ದರ್ಶನ್‌ಗೆ ಸಿಕ್ತು ಮಧ್ಯಂತರ ಬೇಲ್: ರೇಣುಕಾಸ್ವಾಮಿ ತಂದೆ ಫಸ್ಟ್‌ ರಿಯಾಕ್ಷನ್

Darshan gets interim bail for 6 weeks: ನಟ ದರ್ಶನ್‌ಗೆ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ರೇಣುಕಾಸ್ವಾಮಿ ಅವರ ತಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಅವರ ಕೊಲೆಯಾದ ಮೇಲೆ ಅವರ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ದರ್ಶನ್ ಅವರಿಗೆ ಇದೀಗ ಮಧ್ಯಂತರ ಜಾಮೀನು ಸಿಕ್ಕಿದ್ದು, ಸಣ್ಣ ರಿಲೀಫ್ ಸಿಕ್ಕಿದೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಕುಟುಂಬದಿಂದ ದರ್ಶನ್ ಅವರ ಜಾಮೀನಿನ ಬಗ್ಗೆ ಪ್ರತಿಕ್ರಿಯೆ ಬಂದಿದೆ.

ನಟ ದರ್ಶನ್ ಅವರ ಬಂಧನ ಹಾಗೂ ಜೈಲಿನಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ಸಿಗ್ತುದೆ ಎನ್ನುವ ಆರೋಪಗಳು ಕೇಳಿ ಬಂದಾಗೆಲ್ಲ ರೇಣುಕಾಸ್ವಾಮಿ ಅವರು ತಂದೆ ಪ್ರತಿಕ್ರಿಯೆ ನೀಡಿದ್ದರು. ದರ್ಶನ್ ಅವರ ಬಗ್ಗೆ ಅವರು ಯಾವುದೇ ನೇರ ಹೇಳಿಕೆಗಳನ್ನು ಕೊಟ್ಟಿರಲಿಲ್ಲ. ನನ್ನ ಮಗನ ಕೊಲೆಯಾಗಿದೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದರು. ಇದೀಗ ಬುಧವಾರ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ.

Interim bail for Darshan Renukaswamy s father s first reaction

ಇದರ ಬೆನ್ನಲ್ಲೇ ಮಾತನಾಡಿರುವ ಮೃತ ರೇಣುಕಾಸ್ವಾಮಿ ಅವರ ತಂದೆ, ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿರುವುದರ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ನಮಗೆ ಅನ್ಯಾಯವಾಗಿದೆ. ಅದಕ್ಕೆ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ನಟ ದರ್ಶನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ ಎಂದು ಮೃತ ರೇಣುಕಾ ಸ್ವಾಮಿ ತಂದೆ ಶಿವನಗೌಡ ಹೇಳಿದ್ದಾರೆ.

ಹೈ ಕೋರ್ಟ್ ಆದೇಶದಂತೆ ದರ್ಶನ್‌ಗೆ ವೈದ್ಯಕೀಯ ಚಿಕಿತ್ಸೆ ಬೇಲ್‌ ನೀಡಿದೆ. ಈ ವಿಚಾರ ಕಾನೂನು, ನ್ಯಾಯಾಂಗದ ವಿಚಾರವಾಗಿದೆ.ನಾವು ಈ ಕುರಿತು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ ಸರಕಾರ, ನ್ಯಾಯಾಂಗದ ಬಗ್ಗೆ ನಮಗೆ ನಂಬಿಕೆಯಿದೆ. ಈ‌ ಮೂಲಕ ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲಿ ಎಮಬುದು ನಮ್ಮ ಉದ್ದೇಶ. ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಲಿ, ಅದು ದರ್ಶನ್ ಅಭಿಮಾನಿಗಳಿಗೆ ಬಿಟ್ಟಿದ್ದು, ನಮಗೆ ನ್ಯಾಯಾಂಗದಲ್ಲಿ‌ ನಂಬಿಕೆ ಇದೆ. ನಾವು ದಾವಣಗೆರೆಗೆ ತೆರಳಿ ದೇವರ ದರ್ಶನ ತಗೊಂಡು ಬಂದಿವಿ , ಮೊಮ್ಮಗನ ಮುಖ ನೋಡೀಕೆ ಹೋಗಿದ್ವಿ,ಮಗು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಸಧ್ಯ ತಾಯಿ ಮಗುವಿನ ಆರೋಗ್ಯ ಸುಧಾರಿಸಿದೆ ಎಂದು ಹೇಳಿದ್ದಾರೆ.

ವೈದ್ಯರು ಕೊಟ್ಟ ಸಲಹೆಯಂತೆ ಅವರ ತಂದೆ ತಾಯಿ ಜೋಪಾನ‌ ಮಾಡ್ತಿದ್ದಾರೆ ಮಗುವಿಗೆ ಲಿಂಗಧಾರಣೆ, ನಾಮಕರಣದಂಥ ಕಾರ್ಯಕ್ರಮ ಆಗಬೇಕಿದೆ. ನಾಮಕರಣ ಬಗ್ಗೆ ನಾವಿನ್ನೂ ನಿರ್ಧಾರ ಮಾಡಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದು ನಮ್ಮ‌ಗುರಿ ಎಂದು ಪುನರುಚ್ಚರಿಸಿದ್ದಾರೆ.

ಭದ್ರತೆಯೇ ದೊಡ್ಡ ಸವಾಲು: ದರ್ಶನ್ ಇದೀಗ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬರ್ತಿದ್ದು, ಅಭಿಮಾನಿಗಳ ಸಂತೋಷ ಮುಗಿಲು ಮುಟ್ಟಿದೆ. ಇದೀಗ ದರ್ಶನ್ ಅವರು ಬಿಡುಗಡೆಯಾಗುತ್ತಿದ್ದು, ಅವರ ಅಭಿಮಾನಿಗಳು ಹಾಗೂ ಕುಟುಂಬದವರಲ್ಲಿ ಸಂತೋಷವನ್ನು ಸೃಷ್ಟಿ ಮಾಡಿದೆ ನಿಜ. ಆದರೆ, ಪೊಲೀಸರಿಗೆ ದರ್ಶನ್ ಅಭಿಮಾನಿಗಳನ್ನು ನಿಯಂತ್ರಿಸುವುದೇ ಬಹುದೊಡ್ಡ ಸವಾಲಾಗಿದೆ.

ಆರು ವಾರಗಳ ಕಾಲ ಜಾಮೀನು: ಇನ್ನು ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವು ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಆರು ವಾರಗಳ ಕಾಲ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್ ಹಾಗೂ ದರ್ಶನ್ ಪರ ವಾದ ಮಂಡನೆ ಮಾಡಿದ್ದ ವಕೀಲರು ಮೊದಲ ಹಂತದಲ್ಲಿ ಮೂರು ತಿಂಗಳ ಅವಧಿಗೆ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ, ಅವರಿಗೆ ಇದೀಗ ಮೊದಲ ಹಂತದಲ್ಲಿ ಆರು ವಾರಗಳ ಕಾಲ ಮಾತ್ರ ಜಾಮೀನು (ಮಧ್ಯಂತರ ಜಾಮೀನು) ಮಂಜೂರು ಮಾಡಲಾಗಿದೆ. ಈ ಜಾಮೀನು ಕೇವಲ ಆವರ ಆರೋಗ್ಯ ದೃಷ್ಟಿಯಿಂದ ಮಾತ್ರ ನೀಡಲಾಗಿದೆ.

ದರ್ಶನ್ ಅವರಿಗೆ ಜಾಮೀನು ನೀಡಲಾಗಿದೆಯಾದರೂ ಇದರೊಂದಿಗೆ ಹಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಹೀಗಾಗಿ, ಅವರಿಗೆ ಈಗ ಜಾಮೀನು ಸಿಕ್ಕಿದೆ ಎಂದು ಅವರ ಇಚ್ಛೆಗಳನ್ನೆಲ್ಲ ಪೂರೈಸಿಕೊಳ್ಳುವಂತಿಲ್ಲ. ಅವರು ಆರೋಗ್ಯ ಚಿಕಿತ್ಸೆಯನ್ನು ಮಾತ್ರ ಈ ಅವಧಿಯಲ್ಲಿ ಪಡೆದುಕೊಳ್ಳುವುದಕ್ಕೆ ಅವಕಾಶ ಇರಲಿದೆ. ಇನ್ನೊಂದು ಮುಖ್ಯವಾದ ಅಂಶವೆಂದರೆ, ಈ ಜಾಮೀನಿನ ಅವಧಿಯಲ್ಲಿ ದರ್ಶನ್‌ ಅವರು ವಿದೇಶಕ್ಕೆ ಪ್ರಯಾಣ ಬೆಳೆಸುವಂತಿಲ್ಲ.

ವಿದೇಶ ಪ್ರವಾಸವನ್ನು ನಿರ್ಬಂಧಿಸುವ ಉದ್ದೇಶದಿಂದ ದರ್ಶನ್ ಅವರ ಪಾಸ್‌ಪೋರ್ಟ್‌ ಅನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+