ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕೆದಾಟು ವಿವಾದ : ಕಾನೂನು ಸ್ಥಿತಿ-ಗತಿ ಏನು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ. 20 : ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಮತ್ತು ಕರ್ನಾಟಕದ ನಡುವೆ ಜಟಾಪಟಿ ಏರ್ಪಟ್ಟಿದೆ. ಶನಿವಾರ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಬಂದ್ ನಡೆಸಲಾಗಿದೆ. ಹಾಗಾದರೆ ಈ ಯೋಜನೆಯ ಕುರಿತ ವಿವಾದ ಹೇಗೆ ಅಂತ್ಯಗೊಳ್ಳುತ್ತದೆ. ಕಾನೂನಿನ ತೊಡಕೇನು?

ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾದ ಬ್ರಿಜೇಶ್ ಕಾಳಪ್ಪ ಅವರು ಒನ್ ಇಂಡಿಯಾದ ಜೊತೆ ಮೇಕೆದಾಟು ಯೋಜನೆ ಕುರಿತು ಮಾತನಾಡಿದ್ದಾರೆ. ಅಣೆಕಟ್ಟು ನಿರ್ಮಾಣ ಉಭಯ ರಾಜ್ಯಗಳಿಗೂ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ. ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ ಆರಂಭಿಸಿದರೆ ಅದನ್ನು ಎರಡೂ ರಾಜ್ಯಗಳು ಹಂಚಿಕೊಳ್ಳಬಹುದು ಎಂದು ತಿಳಿಸಿದ್ದಾರೆ. [ಶನಿವಾರದ ಕರ್ನಾಟಕ ಬಂದ್ ಮುಖ್ಯಾಂಶಗಳು]

ಮೇಕೆದಾಟು ಕಾನೂನು ಸ್ಥಿತಿಗತಿ ಏನು?
ಕಾವೇರಿ ನ್ಯಾಯಧೀಕರಣದ ತೀರ್ಪು 2007ರ ಫೆಬ್ರವರಿ 2ರಂದು ಹೊರಬಿತ್ತು. ಆಗ ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ನಮ್ಮ ಮುಂದಿದೆ ಎಂದು ನ್ಯಾಯಾಧೀಕರಣ ಮುಂದೆ ಅರ್ಜಿ ಸಲ್ಲಿಸಿದೆ. ಇದೇ ರೀತಿ ಸುಪ್ರೀಂಕೋರ್ಟ್‌ಗೂ ಸಹ ಅರ್ಜಿಯನ್ನು ಸಲ್ಲಿದ್ದೇವೆ. ಅದರ ತೀರ್ಪನ್ನು ನ್ಯಾಯಾಧೀಕರಣವಿನ್ನೂ ನೀಡಬೇಕಾಗಿದೆ. [ಕರ್ನಾಟಕ ಬಂದ್ : ಮೇಕೆದಾಟು ಯೋಜನೆ ವಿವಾದವೇನು?]

brijesh kalappa

ಯೋಜನೆಯ ಸ್ಪಷ್ಟವಾದ ಉದ್ದೇಶವೇನು?
ಪ್ರತಿ ವರ್ಷ ನಾವು ಸುಮಾರು 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುತ್ತೇವೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಇದರ ಪ್ರಮಾಣ ಕಡಿಮೆ ಇರುತ್ತದೆ. ಕೆಲವು ಸಲ ಹೆಚ್ಚಿನ ನೀರನ್ನು ಬಿಡುಗಡೆ ಮಾಡಿದಾಗ ಅದು ಸಮುದ್ರ ಸೇರುತ್ತದೆ. ಇಂತಹ ನೀರನ್ನು ಸಂಗ್ರಹಣೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಿ ಉಭಯ ರಾಜ್ಯಗಳು ಹಂಚಿಕೊಳ್ಳುವುದು ಯೋಜನೆ.

ಯೋಜನೆ ಬಗ್ಗೆ ತಮಿಳುನಾಡಿನ ಅಪಸ್ವರ ಏಕೆ?
ಅಣೆಕಟ್ಟು ನಿರ್ಮಾಣ ಮಾಡಿದರೆ ಕಾಡು ನಾಶವಾಗುತ್ತದೆ ಎಂಬುದು ತಮಿಳುನಾಡಿನ ವಾದ. ನಮ್ಮ ನೆಲದಲ್ಲಿ ನೀವು ಹೇಗೆ ಅಣೆಕಟ್ಟು ನಿರ್ಮಿಸುತ್ತೀರಿ ಎಂಬುದು ಅವರ ಪಶ್ನೆಯಾಗಿದೆ.

ಕರ್ನಾಟಕ ಹೇಳುವುದೇನು?
ಅಣೆಕಟ್ಟು ನಿರ್ಮಾಣವಾದರೆ ಎರಡೂ ರಾಜ್ಯಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಧೀಕರಣ ಈ ವಿಚಾರದಲ್ಲಿ ಅಂತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಯೋಜನೆ ಕುರಿತು ರಾಜಕೀಯ ಮಾಡಿದರೆ ಅದು ತಕ್ಷಣ ಬಗೆಹರಿಯುವುದಿಲ್ಲ.

ನ್ಯಾಯಧೀಕರಣ ಒಪ್ಪಿಗೆ ನೀಡಲಿದೆಯೇ?
ಈ ಬಗ್ಗೆ ಕಾದು ನೋಡಬೇಕು. ದಿನ ಬಾರಿ ನ್ಯಾಯಾಧೀಕರಣ ವಿಚಾರಣೆ ನಡೆದಾಗ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎನ್ನುವುದು ಮುಖ್ಯವಾಗುತ್ತದೆ.

English summary
On Saturday, April 18th Karnataka witnessed yet another protest on the Mekedatu issue and normal life was crippled between dawn and dusk. Karnataka and Tamil Nadu have argued and counter argued over this issue. But, Mekedatu will be beneficial to TN and Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X