ಟಿಪ್ಪು ಸುಲ್ತಾನರ 223ನೇ ಉರುಸ್ ಕಾರ್ಯಕ್ರಮಕ್ಕೆ ಆಹ್ವಾನ

ಮಂಡ್ಯ ಸೆ. 08: ಹಜರತ್ ಟಿಪ್ಪು ಸುಲಾನ್ ಅವರ223ನೇ ಉರುಸ್-ಎ-ಷರೀಫ್ ಸಂದಲ್ (ಗಂಧೋತ್ಸವ) ಕಾರ್ಯಕ್ರಮವನ್ನು ಸೆಪ್ಟೆಂಬರ್ 13 ರಂದು ಆಚರಿಸಲಾಗುವುದು ಎಂದು ಮಂಡ್ಯ ಜಿಲ್ಲಾಡಳಿತ ಪ್ರಕಟಿಸಿದೆ.

ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಪೌರಾಡಳಿತ ಸಚಿವರಾದ ಡಾ. ಖಮರಲ್ ಇಸ್ಲಾಮ್ ಸಾಹೇಬ್, ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಹೆಚ್.ಅಂಬರೀಷ್, ವಾರ್ತಾ ಮತ್ತು ಪ್ರಸಾರ ಹಾಗೂ ಮೂಲಭೂತ ಸೌಕರ್ಯ ಸಚಿವರಾದ ಆರ್.ರೋಷನ್ ಬೇಗ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರುಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹಾಗೂ ಹಜರತ್ ಟಿಪ್ಪುಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ ನ ಅಧ್ಯಕ್ಷರಾದ ತನ್ವೀರ್ ಸೇಠ್ ಅಧ್ಯಕ್ಷತೆಯನ್ನು ವಹಿಸುವರು.

Invitation to 221st Urs-E-Shareef of Hazrath Tipu Sultan

ಅಂದು ಮಧ್ಯಾಹ್ನ 3.30 ಗಂಟೆಗೆ ಮಸ್ಝೀದ್-ಎ-ಆಲಾ, ಶ್ರೀರಂಗಪಟ್ಟಣದಿಂದ ಹೊರಟು ಸಂಜೆ 5.30ಕ್ಕೆ ಗಂಬದ್-ಎ-ಶಾಹಿ ತಲುಪುವುದು. ಸಂಜೆ 6.00 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಹಾಗೂ ರಾತ್ರಿ 10.00 ಗಂಟೆಗೆ ಖವ್ವಾಲಿ ನಡೆಯಲಿದೆ.

ಸೆಪ್ಟೆಂಬರ್ 13 ರಂದು ರಾತ್ರಿ 7.00 ಗಂಟೆಯಿಂದ ಹಾಗೂ 14 ರಂದು ಮಧ್ಯಾಹ್ನ 3.00 ಸಂಜೆ 5.00 ಗಂಟೆಯವರೆಗೆ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಗುಂಬಜ್-ಎ-ಷಾಹಿ ನಡೆಯಲಿದ್ದು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಜರತ್ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ ನ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ: ಮಂಡ್ಯ ತಾಲ್ಲೂಕಿನ ಹುಲಿವಾನ ಗ್ರಾಮದಲ್ಲಿ ಉಂಟಾಗಿರುವ ಕೋಮು ಗಲಭೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಹುಲಿವಾನ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕೆರಗೋಡು, ಚಿಕ್ಕಮಂಡ್ಯ, ಕೀಲಾರ ಗ್ರಾಮಗಳಲ್ಲಿ ದಿನಾಂಕ 8-9-2015ರ ಮಧ್ಯಾಹ್ನ 3.00 ಗಂಟೆಯಿಂದ ದಿನಾಂಕ 10-9-2015ರ ಮಧ್ಯರಾತ್ರಿ 12.00 ಗಂಟೆಯವರೆಗೆ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ /ಸಾಗಾಣಿಕೆ/ಶೇಖರಣೆ ಮಾಡುವುದನ್ನು ನಿಷೇಧಿಸಿ ಪಾನನಿರೋಧ (ಒಣ) ದಿನಗಳೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ್ ಅವರು ಆದೇಶವನ್ನು ಹೊರಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+