Summer Special Trains: ಕರ್ನಾಟಕದಲ್ಲಿ '9 ಬೇಸಿಗೆ ವಿಶೇಷ ರೈಲುಗಳ' ಸಂಚಾರ, ಸಮಯ, ದಿನಾಂಕ ವೇಳಾಪಟ್ಟಿ...

ಬೆಂಗಳೂರು, ಮೇ 04: ಬೇಸಿಗೆ ರಜೆ ಇರುವ ಕಾರಣಕ್ಕೆ ಭಾರತೀಯ ರೈಲ್ವೆ ತನ್ನ ವ್ಯಾಪ್ತಿಯ ನೈಋತ್ಯ ರೈಲ್ವೆ (SWR) ವಲಯದಿಂದ ಕರ್ನಾಟಕದಲ್ಲಿ ಒಂಬತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಬಿಡುಗಡೆ ಮಾಡಿದೆ.

ಹೌದು, ಪ್ರತಿವರ್ಷದಂತೆ ಈ ವರ್ಷವು ನೈಋತ್ಯ ರೈಲ್ವೆ ವಲಯವು ಬೇಸಿಗೆ ವಿಶೇಷ ರೈಲುಗಳನ್ನು ಕಾರ್ಯಚರಣೆ ಆರಂಭಿದೆ. ಬಹುತೇಕ ಈ ಎಲ್ಲ ರೈಲುಗಳು ಒಂದು ಬದಿ (ಒನ್‌ವೆ) ಚಲಿಸುವ ರೈಲುಗಳಾಗಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

Indian Railways Will Run 9 Summer Special Express Trains From Bengaluru Mysuru time Schedule here

ಈ ಬೇಸಿಗೆ ವಿಶೇಷ ರೈಲುಗಳು (Karnataka Summer Special Trains) ಮೇ 3ರಿಂದ 18ರವರೆಗೆ ಸೇವೆ ನೀಡಲಿವೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಹಾಗಾದರೆ, ಕರ್ನಾಟಕದಲ್ಲಿ ಎಲ್ಲಿಂದ-ಎಲ್ಲಿಗೆ ಈ ರೈಲು ಸಂಚರಿಸಲಿವೆ?, ಸಮಯ?, ವೇಳಾಪಟ್ಟಿ ಮಾಹಿತಿ ಇಲ್ಲಿದೆ.

9 ವಿಶೇಷ ರೈಲು ಸಂಚಾರದ ಮಾಹಿತಿ

1. ಬೆಂಗಳೂರು ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT)- ವಿಜಯನಗರ ವಿಶೇಷ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ-06231/06232) ಒಂದು ಟ್ರಿಪ್ ಹೊಡೆಯಲಿದೆ. ಈ ರೈಲು ಬೆಂಗಳೂರಿನಿಂದ ತುಮಕೂರು, ಚಿತ್ರದುರ್ಗ, ಹೊಸಪೇಟೆ, ಗದಗ, ಬಾಗಲಕೋಟೆ ವಿಜಯಪುರಕ್ಕೆ ಹೋಗಲಿದೆ.

ವಿಶೇಷ ರೈಲು ಸಂಖ್ಯೆ 06231 ಬೆಂಗಳೂರು ಎಸ್‌ಎಂವಿಟಿ- ವಿಜಯನಗರ ಎಕ್ಸ್‌ಪ್ರೆಸ್ ರೈಲು ಮೇ 6 ರಂದು ರಾತ್ರಿ 7 ಗಂಟೆಗೆ ಹೊರಡಲಿದೆ. ಮರುದಿನ ಬೆಳಗ್ಗೆ 10.30ಕ್ಕೆ ವಿಜಯಪುರ ತಲುಪಲಿದೆ. ಮತ್ತದೇ ವಿಜಯನಗರ-ಎಸ್ಎಂವಿಟಿ ಬೆಂಗಳೂರು ಎಸ್‌ಎಂವಿಟಿ ವಿಶೇಷ ರೈಲು (ಸಂಖ್ಯೆ 06232) ವಿಜಯಪುರದಿಂದ ಮೇ 7ರಂದು ರಾತ್ರಿ 7ಗಂಟೆಗೆ ಪ್ರಯಾಣ ಆರಂಭಿಸಿ ಮಾರನೇ ದಿನ (ಮೇ 8) ಬೆಳಗ್ಗೆ 11.15ಕ್ಕೆ ಬೆಂಗಳೂರು ಎಸ್‌ವಿಟಿ ನಿಲ್ದಾಣಕ್ಕೆ ಆಗಮಿಸಲಿದೆ.

2) ಯಶವಂತಪುರ- ಬೀದರ್- ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06227/06228) ವಾರದಲ್ಲಿ ಒಂದು ಟ್ರಿಪ್ ಹೊಡೆಯಲಿದೆ. ಈ ರೈಲು ಯಲಹಂಕ, ರಾಯಚೂರು, ಕಲಬುರಗಿ ಮೂಲಕ ಬೀದರ್‌ವರೆಗೆ ಸೇವೆ ನೀಡಲಿದೆ.

ಯಶವಂತಪುರ- ಬೀದರ್ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 06227) ಮೇ 6 ರಂದು ರಾತ್ರಿ 11ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11ಗಂಟೆಗೆ ಬೀದರ್ ತಲುಪಲಿದೆ. ಅದೇ ದಿನ ಈ ರೈಲು ಮಧ್ಯಾಹ್ನ 2.10 ಗಂಟೆಗೆ ಬೀದರ್ ನಿಂದ ಹೊರಟು, ಮರುದಿನ (ಮೇ 8) ಬೆಳಗ್ಗೆ 04.15ಗಂಟೆಗೆ ಬೆಂಗಳೂರಿನ ಯಶವಂತಪುರಕ್ಕೆ ಬರಲಿದೆ.

3) ಯಶವಂತಪುರ-ವಿಜಯನಗರ-ಯಶವಂತಪುರ ವಿಶೇಷ ರೈಲು (ಸಂಖ್ಯೆ 07319/ 07320) ವಿಜಯನಗರಕ್ಕೆ ಒಂದು ಟ್ರಿಪ್ ಹೊಡೆಯಲಿದೆ. ಈ ರೈಲು ಅರಸೀಕರೆ, ದಾವಣಗೆರೆ, ಹುಬ್ಬಳ್ಳಿ ಬೆಳಗಾವಿಗೆ ನಿಲುಗಡೆ ನೀಡಲಿದೆ.

ಈ ರೈಲು (ಸಂಖ್ಯೆ 07319) ಬೆಂಗಳೂರಿನ ಯಶವಂತಪುರ ವನ್ನು ನಾಡಿದ್ದು ಮೇ 6 ರಂದು ರಾತ್ರಿ 9.55ಗಂಟೆಗೆ ಬಿಡುತ್ತದೆ. ಮರುದಿನ ಬೆಳಗ್ಗೆ 10.30ಕ್ಕೆ ವಿಜಯನಗರ ಸೇರಲಿದೆ. ನಂತರ ವಿಜಯನಗರದಿಂದ ರೈಲು (ಸಂಖ್ಯೆ 07320) ಮೆ 7 ರಂದು ಸಂಜೆ 4.30 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5.25ಕ್ಕೆ ಯಶವಂತಪುರಕ್ಕೆ ಬರಲಿದೆ.

4. ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07373/ 07374) ಬೆಂಗಳೂರಿನ ಮೆಜೆಸ್ಟಿಕ್ KSR ರೈಲು ನಿಲ್ದಾಣ, ತುಮಕೂರು, ಬೀರೂರು, ಶಿವಮೊಗ್ಗ ಪಟ್ಟಣ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು (ಸಂಖ್ಯೆ 07373) ಮೇ 6 ರಂದು ರಾತ್ರಿ 9.30ಗಂಟೆಗೆ ಬಿಡುತ್ತದೆ. ಮರುದಿನ ಬೆಳಗ್ಗೆ 9ಕ್ಕೆ ತಾಳಗುಪ್ಪ ತಲುಪಲಿದೆ.

Indian Railways Will Run 9 Summer Special Express Trains From Bengaluru Mysuru time Schedule here

ತಾಳಗುಪಟ್ಟದಿಂದ ಈ ವಿಶೇಷ ರೈಲು (ಸಂಖ್ಯೆ 07374) ಮೇ 7 ರಂದು ಸಂಜೆ 6.30ಗಂಟೆಗೆ ಹೊರಟು ಮರುದಿವಸ ಬೆಳಗ್ಗೆ 4 ಗಂಟೆಗೆ ಮೈಸೂರು ಸೇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

5. ಬೆಳಗಾವಿ-ಯಶವಂತಪುರ (ಓನ್ ವೇ) ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07317) ಮೇ 6 ರಂದು ಬೆಳಗ್ಗೆ 8ಗಂಟೆಗೆ ಬೆಳಗಾವಿಯಿಂದ ಪ್ರಯಾಣ ಆರಂಭಿಸುತ್ತದೆ. ಹುಬ್ಬಳ್ಳಿ, ಅರಸೀಕರೆ, ತುಮಕೂರು ಗಳಲ್ಲಿ ನಿಲುಗಡೆ ನೀಡುತ್ತದೆ. ಅದೇ ದಿನ ರಾತ್ರಿ 8 ಗಂಟೆಗೆ ಯಶವಂತಪುರ ತಲುಪಲಿದೆ.

6. ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07375) ಈ ಮಾರ್ಗದಲ್ಲಿ ಒಂದೇ ಟ್ರಿಪ್ ಹೊಡೆಯಲಿದೆ. ಈ ರೈಲು ಮೇ6 ರಂದು ಬೆಳಗ್ಗೆ 8.45ಗಂಟೆಗೆ ಬೆಳಗಾವಿಯಿಂದ ಹೊರಟು ಹುಬ್ಬಳ್ಳಿ, ಹಾಸನ ಮಾರ್ಗವಾಗಿ ಅದೇ ದಿನ ರಾತ್ರಿ 8.15ಕ್ಕೆ ಮೈಸೂರು ಸೇರಲಿದೆ.

7. ಮೈಸೂರು-ಕಾರವಾರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06241) ಒಂದು ಬಾರಿ ಸೇವೆ ನೀಡಲಿದೆ. ಇದು ಮೈಸೂರಿನಿಂದ ಮೇ 6 ರಂದು ರಾತ್ರಿ 8.15ಗಂಟೆಗೆ ಪ್ರಯಾಣ ಆರಂಭಿಸಿ, ಕೆಎಸ್‌ಆರ್ ಬೆಂಗಳೂರು, ಹಾಸನ, ಸುಬ್ರಹ್ಮಣ್ಯ ರಸ್ತೆ, ಬೈಂದೂರು ಮಾರ್ಗವಾಗಿ ತೆರಳುತ್ತದೆ. ಮರುದಿನ ಮಧ್ಯಾಹ್ನ 1ಕ್ಕೆ ಕಾರವಾರ ಮುಟ್ಟಲಿದೆ.

8. ಕಾರವಾರ-ಮೈಸೂರು ಒನ್‌ವೇ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06242) ಮೇ 7 ರಂದು ರಾತ್ರಿ 10ಕ್ಕೆ ಕಾರವಾರದಿಂದ ಹೊರಟು ಬೈಂದೂರು, ಮಂಗಳೂರು ಜಂಕ್ಷನ್, ಸುಬ್ರಹ್ಮಣ್ಯ ರಸ್ತೆ, ಹಾಸನ ಮೈಸೂರಿಗೆ ಮೇ 8 ರಂದು ಸಂಜೆ 6.25ಕ್ಕೆ ತಲುಪಲಿದೆ.

9. ಬೆಂಗಳೂರು- ಸಂಬಾಲ್‌ಪುರ-ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 08321/ 08322) ವಾರದಲ್ಲಿ ಎರಡು ಟ್ರಿಪ್ ಹೊಡೆಯಲಿದೆ. ಈ ರೈಲು ರಾಯಗಡ, ವಿಜಯನಗರ, ರಾಜಮಂಡ್ರಿ, ರೇಣಿಗುಂಟ ಮಾರ್ಗವಾಗಿ ಪ್ರಯಾಣ ಮಾಡಲಿದೆ.

ಈ ರೈಲು ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ (ರೈಲು ಸಂಖ್ಯೆ 08321) ಮೇ 9 ಮತ್ತು 16 ರಂದು ಸಂಜೆ 6.45ಗಂಟೆಗೆ ಸಂಬಾಲ್‌ಪುರದಿಂದ ಪ್ರಯಾಣ ಆರಂಭಿಸಿ, ಮರುದಿನ ರಾತ್ರಿ 11.30ಗಂಟೆಗೆ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣಕ್ಕೆ ಬರಲಿದೆ. ಈ ರೈಲು (ಸಂಖ್ಯೆ 08322) ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಮೇ 11 ಮತ್ತು 18ರಂದು ಮಧ್ಯರಾತ್ರಿ 1.15ಗಂಟೆಗೆ ಸಂಚಾರ ಆರಂಭಿಸಿ, ಮಾರನೇ ದಿನ ಮುಸ್ಸಂಜೆ 6.30ಕ್ಕೆ ಸಂಬಾಲ್‌ಪುರವನ್ನು ತಲುಪಲಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಎರಡು ರೈಲು ಕೆಆರ್ ಪುರಂವರೆಗೆ ಮಾತ್ರವೇ ಸಂಚಾರ

ಈ ಬೇಸಿಗೆ ವಿಶೇಷ ರೈಲುಗಳನ್ನು ಪ್ರಕಟಿಸುವ ಮೂಲಕ ತುರ್ತು ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಬಥೈಯಪ್ಪನಹಳ್ಳಿ ರೈಲು (ಸಂಖ್ಯೆ 01778) ಮತ್ತು ಬೈಯಪ್ಪನಹಳ್ಳಿ- ಮಾರಿಕುಪ್ಪಂ ರೈಲು (ಸಂಖ್ಯೆ 01779) ಗಳ ಸಂಚಾರವು ಬೆಂಗಳೂರಿನ ಕೆಆರ್‌ ಪುರಂಗೆ ಕೊನೆಗೊಳ್ಳಲಿದೆ. ಬೈಯಪ್ಪನಹಳ್ಳಿವರೆಗೆ ಆಗಮನವನ್ನು ಕಾಮಗಾರಿ ಮುಗಿದ ಬಳಿಕ ಅಧಿಕಾರಿಗಳು ತಿಳಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+