'ಪಕ್ಷಕ್ಕೆ ದ್ರೋಹ ಮಾಡಿದವರನ್ನು ಒಂದು ಕ್ಷಣವೂ ಇರಲು ಬಿಡಲ್ಲ'

Posted By:
Subscribe to Oneindia Kannada

ಮಂಡ್ಯ, ಜುಲೈ 01 : 'ಕಾರ್ಯಕರ್ತರು ಇರುವವರೆಗೂ ಪಕ್ಷಕ್ಕೆ ಏನೂ ಆಗುವುದಿಲ್ಲ. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಒಂದು ಕ್ಷಣವೂ ಪಕ್ಷದಲ್ಲಿರಲು ಬಿಡುವುದಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಂಡ್ಯ ನಗರದಲ್ಲಿ ಗುರುವಾರ ಜೆಡಿಎಸ್‌ ವಿಧಾನ ಪರಿಷತ್‌ ನೂತನ ಸದಸ್ಯರಿಗೆ ಸನ್ಮಾನ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, 'ಸದಾ ಕಷ್ಟವನ್ನೇ ಅನುಭವಿಸುತ್ತಾ ಬಂದಿದ್ದೇನೆ. ಯಾರ ಬಗ್ಗೆಯೂ ಕೀಳಾಗಿ ಮಾತನಾಡುವುದಿಲ್ಲ' ಎಂದರು. [ಕಾಂಗ್ರೆಸ್ಸಿಗೆ ಮತ ಹಾಕಿದ 8 ಜೆಡಿಎಸ್ ಶಾಸಕರು]

deve gowda

'ಪಕ್ಷಕ್ಕೆ ದ್ರೋಹ ಮಾಡಿದವರನ್ನು ಒಂದು ಕ್ಷಣವೂ ಪಕ್ಷದಲ್ಲಿ ಇರಲು ಬಿಡುವುದಿಲ್ಲ. ಪಕ್ಷದಿಂದ ಬೆಳೆದು ಹೋಗಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾದವರು ಜೆಡಿಎಸ್‌ ಪಕ್ಷ ಮುಗಿಸುತ್ತೇನೆ ಎಂದು ಹೇಳುವುದು' ನೋವು ತಂದಿದೆ ಎಂದು ಹೇಳಿದರು. [ಗೋಲ್ಡ್ ಫಿಂಚ್ ಹೋಟೆಲಲ್ಲಿ ಗೌಡರಿಗೆ ಪಂಚ್ ಕೊಟ್ಟ ಸ್ವಾಮಿ!]

ದೇವೇಗೌಡರು ಹೇಳಿದ್ದಿಷ್ಟು.....[ಜೆಡಿಎಸ್ : 8 ಶಾಸಕರು ಅಮಾನತು ಮುಂದೇನು?]

* ಕಾರ್ಯಕರ್ತರು ಇರುವವರೆಗೂ ಪಕ್ಷಕ್ಕೆ ಏನೂ ಆಗುವುದಿಲ್ಲ. ನನ್ನ ಹೋರಾಟ ನಿರಂತರವಾಗಿ ಮುಂದುವರೆಯಲಿದೆ
* ಪ್ರಧಾನಿ, ಮುಖ್ಯಮಂತ್ರಿಯಾಗಲು ನಾನು ಬದುಕಿಲ್ಲ. ಪಕ್ಷ ಕಟ್ಟಿ ಹೋರಾಡುತ್ತಿಲ್ಲ.
* ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಹೋರಾಟ ಮಾಡುತ್ತಿದ್ದೇನೆ
* ಸಕ್ಕರೆ ನಾಡಿನಲ್ಲಿ 100 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

jds rally

* ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ ಮುಗಿಸುವುದಾಗಿ ಹೇಳುತ್ತಿದ್ದಾರೆ
* ಬಿಜೆಪಿಯ ಯಡಿಯೂರಪ್ಪ ಅವರು ಮುಂದಿನ ವಿಧಾನಸಭೆಗೆ 150 ಸೀಟು ಗೆಲ್ಲುವ ಬಗ್ಗೆ ಮಾತನಾಡುತ್ತಾರೆ
* ಆಡಳಿತ ಮತ್ತು ಪ್ರತಿಪಕ್ಷಗಳು ರೈತರ ಕಷ್ಟವನ್ನು ಕೇಳುತ್ತಿಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS national president H.D.Deve Gowda said, It is not easy to destroy a party when there are honest party workers. Deve Gowda addressed party rally in Mandya, on June 30, 2016.
Please Wait while comments are loading...