ಆಯ್ಕೆ ಆಗಿರುವ ಶಾಸಕರ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು
ಕರ್ನಾಟಕ ಚುನಾವಣಾ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ದಿನವಾಗಿದೆ. ಈಗ ಸರ್ಕಾರ ರಚನೆ ಕಸರತ್ತುಗಳು ನಡೆಯುತ್ತಿವೆ. ಈ ಬಾರಿ 222 ಶಾಸಕರು ವಿಧಾನಸಭೆಗೆ ಪ್ರವೇಶಿಸಿದ್ದಾರೆ ಇನ್ನಿಬ್ಬರು ಆಯ್ಕೆ ಆಗುವುದು ಬಾಕಿ ಇದೆ. ಅವರ ಕುರಿತು ಕೆಲವು ಇಂಟ್ರಸ್ಟಿಂಗ್ ವಿಷಯಗಳು ಇಲ್ಲಿವೆ.
ಈ ಬಾರಿ ಆಯ್ಕೆ ಆಗಿರುವ ಶಾಸಕರಲ್ಲಿ 215 (ಶೇ 97%) ಶಾಸಕರು ಕೋಟ್ಯಾಧಿಪತಿಗಳು. ಹೌದು ಕಳೆದ ಬಾರಿಗೆ (2013)ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಜನ ಕೋಟ್ಯಾಧಿಪತಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಈ ಬಾರಿಯ ವಿಷಯವೆಂದರೆ ಆಯ್ಕೆಯಾಗಿರು ಶಾಸಕರಲ್ಲಿ 54 ಶಾಸಕರ ಮೇಲೆ ಹತ್ಯೆ ಯತ್ನ, ಅಪಹರಣ, ಗೂಂಡಾಗಿರಿಗಳಂತಹಾ ಗಂಭೀರ ಅಪರಾಧ ಪ್ರಕರಣಗಳಿವೆ, 2013ರಲ್ಲಿ 37 ಶಾಸಕರ ಮೇಲೆ ಈ ರೀತಿಯಾದ ಗಂಭೀರ ಅಪರಾಧ ಪ್ರಕರಣಗಳಿದ್ದವು.

ಅಪರಾಧ ಪ್ರಕರಣ ಆರೋಪಿತರು ಬಿಜೆಪಿಗರೇ ಹೆಚ್ಚು
ಈ ಬಾರಿ ಆಯ್ಕೆ ಆಗಿರುವ ಶಾಸಕರಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ದಾಖಲಾಗಿರುವುದು ಬಿಜೆಪಿ ಶಾಸಕರ ಮೇಲೆ, ಬಿಜೆಪಿಯ 42 (41%) ಶಾಸಕರ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್‌ನ 23 (30%) ಶಾಸಕರ ಮೇಲೆ ಅಪರಾಧ ಪ್ರಕರಣಗಳಿವೆ. ಹಾಗೂ ಜೆಡಿಎಸ್‌ನ 11 (30%) ಶಾಸಕರ ವಿರುದ್ಧ ಅಪರಾಧ ಪ್ರಕರಣಗಳಿವೆ. ಗಂಭೀರ ಅಪರಾಧ ಪ್ರಕರಣದಲ್ಲೂ ಬಿಜೆಪಿಗರೇ ಮುಂದಿದ್ದಾರೆ.

ವಿಧಾನಸೌಧದ ತುಂಬಾ ಕೋಟ್ಯಾಧಿಪತಿಗಳು
ಈ ಬಾರಿ ವಿಧಾನಸೌಧದ ತುಂಬ ಕೋಟ್ಯಾದಿಪತಿಗಳೇ ತುಂಬಲಿದ್ದಾರೆ. ಆಯ್ಕೆ ಆಗಿರುವ 222 ಶಾಸಕರ ಪೈಕಿ 215 ಶಾಸಕರು ಕೋಟ್ಯಾಧಿಪತಿಗಳು. ಕಳೆದ ಬಾರಿ 224 ಶಾಸಕರ ಪೈಕಿ 203 ಜನ ಕೋಟ್ಯಾಧಿಪತಿಗಳಿದ್ದರು.

100 ಕೋಟಿಗೂ ಹೆಚ್ಚು ಆಸ್ತಿಯುಳ್ಳ ಶಾಸಕರ ಸಂಖ್ಯೆ
100 ಕೋಟಿಗೂ ಹೆಚ್ಚಿನ ಆಸ್ತಿಯುಳ್ಳ 15 ಅಭ್ಯರ್ಥಿಗಳು ಈ ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಅದರಲ್ಲಿ ಕಾಂಗ್ರೆಸ್ ಶಾಸಕೇ ಹೆಚ್ಚು. 104 ಶಾಸಕರಲ್ಲಿ ಕೇವಲ ಒಬ್ಬ ಬಿಜೆಪಿ ಶಾಸಕರು ಮಾತ್ರ 100 ಕೋಟಿಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್‌ನ 11 ಶಾಸಕರು ಶತಕೋಟಿ ಸರದಾರರಾಗಿದ್ದರೆ, ಜೆಡಿಎಸ್‌ನ ಒಬ್ಬರು ಹಾಗೂ ಕೆಪಿಜೆಪಿಯ ಒಬ್ಬ ಶಾಸಕ 100 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ.

54 ಶಾಸಕರ ಮೇಲೆ ಅಪರಾಧ ಪ್ರಕರಣ
ಈ ಬಾರಿಯ ವಿಷಯವೆಂದರೆ ಆಯ್ಕೆಯಾಗಿರು 222 ಶಾಸಕರಲ್ಲಿ 54 ಶಾಸಕರ ಮೇಲೆ ಹತ್ಯೆ ಯತ್ನ, ಅಪಹರಣ, ಗೂಂಡಾಗಿರಿಗಳಂತಹಾ ಗಂಭೀರ ಅಪರಾಧ ಪ್ರಕರಣಗಳಿವೆ, 2013ರಲ್ಲಿ 37 ಶಾಸಕರ ಮೇಲೆ ಈ ರೀತಿಯಾದ ಗಂಭೀರ ಅಪರಾಧ ಪ್ರಕರಣಗಳಿದ್ದವು.

ಅತಿ ಶ್ರೀಮಂತ ಶಾಸಕರಿವರು
ಅತಿ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮುಂದಿರುವುದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು. ಅವರ ಆಸ್ತಿಯ ಮೌಲ್ಯ 1015 ಕೋಟಿ. ಅವರ ನಂತರದ ಸ್ಥಾನ ಡಿಕೆ ಶಿವಕುಮಾರ್ ಅವರದ್ದು ಅವರ ಬಳಿ ಇರುವುದು 840 ಕೋಟಿ ಆಸ್ತಿ. ಮೂರನೇ ಸ್ಥಾನದಲ್ಲಿರುವುದು ಸುರೇಶ್ ಬಿಎಸ್. ಇವರ ಬಳಿ 416 ಕೋಟಿ ಮೌಲ್ಯದ ಆಸ್ತಿ ಇದೆ.












Click it and Unblock the Notifications