• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್ ಶಿಫ್ಟಿಂಗ್: ಸಿಎಂ ಸಿದ್ದು ಜಾಣ ಉತ್ತರ

By Mahesh
|

ಬೆಂಗಳೂರು, ನ.6: ಇನ್ಫೋಸಿಸ್ ಸಂಸ್ಥೆ ಯೋಜನೆ ಶಿಫ್ಟ್ ಮಾಡ್ತಾ ಇದೆ, ಅದರೆ, ರಾಜ್ಯದಿಂದ ಹೊರಕ್ಕೆ ಹೋಗುತ್ತಿಲ್ಲ. ದೇವನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಶಿಫ್ಟ್ ಆಗುತ್ತಿದೆ. ಇದು ಬಿಟ್ಟು ಈ ಬಗ್ಗೆ ಬಂದಿರುವ ಸುದ್ದಿಗಳೆಲ್ಲ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಣ ಉತ್ತರ ನೀಡಿದ್ದಾರೆ.

ಇದಕ್ಕೂ ಮುನ್ನ ಐಟಿ ಸಚಿವ ಎಸ್ ಆರ್ ಪಾಟೀಲರ ಜೊತೆ ಐಟಿ ಕಾರ್ಯದರ್ಶಿಗಳು ಸೇರಿದಂತೆ ಇಲಾಖೆಯ ಅಧಿಕಾರಿಗಳ ಜೊತೆ ಉನ್ನತಮಟ್ಟದ ಸಭೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಗುರುವಾರ ನಡೆದ ಸಭೆಯಲ್ಲಿ ಕೈಗಾರಿಕೆಗಳಿಗೆ ಭೂಮಿ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸದ ಅಧಿಕಾರಿಗಳನ್ನು ಸಿದ್ದರಾಮಯ್ಯ ತೀವ್ರವಾಗಿ ತೀವ್ರ ತರಾಟೆಗೆ ತೆಗೆದುಕೊಂಡರು. [ದೇವನಹಳ್ಳಿಯಿಂದ ಇನ್ಫೋಸಿಸ್ ಶಿಫ್ಟಿಂಗ್ ಏಕೆ?]

ಅದರಲ್ಲೂ ವಾಣಿಜ್ಯ ಮತ್ತು ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖಾ ಆಯುಕ್ತರಿಂದ ಆದಷ್ಟು ಬೇಗ ಕೆಲಸ ತೆಗೆಸಿಕೊಳ್ಳಿ ಇಲ್ಲದಿದ್ದರೆ ಎತ್ತಂಗಡಿ ಮಾಡಲಾಗುವುದು ಎಂದು ಸೂಚಿಸಿದರು. [ಇನ್ಫೋಸಿಸ್ ತಗಾದೆ, ಸರ್ಕಾರ ಏನ್ಮಾಡ್ಬೇಕು?]

ಇನ್ಫೋಸಿಸ್ ವಾರ್ಷಿಕವಾಗಿ ಸುಮಾರು 8 ಬಿಲಿಯನ್ ಆದಾಯವನ್ನು ಹೊಂದಿರುವ ಸುಮಾರು 1.4 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರು ಮೂಲದ ದೇಶದ ಎರಡನೇ ಅತಿದೊಡ್ಡ ಸಂಸ್ಥೆ ಇನ್ಫೋಸಿಸ್ ಅಸಮಾಧಾನ ಸಹಜವಾಗಿದೆ ಎಂದು ಇತರೆ ಉದ್ಯಮಿಗಳು ದನಿಗೂಡಿಸಿದ್ದಾರೆ. ಹೀಗಾಗಿ ಸರ್ಕಾರ ಅನಿವಾರ್ಯವಾಗಿ ವಿಳಂಬ ನೀತಿ ಬದಿಗಿಟ್ಟು ಕೈಗಾರಿಕಾ ಸಂಸ್ಥೆಗಳಿಗೆ ಭರವಸೆ ಮೂಡುವಂಥ ಕಾರ್ಯಕ್ಕೆ ಮುಂದಾಗಿದೆ.

ಅಧಿಕಾರಿಗಳು ಸರಿಯಿಲ್ಲ ಎಂದರೆ ಸರ್ಕಾರ ಹೊಣೆ?

ಅಧಿಕಾರಿಗಳು ಸರಿಯಿಲ್ಲ ಎಂದರೆ ಸರ್ಕಾರ ಹೊಣೆ?

ರಾಜ್ಯದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ಸರ್ಕಾರ ಸರಿಯಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಯಾವುದೇ ಸಂಸ್ಥೆ ಹಾಗೂ ಕೈಗಾರಿಕೆಗಳಿಗೆ ಭೂಮಿ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಏನು ಸಮಸ್ಯೆಯಿದೆ ಎಂಬುದನ್ನು ಅರಿತು ಕೆಲಸ ನಿರ್ವಹಿಸಲು ಆಗದಿದ್ದರೆ ಹುದ್ದೆಯನ್ನು ತ್ಯಜಿಸಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ಫೋಸಿಸ್ ಸಂಸ್ಥೆಗೆ ಭೂಮಿ ನೀಡುವ ಸಂಬಂಧ ಉಂಟಾಗಿರುವ ಅವ್ಯವಸ್ಥೆ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ನಿರ್ಧಾರ ಕೈಗೊಂಡಿರುವ ಸುದ್ದಿ ಬಂದಿದೆ.

ಇನ್ಫೋಸಿಸ್ ಪೂರ್ತಿ ಹಣ ಪಾವತಿಸಿಲ್ಲ

ಇನ್ಫೋಸಿಸ್ ಪೂರ್ತಿ ಹಣ ಪಾವತಿಸಿಲ್ಲ

ಇನ್ಫೋಸಿಸ್ ನಿಗದಿಯಾಗಿರುವ ಭೂಮಿಗಾಗಿ ಒಟ್ಟು ಬೆಲೆ 58 ಕೋಟಿರು ನೀಡಬೇಕಿತ್ತು. ಇದರಲ್ಲಿ 14 ಕೋಟಿ ರು. ಮಾತ್ರ ಕಟ್ಟಿದೆ. ಉಳಿದ 44 ಕೋಟಿ ರೂ. ಪಾವತಿಸಬೇಕಿದೆ. ಉಳಿದ ಮೊತ್ತಕ್ಕೆ 7.64 ಕೋಟಿ ರೂ. ಬಡ್ಡಿಯಾಗಿದ್ದರೂ ರಾಜ್ಯಸರ್ಕಾರ ಅದನ್ನು ಮನ್ನಾ ಮಾಡಿದೆ. ಹೀಗಿದ್ದರೂ ಸಹ ಇನ್ಫೋಸಿಸ್ ಮಾತ್ರ ಸ್ಥಳ ಬದಲಾವಣೆ ಬಯಸಿ ಹಣ ಕಟ್ಟದೆ ಸುಮ್ಮನಿದೆ. ಈ ಬಗ್ಗೆ ಐಟಿ ಇಲಾಖೆ ನೋಟಿಸ್ ಕಳಿಸಿತ್ತು. ಆದರೆ, ಇದಕ್ಕೆ ಬದಲಾಗಿ ಯೋಜನೆ ಶಿಫ್ಟ್ ಮಾಡುತ್ತೇವೆ. ಜಮೀನು ವಾಪಸ್ ಮಾಡುತ್ತೇವೆ ಎಂಬ ಉತ್ತರ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು ವಿವರಿಸಿದರು.

ಇನ್ಫೋಸಿಸ್ ಗೆ ಪೂರ್ತಿ ಜಮೀನು ಇನ್ನೂ ನೀಡಿಲ್ಲ

ಇನ್ಫೋಸಿಸ್ ಗೆ ಪೂರ್ತಿ ಜಮೀನು ಇನ್ನೂ ನೀಡಿಲ್ಲ

ದೇವನಹಳ್ಳಿಯಲ್ಲಿಐಟಿ ಪಾರ್ಕ್ ಸ್ಥಾಪನೆಗೆ 40 ಎಕರೆ ಜಾಗ ನಿಗದಿಪಡಿಸಲಾಗಿತ್ತು. ಇನ್ನು ಹೆಚ್ಚುವರಿಯಾಗಿ 60 ಎಕರೆ ನೀಡಲು ಸರ್ಕಾರ ಸಿದ್ಧವಿದೆ. ಆದರೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಾಗ ಬೇಕೆಂಬ ಕಾರಣಕ್ಕೆ ಈ ರೀತಿ ಅಪಪ್ರಚಾರ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. ಕೈಗಾರಿಕಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರದೆ ಈ ರೀತಿಯ ಅವ್ಯವಸ್ಥೆ ಉಂಟಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ತೀವ್ರ ತರಾಟೆ ತೆಗೆದುಕೊಂಡರು.

ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಿಎಂ

ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಿಎಂ, ಇನ್ಫೋಸಿಸ್ ಯೋಜನೆ ಬಗ್ಗೆ ಮಾಧ್ಯಮಗಳು ತಪ್ಪು ಮಾಹಿತಿ ನೀಡಿವೆ ಎಂದರು

ಎಲ್ಲಾ ಸೌಲಭ್ಯಗಳನ್ನು ಶೀಘ್ರವೇ ನೀಡಲಾಗುವುದು

ಇನ್ಫೋಸಿಸ್ ಸೇರಿದಂತೆ ಎಲ್ಲಾ ಐಟಿ ಕಂಪನಿಗಳಿಗೆ ಸಕಲ ಸೌಲಭ್ಯಗಳನ್ನು ಶೀಘ್ರವೇ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರಿಂದ ಟ್ವೀಟ್

ಹನಿವೇಲ್ ಕಂಪನಿ ಹೊಸ ಯೋಜನೆಗೆ ಅಸ್ತು

ಹನಿವೇಲ್ ಕಂಪನಿ ಹೊಸ ಯೋಜನೆಗೆ ಅಸ್ತು ಎಂದಿರುವ ಕರ್ನಾಟಕ ಸರ್ಕಾರ, ಈ ಬಗ್ಗೆ ಕೂಡಾ ಟ್ವೀಟ್ ಮಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There have been false media reports about Infosys withdrawing from Karnataka. Infosys is only moving from Devanahalli to Electronics City. Infosys and other companies will be provided with necessary support. IT Investment region is being progressed at fast pace said CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more