ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಸಾ ಬಂಡೂರಿಗೆ ಆಗ್ರಹಿಸಿ ಟೆಕ್ಕಿಗಳಿಂದ ಉಪವಾಸ

|
Google Oneindia Kannada News

ಬೆಂಗಳೂರು, ಡಿಸೆಂಬರ್, 17: ಕಳಸಾ ಬಂಡೂರಿ ಹೋರಾಟಕ್ಕೆ ಇದೀಗ ಐಟಿ ಬಿಟಿ ಜನರು ಕೈಜೋಡಿಸಿದ್ದಾರೆ. ಬೆಂಗಳೂರಿನ ಸ್ವಾತಂತ್ಯ ಉದ್ಯಾನವನದಲ್ಲಿ ಡಿಸೆಂಬರ್ 19 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಸತ್ಯಾಗ್ರಹದಲ್ಲಿ ಜ್ಞಾನಪೀಠ ಸಾಹಿತಿ ಚಂದ್ರಶೇಖರ ಕಂಬಾರ , ಚಂಪಾ , ಚಿತ್ರನಟ ದೊಡ್ಡಣ್ಣ , ಸಂಗೀತ ನಿರ್ದೇಶಕ ಕೆ ಕಲ್ಯಾಣ , ಹಿರಿಯ ಪತ್ರಕರ್ತ ಪದ್ಮರಾಜ್ ದಂಡಾವತಿ ಭಾಗವಹಿಸಲಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]

karnataka

ಬನವಾಸಿ ಬಳಗ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಉತ್ತರ ಕರ್ನಾಟಕ್ಕೆ ನೀರು ನೀಡುವ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಿರಂತರ ಹೋರಾಟ ನಡೆಯುತ್ತಲೇ ಇದೆ.[ಉತ್ತರ ಕರ್ನಾಟಕದ ಜನರಿಗೆ ಮಿಡಿದ ಬೆಂಗಳೂರು]

ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ರೈತರು ದೆಹಲಿಯ ಜಂತರ್ ಮಂತರ್ ವರೆಗೂ ತಮ್ಮ ಕೂಗು ದಾಖಲಿಸಿ ಬಂದಿದ್ದಾರೆ. ಕನ್ನಡ ಚಲನಚಿತ್ರ ರಂಗ ಸಹ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿತ್ತು. ರಾಜ್ಯದ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬಂದಿದೆ. ಆದರೆ ಇಲ್ಲಿಯವರೆಗೆ ಯಾವ ಸರ್ಕಾರಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಉಪವಾಸ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆ ಜಾರಿಗೆ ಮತ್ತಷ್ಟು ಒತ್ತಡ ತರಬೇಕು ಎಂದು ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.

English summary
Now IT BT people support Kalasa banduri protest. Number of Institutions, writers take Hunger strike at Freedom Park Bengaluru, on December 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X