿನ ಸರ್ಕಾರ ಯಾಕೆ, ಗೋಳಾಡುತ್ತಿದೆ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+