ಕಾಲೇಜ್ ವಿದ್ಯಾರ್ಥಿಗಳಿಗೆ ಅತಿದೊಡ್ಡ ಜೈವಿಕ ತಂತ್ರಜ್ಞಾನ ರಸಪ್ರಶ್ನೆ
ಬೆಂಗಳೂರು, ಅ 22: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐ.ಟಿ. ಬಿ.ಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ತನ್ನ ಹೆಮ್ಮೆಯ ಸಮಾವೇಶವಾದ 23ನೇ ಆವೃತ್ತಿಯ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ' ಯನ್ನು (ಬಿಟಿಎಸ್) 2020ರ ನವೆಂಬರ್ 19ರಿಂದ 21ರವರೆಗೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬಾರಿಯ ಶೃಂಗಸಭೆಯ ಮುಖ್ಯ ಆಶಯವು 'ಭವಿಷ್ಯ ಈಗಲೇ' (Next is Now) ಎಂದು ನಿರ್ಧರಿಸಲಾಗಿದೆ. ಈ ಡಿಜಿಟಲ್ ಸಮಾವೇಶವು ವಿವಿಧ ಕ್ಷೇತ್ರಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ ಇತ್ತೀಚಿನ ಸಂಶೋಧನೆಗಳು ಮತ್ತು ಸಂವಾದಗಳ ಬಗ್ಗೆ ಬೆಳಕು ಚೆಲ್ಲಲಿದೆ. 'ಬಿಟಿಎಸ್'ನಲ್ಲಿ ನಡೆಯಲಿರುವ ಜೈವಿಕ ರಸಪ್ರಶ್ನೆ (BioQuiz) ಸ್ಪರ್ಧೆಯು, ಶೃಂಗಸಭೆಯ ಪ್ರಮುಖ ಘಟನೆಯಾಗಿರಲಿದೆ.
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುವ ದೇಶದ ಏಕೈಕ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಇದಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಸದ್ಯದ ವಿದ್ಯಮಾನ ಮತ್ತು ಆಗುಹೋಗುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ಜೈವಿಕ ತಂತ್ರಜ್ಞಾನ ವಿಷಯದ ಬಗ್ಗೆ ಆಳವಾದ ಜ್ಞಾನ ಸಂಪಾದಿಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದು ಈ ರಸಪ್ರಶ್ನೆ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಕರ್ನಾಟಕದ ಪ್ರತಿಭೆಗಳ ಅನಾವರಣಕ್ಕೆ ಜೈವಿಕ ರಸಪ್ರಶ್ನೆ ಕಾರ್ಯಕ್ರಮವು ವೇದಿಕೆ ಕಲ್ಪಿಸಿಕೊಡಲಿದೆ. ರಾಜ್ಯದಲ್ಲಿನ ಎಲ್ಲ ಕಾಲೇಜುಗಳ ಪದವಿಪೂರ್ವ ವಿದ್ಯಾರ್ಥಿಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ತಮ್ಮದೇ ಸಾಧನಗಳಲ್ಲಿ ಆನ್‍ಲೈನ್ ಕ್ವಿಜ್‍ನಲ್ಲಿ ಭಾಗವಹಿಸಲು ಲಿಂಕ್ ಕೊನೆಯಲ್ಲಿ ಕೊಡಲಾಗಿದೆ. ಅಂತರ್ಜಾಲ ತಾಣದಲ್ಲಿ ತಮ್ಮ ಹೆಸರನ್ನು ದಾಖಲಿಸಬಹುದು. ನೋಂದಣಿಯು 2020ರ ಅಕ್ಟೋಬರ್ 28ರಿಂದ ಆರಂಭಗೊಳ್ಳಲಿದೆ.
ರಸಪ್ರಶ್ನೆ ಕಾರ್ಯಕ್ರಮವು ಆನ್‍ಲೈನ್‍ನಲ್ಲಿ 3 ಸುತ್ತುಗಳನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳನ್ನು 6 ವಲಯಗಳನ್ನಾಗಿ ವಿಂಗಡಿಸಲಾಗುವುದು. ಈ 6 ವಲಯಗಳ ಸುತ್ತಿನ ಸ್ಪರ್ಧೆಯ ವಿಜೇತರು, ಪ್ರಶಸ್ತಿ ಪಡೆಯಲು ಅಂತಿಮ ಸುತ್ತಿನ ವರ್ಚುವಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.
Recommended Video
* ಮೊದಲ ಸುತ್ತು: ಪ್ರಾಥಮಿಕ ಹಂತದ ಆನ್‍ಲೈನ್ ಪರೀಕ್ಷೆ (2020ರ ನವೆಂಬರ್ 1)
* ಎರಡನೆ ಸುತ್ತು: ಮೊದಲ ಸುತ್ತಿನಲ್ಲಿ ಅರ್ಹರಾದವರಿಗೆ ವಲಯ ಹಂತದ ಅಂತಿಮ ಸ್ಪರ್ಧೆ ( 2020ರ ನವೆಂಬರ್ 6, 7 ಮತ್ತು 8)
* ಮೂರನೇ ಸುತ್ತು: 6 ವಲಯಗಳಿಂದ ವಿಜೇತರಾದ 6 ವಿದ್ಯಾರ್ಥಿಗಳಿಗಾಗಿ ಅಂತಿಮ ಸ್ಪರ್ಧೆ (2020, ನವೆಂಬರ್ 10)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications