Dinesh Gundu Rao Interview : ಬಿಜೆಪಿ ಒಳಜಗಳವೇ ನಮಗೆ ವರದಾನ: ದಿನೇಶ್ ಗುಂಡೂರಾವ್ ಸಂದರ್ಶನ
ಭಾರತವನ್ನ ತೋಡೋ ಮಾಡ್ತಾ ಇರೋದು ಸಂಘ ಪರಿವಾರ ಹಾಗೂ ಬಿಜೆಪಿ. ದೇಶವನ್ನ ಜೋಡಿಸುವ ಪ್ರಯತ್ನ ಮಾಡ್ತಾ ಇರೋದು ಕಾಂಗ್ರೆಸ್ ಹಾಗೂ ಬೇರೆ ಬೇರೆ ಸಂಘಟನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರು,ಜನವರಿ 30: ಬಿಜೆಪಿ ಸರ್ಕಾರದಲ್ಲಿ ಎರಡೂವರೆ ವರ್ಷ ಯಾವುದೇ ಅನುದಾನ ನೀಡಿಲ್ಲ. ಬೆಂಗಳೂರಿನ ಪರಿಸ್ಥಿತಿಯೇ ಹಾಳಾಗಿದ್ದು, ಅನುದಾನ ವಿಚಾರದಲ್ಲಿ ವಿರೋಧ ಪಕ್ಷದ ಶಾಸರನ್ನ ಸರ್ಕಾರ ಕಡೆಗಣಿಸಿದೆ ಎಂದು ಗಾಂಧಿನಗರ ಕ್ಷೇತ್ರ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.
ಅಭಿವೃದ್ದ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಹೀಗಾಗಿ ಜನರಿಗೆ ಉತ್ತಮ ಆಡಳಿತ ನೀಡಬೇಕು ಅಂತ ನಾವು ಪಕ್ಷವನ್ನ ಅಧಿಕಾರಕ್ಕೆ ತರ್ಬೇಕು ಹಾಗೂ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡ್ಬೇಕು ಅಂತ ನಾವು ಪಕ್ಷ ಸಂಘಟಿಸಲು ಕಾರ್ಯತಂತ್ರ ರೂಪಿಸುತ್ತಿದ್ದೇನೆ ಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದರು. ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.
1. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಯಾವ ರೀತಿಯಲ್ಲಿ ಸಿದ್ದತೆಯನ್ನ ಮಾಡಿಕೊಂಡಿದೆ.?
ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರವಾಸವನ್ನ ಕೈಗೊಂಡಿದ್ದೇವೆ. ಬಿಜೆಪಿ ಕೊಟ್ಟ ಭರವಸೆಯಲ್ಲಿ ಯಾವುಗಳನ್ನ ಈಡೇರಿಸಲ್ಲ ಆ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇವೆ. ಈ ಬಾರಿ ರಾಜ್ಯದಲ್ಲಿ ನಮ್ಮ ಪಕ್ಷದ ಪರವಾದ ಗಾಳಿ ಬೀಸುತ್ತಿದೆ ಎಂದು ಹೇಳಿದರು.

2.ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಲೋಕಾಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಯಾವ ರೀತಿಯಲ್ಲಿ ವರ್ಕೌಟ್ ಆಗಬಹುದು.?
ಭಾರತ್ ಜೋಡೋ ಯಾತ್ರೆ ಚುನಾವಣೆಗೆ ಸಂಬಂಧಿಸಿದಲ್ಲ. ಜೋಡೋ ಯಾತ್ರೆ ದೇಶದಲ್ಲಿರುವ ಸನ್ನಿವೇಶ, ಪರಿಸ್ಥಿತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಬಿಜೆಪಿ,ಸಂಘ ಪರಿವಾರ ಸೇರಿದಂತೆ ಅನೇಕ ಸಂಘಟನೆಗಳು ದ್ವೇಷದ ವಾತಾವರಣವನ್ನ ನಿರ್ಮಾಣ ಮಾಡಿದ್ದು, ಜನರು ಅನುಭವಿಸುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹಾಗೂ ಏರುಪೇರಿನ ಸಮಾಜ ನಿರ್ಮಾಣವಾಗುತ್ತಿದೆ. ಇನ್ನೂ ಬಡವರು ಇನ್ನೂ ಹೆಚ್ಚು ಬಡವರಾಗುತ್ತಿದ್ದಾರೆ, ಶ್ರೀಮಂತರು ಆಗ್ರ ಶ್ರೀಮಂತರಾಗುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನ ಜನರಿಗೆ ಗೊತ್ತಾಗಬೇಕು ದೇಶ ಒಗ್ಗೂಡಬೇಕು ಹಾಗೂ ಜನರ ನಡುವೆ ಪ್ರೀತಿ ಪ್ರೇಮ ಬೆಳೆಯಬೇಕು ಅಲ್ಲದೇ ಬಿಜೆಪಿಯ ದುರಾಡಳಿತದಿಂದ ಜನತೆ ಹೆಚ್ಚೆತ್ತುಕೊಳ್ಳಬೇಕು ಎಂದು ಈ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದರು.
3. ಇದು ಭಾರತ್ ಜೋಡೋ ಯಾತ್ರೆ ಅಲ್ಲ, ಭಾರತ್ ತೋಡೋ ಯಾತ್ರೆ ಎಂದು ಬಿಜೆಪಿ ಟೀಕೆ ಮಾಡುತ್ತಿರುವ ವಿಚಾರವಾಗಿ ಮಾತನಾಡಿ.?
ಬಿಜೆಪಿಯವರು ದೇಶವನ್ನ ಹೊಡೆಯುತ್ತಿದ್ದಾರೆ. ಹಿಂದೂ,ಮುಸ್ಲಿಂ ಮದ್ಯ ವ್ಯತ್ಯಾಸವನ್ನ ಹೆಚ್ಚು ಮಾಡುವುದು. ಸಂವಿಧಾನ ಸಂಸ್ಥೆಗಳನ್ನ ಉಪಯೋಗಿಸಿಕೊಂಡು ಜನರ ಮೇಲೆ ದಾಳಿ ಮಾಡುವುದು, ಸಾಮಾಜಿಕ ಸೇವೆ ಮಾಡುವವರ ವಿರುದ್ದ ಕೇಸ್ ಹಾಕುವುದು. ಇನ್ನೂ ಅವರ ವಿರುದ್ದವಾಗಿ ಯಾರು ಇರತ್ತಾರೋ ಅವರೆಲ್ಲಾ ದೇಶದ್ರೋಹಿ ಅಂತ ಹೇಳುವುದು. ಈ ದೇಶದ್ರೋಹಿ ಎಂಬ ಪದ ಹೆಚ್ಚು ಬಳಕೆಯಾಗುವುದು ಈ ಬಿಜೆಪಿ ಆಡಳಿತದಲ್ಲಿ. ಯಾರು ಇವರ ವಿರುದ್ದವಾಗಿ ಇದಾರೆ ಅವರನ್ನ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ದೇಶವನ್ನ ಹೊಡೆಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. ನಾವು ಬಿಜೆಪಿಯವರನ್ನ, ಆರ್ ಎಸ ಎಸ್ ನವರನ್ನ ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳ್ತಿವಾ.? ಹೇಳಲ್ಲಾ ನಾವು ಎಲ್ಲಾರು ಈ ದೇಶದ ಪ್ರಜೆಗಳು. ಎಲ್ಲಾರ ರಾಜಕೀಯ ಸಿದ್ದಾಂತ ಬೇರೆ ಇರ್ಬಹುದು.ಅದ್ರೆ ದೇಶ ಪ್ರೇಮವನ್ನ ಸಾಭಿತು ಪಡಿಸಿಕೊಳ್ಳುವ ಅನಿವಾರ್ಯತೆ ಯಾರಿಗೂ ಇರ್ಬಾರ್ದು. ಭಾರತವನ್ನ ತೋಡೋ ಮಾಡ್ತಾ ಇರೋದು ಸಂಘ ಪರಿವಾರ ಹಾಗೂ ಬಿಜೆಪಿ. ದೇಶವನ್ನ ಜೋಡಿಸುವ ಪ್ರಯತ್ನ ಮಾಡ್ತಾ ಇರೋದು ಕಾಂಗ್ರೆಸ್ ಹಾಗೂ ಬೇರೆ ಬೇರೆ ಸಂಘಟನೆ ಎಂದು ಹೇಳಿದರು.
4. ಗಾಂಧಿ ನಗರ 5 ವರ್ಷದಿಂದ ಏನು ಅಭಿವೃದ್ದಿಯಾಗಿಲ್ಲ ಎಂದು ಬಿಜೆಪಿ ನಾಯಕರ ಟೀಕೆ ಮಾಡುತ್ತಿದ್ದಾರೆ, ಹಾಗಾದ್ರೆ ಗಾಂಧಿನಗರ ಅಭಿವೃದ್ದಿಯಾಗಿಲ್ವಾ?
ಇದು ಸುಳ್ಳಿನ ಆಪಾದನೆ. ಬಿಜೆಪಿ ಸರ್ಕಾರದಲ್ಲಿ ಎರಡೂವರೆ ವರ್ಷ ಯಾವುದೇ ಅನುದಾನ ಕೊಡ್ಲಿಲ್ಲ. ಬೆಂಗಳೂರಿನ ಪರಿಸ್ಥಿತಿಯೇ ಹಾಳಾಗಿದ್ದು, ಅನುದಾನ ವಿಚಾರದಲ್ಲಿ ವಿರೋಧ ಪಕ್ಷದ ಶಾಸರನ್ನ ಕಡೆಗನಿಸಿದರು. ನಾವು ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸವನ್ನ ಮಾಡಿದ್ದೇವೆ. ಬಿಜೆಪಿಗೆ ಅಭಿವೃದ್ದಿ ಎನ್ನುವ ಉದ್ದೇಶ ಇದೆ. ಅಭಿವೃದ್ದಿ ಎಂಬುದು ನಿರಂತರ. ಈ ಸರ್ಕಾರ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಿದೆ. ಬಿಜೆಪಿ ಬೆಂಗಳೂರು ಅಭಿವೃದ್ದಿ ವಿಚಾರದಲ್ಲಿ ಯಶಸ್ವಿಯಾಗಿಲ್ಲ. ಹೆಬ್ಬಾಳ ಫ್ಲೈ ಓವರ್ ನೇ ಸರಿ ಪಡಿಸಲು ಆಗಲಿಲ್ಲ. ಮುಖ್ಯಮಂತ್ರಿಗಳು ಒಮ್ಮೆಯೂ ಕರೆದು ಕೇಳಲಿಲ್ಲ ಎಂದು ಸಿಎಂ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

5. ರಸ್ತೆಗುಂಡಿಯಿಂದ ಸಾಕಷ್ಟು ಜನ ಅಮಾಯಕರು ಬಲಿಯಾದ್ರೂ..ಇದೆಲ್ಲವನ್ನ ನೋಡಿದ್ರೆ ರಾಜಕಾರಣಿಗಳಿಗೆ ಮನಸ್ಸೇ ಇಲ್ವಾ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.?
ಕೆಲಸಕ್ಕೆ ಸರಿಯಾಗಿ ಹಣ ಕೊಡದೇ ಲೂಟಿ ಮಾಡಿಕೊಂಡು ಹೋದ್ರೆ ಎಲ್ಲಿ ಕೆಲಸವಾಗುತ್ತದೆ. ಕಳಪೆ ಕಾಮಗಾರಿ, 40 % ಕಮಿಷನ್ ನಿಂದ ಯಾವ ಕೆಲಸವಾಗುತ್ತಿಲ್ಲ. ಒಂದು ಕಾರ್ಯಕ್ರಮ ಘೋಷಣೆಯಾಗಬೇಕು ಅಂದ್ರೂ ಕಮಿಷನ್ ಕೊಡ್ಬೇಕು. ಟೆಂಡರ್ ಗೂ ಹಣ ಕೊಡ್ಬೇಕು. ಹೀಗಾಗಿ ಎಲ್ಲಿ ಗುಣಮಟ್ಟದ ಕೆಲಸ ಮಾಡಲು ಸಾದ್ಯವಾಗುತ್ತದೆ. ಈ ಕಮಿಷನ್ ವಿಚಾರ ನಾವು ಹೇಳ್ತಾ ಇಲ್ಲ ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಈಗಾಗಲೇ ಕೆಲ ಗುತ್ತಿಗೆದಾರರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಭ್ರಷ್ಟಚಾರ ಯಾವ ಸರ್ಕಾರದಲ್ಲೂ ಇಲ್ಲ ಅಂತ ನಾನು ಹೇಳಲ್ಲ. ಭ್ರಷ್ಟಚಾರ ಸಮಸ್ಯೆ ಈ ದೇಶದಲ್ಲಿ ಇದೆ. ಈ ಸರ್ಕಾರಕ್ಕೆ ಹಣ ಮಾಡ್ಬೇಕು ಆ ಹಣವನ್ನ ಚುನಾವಣೆಯಲ್ಲಿ ಖರ್ಚು ಮಾಡ್ಬೇಕು ಎನೋ ಒಂದೇ ಉದ್ದೇಶ. ಜನರಿಗೆ ಒಂದು ಓಟ್ ಗೆ 2 ಸಾವಿರ ಅಥವಾ 3 ಸಾವಿರ ಕೊಡ್ಬೇಕು ಗೆಲ್ಲ ಬೇಕು ಎಂಬ ಸ್ಟ್ಯಾಟರ್ಜಿ ಇವರದ್ದು, ಹಾಗೂ ಈ ಭ್ರಷ್ಟಚಾರವನ್ನ ಮುಚ್ಚಿ ಹಾಕಲು ಹಿಂದುತ್ವ, ಜೈ ಶ್ರೀರಾಮ್ ಬಗ್ಗೆ ಹೇಳಿ ಕೊಳ್ಳುವುದು. ವಿರೋಧ ಪಕ್ಷದ ಮೇಲೆ ಆ ಕೇಸು ಈ ಕೇಸ್ ಅಂತ ಹಾಕಿ ಕಟ್ಟಿ ಹಾಕುವುದು ಅನೋ ಉದ್ದೇಶದಲ್ಲಿ ಇದ್ದಾರೆ. ಅದಲ್ಲದೇ ಚುನಾವಣೆ ಇನ್ನೂ ಆಗಿಲ್ಲ, ಮೆಜಾರಿಟಿ ಬರ್ಲಿಲ್ಲ ಅಂದ್ರೂ ನಾವು ಸರ್ಕಾರ ರಚನೆ ಮಾಡ್ತಿವಿ ಅಂತ ಹೇಳ್ತಿದ್ದಾರೆ ಎಷ್ಟು ಭ್ರಷ್ಟರಾಗಿದ್ದಾರೆ ಇವರು ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
6. ಅಭಿವೃದ್ದಿ ವಿಚಾರ ಅಂತ ಬಂದಾಗ ರಾಜಕೀಯ ಮಾಡೋದು ಬಿಜೆಪಿಗೆ ಚಟ ಅಂತ ಬಿಜೆಪಿ ಟೀಕೆ ಮಾಡುತ್ತಿದೆ.?
ಸರ್ಕಾರ ಅಭಿವೃದ್ದ ಹೆಸರಲ್ಲಿ ಲೂಟಿ ಮಾಡುತ್ತಿದೆ. ಅಭಿವೃದ್ದಿ ರಾಜ್ಯ ಸಂಪೂರ್ಣವಾಗಿ, ಸಮಗ್ರವಾಗಿ ಅಭಿವೃದ್ದಿಯಾಗಬೇಕು. ಇವರ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಕಿಡಿಕಾರಿದರು.
7. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ ಅನ್ನೋ ಟೀಕೆ ಇದೆ. ದಿನೇಶ್ ಗುಂಡೂರಾವ್ ಯಾವ ಬಣಕ್ಕೆ ಸೇರುತ್ತಾರೆ.?
ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬಣ ಇರುತ್ತೆ. ಬಣ ಇಲ್ಲದೇ ಇರುವ ರಾಜಕಾರಣ ಮಾಡಲು ಆಗಲ್ಲ. ಏನೇ ಗುಂಪು ಇದ್ರೂ ಒಗ್ಗಟ್ಟಾಗಿ ಕೆಲಸ ಮಾಡ್ಬೇಕು. ನಾನು ಯಾವ ಬಣಕ್ಕೂ ಸೇರಿಲ್ಲ. ನನ್ನದು ಕಾಂಗ್ರೆಸ್ ಬಣ. ನಮಗೆ ಕಾಂಗ್ರೆಸ್ ಪಕ್ಷ ಬೆಳೆಯಬೇಕು ಅಷ್ಟೇ. ಪಕ್ಷದಲ್ಲಿ ಬಣಗಳು ಇದ್ರೂ ಸಹ ತಪ್ಪೇನಿಲ್ಲ, ಆದರೆ ಅದರಿಂದ ಪಕ್ಷಕ್ಕೆ ತೊಂದರೆಯಾಗಬಾರ್ದು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ಜನ ಒಟ್ಟಾಗಿ ಪ್ರಚಾರ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬಿಜೆಪಿ ಮಾಡ್ತಾ ಇದ್ದಾರೆ ಅಷ್ಟೇ . ಬಿಜೆಪಿ ನಾಯಕರಾದ ಮುರುಗೇಶ್ ನಿರಾಣಿ ಹಾಗೂ ಯತ್ನಾಳ್ ಪಬ್ಲಿಕ್ ನಲ್ಲಿ ಒಬ್ಬರನೊಬ್ಬರು ಟೀಕೆ ಮಾಡುವುದನ್ನ ನೋಡಿದ್ದೇವೆ, ನಮ್ಮ ಪಕ್ಷದಲ್ಲಿ ಇವೆಲ್ಲಾ ಇಲ್ಲ ಎಂದರು. ಅಲ್ಲದೇ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಮಾತನ್ನ ಯಾರು ಕೇಳ್ತಾ ಇಲ್ಲ, ಜೊತೆಗೆ ಯಾರು ಮುಖ್ಯಮಂತ್ರಿಗಳಿಗೆ ಸಹಕಾರ ಕೊಡ್ತಾ ಇಲ್ಲ. ಆಡಳಿತದಲ್ಲಿ ಸಿಎಂ ಗೆ ಕಂಟ್ರೋಲ್ ಸಿಗ್ತಾ ಇಲ್ಲ. ಬಿಜೆಪಿಯಲ್ಲಿ ಆಂತರಿಕ ಸಮಸ್ಯೆ ಇದೆ. ಆದರೆ ನಮ್ಮಲ್ಲಿ ಯಾವುದೇ ದೊಡ್ಡ ಮಟ್ಟದ ಸಮಸ್ಯೆ ಇಲ್ಲ ಎಂದು ಹೇಳಿದರು.

8. ಕಾಂಗ್ರೆಸ್ ಪಕ್ಷದಲ್ಲಿ ಯಾಕೆ ಪದೇ ಪದೇ ಸಿಎಂ ವಿಚಾರ ಚರ್ಚೆಗೆ ಬರುತ್ತೆ. ?
ಸಿಎಂ ವಿಚಾರ ಈ ಹಿಂದೆ ಚರ್ಚೆಯಾಗಿತ್ತು. ಅಭಿಮಾನಿಗಳು ಪ್ರೀತಿ ವಿಶ್ವಾಸದಿಂದ ಹಾಗೇ ಹೇಳಿದ್ರು. ಜಮೀರ್ ಗೆ ಸಿದ್ದರಾಮಯ್ಯ ಮೇಲೆ ಅಭಿಮಾನ ಜಾಸ್ತಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ರು ಅವರ ಮೇಲೆ ಅಭಿಮಾನ ಜಾಸ್ತಿ. ಅಭಿಮಾನ ಹಾಗೂ ಪ್ರೀತಿ ವಿಶ್ವಾಸದಿಂದ ಹಾಗೇ ಹೇಳಿದ್ದಾರೆ ಅದರಲ್ಲಿ ಯಾವುದೇ ದುರುದ್ದೇಶ ಇಲ್ಲ.
9. ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕಾಟ ಯಾಕಿಷ್ಟು ಗೊಂದಲಾಯ್ತು.?
ಕೋಲಾರದಲ್ಲಿ ಸ್ಪರ್ಧೆ ಮಾಡ್ಲೇ ಬೇಕು ಅಂತ ಅಲ್ಲಿನ ಕಾರ್ಯಕರ್ತರು ಹಾಗೂ ಅಲ್ಲಿನ ರಾಜಕೀಯ ಮುಖಂಡರು ಸಾಕಷ್ಟು ಒತ್ತಡ ಹಾಕಿದ್ದಾರೆ. ಬಾದಾಮಿ ಕ್ಷೇತ್ರ ಅವರಿಗೆ ಹೋಗಿ ಬರಲು ಸಾಕಷ್ಟು ಸಮಸ್ಯೆಯಾಗುತ್ತದೆ. ಕೋಲಾರ ಭಾಗದ ಜನರ ಒತ್ತಡಕ್ಕೆ ಮಣಿದು ಹೈಕಮಾಂಡ್ ಹೇಳಿದ್ರೆ ನಾನು ಕೋಲಾರದಲ್ಲಿ ನಿಲ್ಲುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ವರ್ಚಸ್ಸು ಇಡೀ ಕರ್ನಾಟಕದಲ್ಲಿ ಇದೆ. ಈಗ ನಾನು ಹುಬ್ಬಳ್ಳಿ ಬೆಳಗಾವಿಯಲ್ಲಿ ಹೋಗಿ ನಿಲ್ಲುತ್ತಿನಿ ಅಂದ್ರೆ ಜನ ಒಪ್ಪಿಕೊಳ್ಳುತ್ತಾರಾ ಇಲ್ಲ ಅಲ್ವಾ.? ಆದರೆ ಸಿದ್ದರಾಮಯ್ಯ ಅವರಿಗೆ ಆ ವರ್ಚಸ್ಸು ಇದೆ ಎಂದು ಹೇಳಿದರು.
10. ಸಿದ್ದರಾಮಯ್ಯ ವರನ್ನ ಹರಕೆಯ ಕುರಿ ಮಾಡಲು ಕಾಂಗ್ರೆಸ್ ನಾಯಕರು ರೆಡಿಯಾಗಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಟೀಕೆ ಮಾಡುತ್ತಿದೆ. ?
ಅವರಿಗೆ ಬೇರೆ ದಾರಿ ಇಲ್ಲ. ಹೀಗಾಗಿ ಅವರು ಹಾಗೇ ಹೇಳುತ್ತಿದ್ದಾರೆ. ಕೋಲಾರಕ್ಕೆ ಹೋಗಬೇಕು ಅಂತ ಸಿದ್ದರಾಮಯ್ಯ ಬಯಸಿಲ್ಲ, ಅಲ್ಲಿನ ಜನರು, ಅಲ್ಲಿನ ಮುಖಂಡರೇ ಹೇಳಿದ್ದು, ಕೆ ಹೆಚ್ ಮುನಿಯಪ್ಪ, ರಮೇಶ್ ಕುಮಾರ್ ಅವರು ಸೇರಿದಂತೆ ಸಾಕಷ್ಟು ಜನ ನಾಯಕರಿದ್ದಾರೆ ಅವರೇಲ್ಲಾ ಹರಕೆ ಕುರಿ ಮಾಡಬೇಕು ಅಂತಾ ಇದಾರಾ.? ಅದು ಕೇವಲ ಟೀಕೆ ಅಷ್ಟೇ . ಸಿದ್ದರಾಮಯ್ಯ ಅವರ ಜನಪ್ರಿಯತೆಗೆ ಸಾಕ್ಷಿ ಇದು ಎಂದು ಹೇಳಿದರು.

11. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ, ಕೊನೆ ಕ್ಷಣದಲ್ಲಿ ಓಡಿ ಹೋಗ್ತಾರೆ ಎಂದು ಬಿ ಎಸ್ ಯಡಿಯೂರಪ್ಪ ನವರ ಹೇಳಿಕೆ?
ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ತಿರ್ಮಾನ ತೆಗೆದುಕೊಂಡ ಮೇಲೆ ಹಿಂದೆ ಹೋಗುವಂತ ಮನುಷ್ಯ ಅಲ್ಲ. ಹೈಕಮಾಂಡ್ ಒಪ್ಪಿದ್ರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರಿಗೆ ಅದರ ಬಗ್ಗೆ ಯಾಕೆ ಚಿಂತೆ. ಸಿದ್ದರಾಮಯ್ಯ ನವರ ಬಗ್ಗೆ ಮಾತನಾಡುವ ಅವಶ್ಯಕತೆ ಯಡಿಯೂರಪ್ಪನವರಿಗೆ ಇರ್ಬಾರ್ದಿತ್ತು ಎಂದು ಹೇಳಿದ್ರು. ಎಲ್ಲಾರು ಒಗ್ಗಟ್ಟಾಗಿ ಹೋಗುತ್ತಿದ್ದೇವೆ. ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರ್ಬೇಕು ಅಂತ ಸಮೂಹಿಕ ನಾಯಕತ್ವದಲ್ಲಿ ಹೋಗುತ್ತಿದ್ದೇವೆ. ಒಳ್ಳೆಯ ಆಡಳಿತ ತರ್ಬೇಕು ಎಂದರು.
12. ಕಾಂಗ್ರೆಸ್ ಒಳರಾಜಕೀಯ ಬಿಜೆಪಿ ಪಕ್ಷಕ್ಕೆ ವರದಾನ ವಾಗಲಿದೇಯೇ.?
ಬಿಜೆಪಿಯ ಒಳರಾಜಕಾರಣ ನಮಗೆ ವರದಾನವಾಗುತ್ತಿದೆ. ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿದವರೇ ಹೇಳ್ತಾ ಇದ್ದಾರೆ, ಬಿಜೆಪಿ ಸರ್ಕಾರ ಹೋಗ್ಬೇಕು ಅಂತ. ಯಾರೋ ಬಂದು ಯಾರೋ ಮಜಾ ಮಾಡುತ್ತಿದ್ದಾರೆ. ಪಕ್ಷ ಕಟ್ಟಿ ಬೆಳೆಸಿದವರು ಯಾರೋ, ಫಲ ತಗೊಂಡು ಅಧಿಕಾರ ಅನುಭವಿಸುತ್ತಿರುವವರು ಯಾರೋ ಎಂದು ಬಿಜೆಪಿ ನಿಷ್ಟವಂತ ಕಾರ್ಯಕರ್ತರು ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ ಎಂದು ಹೇಳಿದರು.
13.ಪಂಚರತ್ನ ರಥಯಾತ್ರೆಯಿಂದ ಜನಬೆಂಬಲ ಜೆಡಿಎಸ್ ಪರ ಅಲೆ ಹೆಚ್ಚಾಗುತ್ತಿದೆಯೇ. ?
ಚುನಾವಣಾ ಫಲಿತಾಂಶ ಬಂದಾಗ ಗೊತ್ತಾಗುತ್ತದೆ. ಆದರೆ ಕುಮಾರಸ್ವಾಮಿ ಅವರ ವರ್ಚಸ್ಸು ಕಡಿಮೆಯಾಗುತ್ತಿದೆ. ಕುಮಾರಸ್ವಾಮಿ ಅವರನ್ನ ನಾವು ಮುಖ್ಯಮಂತ್ರಿಯಾಗಿ ಮಾಡಿದ್ವಿ. ಮುಖ್ಯಮಂತ್ರಿಯಾಗಿ ಯಾವ ರೀತಿ ನಿರ್ಣಯ ಮಾಡ್ಬೇಕಿತ್ತೋ ಆ ರೀತಿಯಾಗಿ ನಿರ್ವಹಣೆ ಮಾಡಲಿಲ್ಲ, ದೇಶದಲ್ಲಿ ಕೋಮುವಾದಿ ಪಕ್ಷಗಳು ಬೆಳೆಯಬಾರದು ಅಂತ ನಾವು ಅಧಿಕಾರ ಕೊಟ್ವಿ. ನಮಗೆ ರಾಷ್ಟ್ರ ಮಟ್ಟದ ಚಿಂತನೆ ಹೆಚ್ಚಾಗಿತ್ತು. ಕುಮಾರಸ್ವಾಮಿ ಅವರ ಮುಂದಿನ ಚುನಾವಾಣಾ ಉದ್ದೇಶವೂ ಅಷ್ಟೇ. ಯಾರಿಗೂ ಬಹುಮತ ಬಾರಬಾರದು. 20 ಅಥವಾ 30 ಸೀಟ್ ಇಟ್ಟುಕೊಂಡು ಎಲ್ಲಾರನ್ನ ಬ್ಲಾಕ್ ಮೇಲ್ ಮಾಡಿಕೊಂಡು ಆಟ ಆಡ್ಬೇಕು ಅನೋ ಉದ್ದೇಶ ಇದೆ. ಜನರಿಗೂ ಇದು ಗೊತ್ತಾಗಿದೆ. ಅವರು ಪ್ರಮಾಣಿಕತೆಯಿಂದ ರಾಜಕೀಯ ಪಕ್ಷ ಕಟ್ಟಿದ್ದಾರೆ ಚನ್ನಾಗಿ ಇರ್ತಿತ್ತು. ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಬಿಟ್ರೆ ಯಾರು ಅವರ ಪಕ್ಷದಲ್ಲಿ ಇಲ್ಲ. ಒಳ್ಳೆಯ ನಾಯಕರು ಅವರ ಪಕ್ಷ ಬಿಡ್ತಾ ಇದ್ದಾರೆ, ಅಧಿಕಾರಕ್ಕಾಗಿ ಮಾತ್ರ ಆ ಪಕ್ಷ ಇದೆ. ಯಾವುದೇ ಸಿದ್ದಾಂತ ನೈತಿಕತೆ ಇಲ್ಲ, ಜಾತಿ ಇಟ್ಟುಕೊಂಡು ರಾಜಾಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ರು.
14. ಮೈತ್ರಿ ಸರ್ಕಾರ ಪತನವಾಗಲೂ ಜೆಡಿಎಸ್ ಕಾರಣನಾ ಅಥವಾ ಕಾಂಗ್ರೆಸ್ ಕಾರಣನಾ.?
ಇಬ್ಬರುದ್ದು ತಪ್ಪಿದೆ. 80 ಜನರನ್ನಇಟ್ಟುಕೊಂಡು ಅವರನ್ನ ಮುಖ್ಯಮಂತ್ರಿ ಮಾಡಿದ್ದೇ ತಪ್ಪು ನಿರ್ಧಾರ. ದೇಶ ಭವಿಷ್ಯವನ್ನ ನೋಡಿಕೊಂಡು, ಹೈಕಮಾಂಡ್ ಹೇಳಿದ್ದನ್ನ ನೋಡಿಕೊಂಡು ಮೈತ್ರಿ ಮಾಡಿದ್ದಿ. ಸರ್ಕಾರ ಬಂದ ಮೇಲೆ ಎರಡು ಪಕ್ಷಗಳ ನಡುವೆ ಹೊಂದಾಣಿಕೆಯಾಗಲೇ ಇಲ್ಲ. ಅದರಲ್ಲಿ ಜೆಡಿಎಸ್ ಪಕ್ಷದ್ದೇ ತಪ್ಪು. ಎಲ್ಲಾ ಅವರ ಕಂಟ್ರೋಲ್ ನಲ್ಲೇ ಇತ್ತು. ನಮ್ಮಲ್ಲೂ ಸಹ ಆಂತರಿಕ ಸಮಸ್ಯೆ ಬೆಳೆದಿತ್ತು. ಎಲ್ಲಾರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗ ಬಹುದಿತ್ತು. ಸರ್ಕಾರ ಪತನವಾಗಲು ಇಬ್ಬರದ್ದು ತಪ್ಪಿದೆ. ಸರ್ಕಾರವನ್ನ ಸರಿಯಾಗಿ ಕುಮಾರಸ್ವಾಮಿ ನಡೆಸಿಕೊಂಡು ಹೋಗಿದ್ರೆ ಪತನವಾಗುತ್ತಾ ಇರ್ಲಿಲ್ಲ. ಎರಡು ಬಾರಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದೆ ಕುಮಾರಸ್ವಾಮಿ ಅವರು ಎಂದು ಹೇಳಿದರು.
15. ಈ ಬಾರೀ ಚುನಾವಣಾ ಫಲಿತಾಂಶ ಅತಂತ್ರವಾದ್ರೆ ಈ ಬಾರಿಯೂ ಜೆಡಿಎಸ್ ಜೊತೆಗೆ ಮೈತ್ರಿಯಾಗುತ್ತಿರಾ. ?
ಜನರಿಗೂ ಅತಂತ್ರ ಸರ್ಕಾರ ಬೇಡ ಅಂತ ಅರ್ಥವಾಗಿದೆ. ಎಲ್ಲಾ ಸಮೀಕ್ಷೆಯಲ್ಲೂ ಕಾಂಗ್ರೆಸ್ ಪಕ್ಷ ಮುಂದಿದೆ. ಮೊದಲ ಸ್ಥಾನ ಕಾಂಗ್ರೆಸ್, ಎರಡನೇ ಸ್ಥಾನ ಬಿಜೆಪಿ ಹಾಗೂ ಬಹಳ ದೂರದಲ್ಲಿ ಜೆಡಿಎಸ್ ಪಕ್ಷವಿದೆ. ಕಾಂಗ್ರೆಸ್ ಕೊಟ್ತಾ ಇರುವ ಭರವಸೆ ಹಾಗೂ ನಾವು ಕೊಟ್ಟ ಆಡಳಿತವನ್ನ ನೋಡಿದ್ರೆ ಜನರ ಒಲುವು ಬದಲಾಗಿದೆ.
16. ಮೋದಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಿಸಲು ರೆಡಿಯಾಗಿದ್ದಾರೆ. ನಿಮ್ಮ ಪಕ್ಷದಿಂದ ಯಾವ ರೀತಿ ತಯಾರಿಯನ್ನ ನಡೆಸಿದಿರಾ.?
ಮೋದಿ, ಅಮಿತ್ ಶಾ ಬಂದ್ರೆ ಏನು ಆಗುತ್ತದೆ.? ಹಿಂದೆ ಬಿಜೆಪಿ 110 ಸೀಟ್ ಬಂದಾಗ ಮೋದಿ ಇರ್ಲಿಲ್ಲ. ಮೋದಿ ಚುನಾವಣಾ ಪ್ರಚಾರಕ್ಕೆ ಬಂದಾಗ 100 ಬಂತು, ಅದಕ್ಕೂ ಹಿಂದೆ 80 ಬಂತು. ಹಿಮಾಚಲ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಕೇರಳದಲ್ಲಿ ಮೋದಿ, ಅಮಿತ್ ಶಾ ಪ್ರಚಾರ ಮಾಡಿ ಎಲ್ಲಾ ಕಡೆ ಸೋತು ಹೋಯ್ತು. ಗುಜರಾತ್, ಉತ್ತರ ಪ್ರದೇಶದಲ್ಲಿ ಗೆದಿದ್ದಾರೆ. ಮೋದಿ ಅಮಿತ್ ಶಾ ಹೋದ್ರಿ ಗೆಲ್ಲುತ್ತೇವೆ ಎನ್ನುವ ಭ್ರಮೆ ಸೃಷ್ಟಿ ಮಾಡಿದ್ದಾರೆ. ಆಪರೇಷನ್ ಕಮಲ ಮಾಡಿ ಗೆದ್ದಿದ್ದಾರೆ. 80 % ಅಮಿತ್ ಶಾ, ಮೋದಿ ಹೋದ ಕಡೆ ಸೋತ್ತಿದ್ದಾರೆ ಎಂದರು.
17. ಕರ್ನಾಟಕ ಮುಕ್ತ ಕಾಂಗ್ರೆಸ್ ಮಾಡ್ತಿವಿ ನೋ ಬಿಜೆಪಿ ಕನಸು ನನಸಾಗುತ್ತಾ. ?
ಕಾಂಗ್ರೆಸ್ ಮುಕ್ತ ಅಂತ ಹೇಳುವುದು ಪ್ರಜಾಪ್ರಭುತ್ವಕ್ಕೆ ದಿಕ್ಕಾರಿಸುವಂತ ಹೇಳಿಕೆ. ಯಾಕೆ ಮುಕ್ತ ಮಾಡ್ಬೇಕು. 70 ವರ್ಷ ಆಡಳಿತ ನಡೆಸಿದ್ದೇವೆ. ಯಾವತ್ತಾದ್ರೂ ಬಿಜೆಪಿ ಮುಕ್ತ ಮಾಡ್ಬೇಕು ಅಂತ ಹೇಳಿದ್ದೀವಾ. ಹಾಗೇ ಹೇಳಬಾರದು. ಚುನಾವಣೆಗಳು ಇರ್ಬೇಕು ಹಾಗೇ ರಾಜಕೀಯ ಪಕ್ಷಗಳು ಇರ್ಬೇಕು. ಗೆಲುವು ಸೋಲು ಇನ್ನೊಂದು ಕಡೆ. ಜನ ತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಬೇಕು, ಆದ್ರೆ ಅವರಿಗೆ ನಂಬಿಕೆ ಇಲ್ಲ, ಸರ್ವಾಧಿಕಾರದ ಮೇಲೆ ನಂಬಿಕೆ. ಕಾಂಗ್ರೆಸ್ ಪಕ್ಷವನ್ನ ಯಾರು ಮುಕ್ತ ಮಾಡಲು ಸಾಧ್ಯವೇ ಇಲ್ಲ ಎಂದರು.
18. ಈ ಬಾರೀ ಬಜೆಟ್ ನಿಂದ ರಾಜ್ಯದ ಜನತೆಗಾಗಿ ಏನು ನಿರೀಕ್ಷೆ ಮಾಡುತ್ತೀರಾ. ?
ಈ ಬಜೆಟ್ ನಾ ಮಾಡಬಾರದು. ಈ ಬಜೆಟ್ ನಿಂದ ಏನು ಮಾಡಲು ಆಗಲ್ಲ. ಸುಳ್ಳು ಭರವಸೆ ಕೊಡಲು ಒಂದು ಪುಸ್ತಕವಷ್ಟೆ. ಎರಡು ತಿಂಗಳು ಚುನಾವಣೆ ಇರುವಾಗ ಬಜೆಟ್ ಮಾಡಿದ್ರೆ ಏನು ಉಪಯೋಗವಾಗಲ್ಲ. ಈ ಬಜೆಟ್ ನಿಂದ ಏನು ನಿರೀಕ್ಷೆ ಇಲ್ಲ. ಈ ಬಜೆಟ್ ಒಂದು ಸುಳ್ಳಿನ ಕಂತೆ ಅಷ್ಟೇ. ಕೊಟ್ಟ ಮಾತನ್ನ ಯಾವುದನ್ನ ಉಳಿಸಿಕೊಂಡಿಲ್ಲ, 90 % ಯಾವುದೂ ಮಾಡಿಲ್ಲ. ಕೊನೆ ಎರಡು ತಿಂಗಳಲ್ಲಿ ಏನು ಕೊಡ್ತಾರೆ ಎಂದು ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದರು.
19. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಸುಳ್ಳು ಭರವಸೆಯನ್ನ ಕೊಡುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ.
ನಾವು ಹೇಳಿದನ್ನ ಮಾಡುತ್ತೇವೆ. 200 ಯೂನಿಟ್ ಕೊಡ್ತಿವಿ ಅಂದ್ರೆ ಕೊಡ್ತಿವಿ ಅಂತನೇ ಅದು ಹೇಗೆ ಕೊಡ್ಬೇಕು ಅಂತ ನಮಗೆ ಗೊತ್ತು. ನಾವು ಹೇಳಿದನ್ನ ಮಾಡುತ್ತೇವೆ. ಜನರ ಬದುಕು ಕಷ್ಟವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಿದೆ, ಜನರ ಆದಾಯ ಹೆಚ್ಚಾಗಿಲ್ಲ. ಹೀಗಾಗಿ ನಮ್ಮ ಸರ್ಕಾರದಿಂದ ಯಾರಿಗೆ ಹಣದ ಬೇಡಿಕೆ ಇದ್ಯೋ ಅವರಿಗೆ ಖಂಡಿತವಾಗಿಯೂ ಕೊಡ್ತಿವಿ. ಕೊಟ್ಟ ಮಾತನ್ನ ನಾವು ಈಡೇರಿಸುತ್ತೇವೆ ಎಂದು ಹೇಳಿದರು.












Click it and Unblock the Notifications