SWR: ವಿಶೇಷ ರೈಲುಗಳ ಸೇವೆ ವಿಸ್ತರಣೆ, ಈ ಮಾರ್ಗಗಳ ತಾತ್ಕಾಲಿಕ ನಿಲುಗಡೆ, ವೇಳಾಪಟ್ಟಿ
Indian Railways: ದಸರಾ ಹಬ್ಬ ಮತ್ತು ದೀಪಾವಳಿ ಪ್ರಯುಕ್ತ ರೈಲ್ವೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಒದಗಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಹೊಸ ಎಕ್ಸ್‌ಪ್ರೆಸ್ ರೈಲುಗಲ ಸೇವೆ ವಿಸ್ತರಣೆ ಮಾಡಲಾಗಿದೆ. ವಿವಿಧ ಮಾರ್ಗದ ರೈಲುಗಳಲ್ಲಿ ಹೆಚ್ಚುವರಿ ನಿಲುಗಡೆ ಘೋಷಿಸುವ ಜೊತೆಗೆ ಹಾಗೂ ವಿಶೇಷ ರೈಲುಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಪಾಟಲಿಪುತ್ರ-SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು (22351/22352) ಇದೀಗ ಸಹರ್ಸಾ ಜಂಕ್ಷನ್ ವರೆಗೆ ವಿಸ್ತರಿಸಲಾಗಿದೆ. ಸಹರ್ಸಾ-SMVT ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22351) ಸೆಪ್ಟೆಂಬರ್ 12 ರಿಂದ ಹಾಗೂ ರೈಲು (22352) ಸೆಪ್ಟೆಂಬರ್ 15 ರಿಂದ ಕಾರ್ಯಾಚರಣೆ ನಡೆಸಲಿವೆ.

ಸಹರ್ಸಾದಿಂದ ಪ್ರತೀ ಶುಕ್ರವಾರ ಮಧ್ಯಾಹ್ನ 1:35ಕ್ಕೆ ಹೊರಟು ಭಾನುವಾರ ಬೆಂಗಳೂರಿಗೆ ತಲುಪಲಿದೆ. ತಿರುಗಿ, SMVT ಬೆಂಗಳೂರಿನಿಂದ ಪ್ರತೀ ಸೋಮವಾರ ಹೊರಟು ಬುಧವಾರ ಸಂಜೆ 4:50ಕ್ಕೆ ಸಹರ್ಸಾ ತಲುಪುತ್ತದೆ. ಮಾರ್ಗದ ಮಧ್ಯೆ ಸೋನ್‌ಪುರ್, ಹಾಜಿಪುರ್, ಶಹಪುರ್ ಪಟೋರಿ, ಬರೌನಿ, ಬೇಗುಸರಾಯ್, ಖಗಾರಿಯಾ, ಮಾನ್ಸಿ ಹಾಗೂ ಸಿಮ್ರಿ ಭಕ್ತಿಯಾರ್‌ಪುರ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
* ಹರಿಪ್ರಿಯಾ ಎಕ್ಸ್‌ಪ್ರೆಸ್ ನಂದಲೂರಿನಲ್ಲಿ ನಿಲುಗಡೆ
ದಕ್ಷಿಣ ಮಧ್ಯ ರೈಲ್ವೆ ಕಾರ್ಯಾಚರಣೆ ಮಾಡುವ ತಿರುಪತಿ-ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ ರೈಲು (17415/17416) ನಂದಲೂರು ನಿಲ್ದಾಣದಲ್ಲಿ ನಿಲುಗಡೆಯನ್ನು ಇನ್ನೂ 6 ತಿಂಗಳ ಕಾಲ ಮುಂದುವರಿಸಲಿದೆ. ಈ ನಿಲುಗಡೆ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿದೆ.
* ಭೋಡ್ವಾಲ್ ಮಜ್ರಿಯಲ್ಲಿ ಕರ್ನಾಟಕ ಸಂಪರ್ಕ ಕ್ರಾಂತಿ ನಿಲುಗಡೆ
ಉತ್ತರ ರೈಲ್ವೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುವ ಯಶವಂತಪುರ-ಚಂಡೀಗಢ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (22685/22686) ಭೋಡ್ವಾಲ್ ಮಜ್ರಿಯಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಿದೆ. ಇದು ಅಕ್ಟೋಬರ್ 19 ರಿಂದ ನವೆಂಬರ್ 7ರವರೆಗೆ ನಿಲುಗಡೆ ನೀಡುತ್ತದೆ.
* ಉಜ್ನಿ ಮತ್ತು ಸಿಕಂದ್ರರಾವ್‌ನಲ್ಲಿ KSR ರೈಲು ನಿಲುಗಡೆ
ಈಶಾನ್ಯ ರೈಲ್ವೆ ವ್ಯಾಪ್ತಿಯ KSR ಬೆಂಗಳೂರು-ಲಾಲ್ಕುವಾ-KSR ಬೆಂಗಳೂರು ಎಕ್ಸ್‌ಪ್ರೆಸ್ ರೈಲು (05073/05074) ಸೆಪ್ಟೆಂಬರ್ 21 ರಿಂದ ನವೆಂಬರ್ 30 ತಾತ್ಕಾಲಿಕ ನಿಲುಗಡೆ ನೀಡುತ್ತದೆ. ರೈಲು (05074) ರಾತ್ರಿ 9:07ಕ್ಕೆ ಉಜ್ನಿ, 10:25ಕ್ಕೆ ಸಿಕಂದ್ರ ರಾವ್ ಗೆ ಬಂದು ನಿಲ್ಲುತ್ತದೆ. ಮತ್ತೊಂದು ರೈಲು (05073) ಬೆಳಗ್ಗೆ 3:28ಕ್ಕೆ ಸಿಕಂದ್ರರಾವ್, 4:46ಕ್ಕೆ ಉಜ್ನಿ ತಲುಪಲಿದೆ. ಅಲ್ಲಿ ನಿಲುಗಡೆ ನೀಡಿ ಮುಂದೆ ಸಾಗಲಿದೆ.
* ಬೆಂಗಳೂರು-ತಿರುವನಂತಪುರಂ ವಿಶೇಷ ರೈಲು ಅವಧಿ ವಿಸ್ತರಣೆ
ರೈಲ್ವೆ ಮಂಡಳಿ SMVT ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ವಿಶೇಷ ರೈಲುಗಳ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ. ಅವುಗಳ ಪಟ್ಟಿ ಹಾಗೂ ದಿನಾಂಕ ಇಲ್ಲಿದೆ.
* ರೈಲು 06555: ಸೆಪ್ಟೆಂಬರ್ 26 ಬದಲು ಡಿಸೆಂಬರ್ 26 ರವರೆಗೆ ವಿಸ್ತರಣೆ ಮಾಡಲಾಗಿದೆ.
* ರೈಲು 06556: ಸೆಪ್ಟೆಂಬರ್ 28 ಬದಲು ಡಿಸೆಂಬರ್ 28 ರವರೆಗೆ.
* ರೈಲು 06523: ಸೆಪ್ಟೆಂಬರ್ 15 ಬದಲು ಡಿಸೆಂಬರ್ 29 ರವರೆಗೆ.
* ರೈಲು 06524: ಸೆಪ್ಟೆಂಬರ್ 16 ಬದಲು ಡಿಸೆಂಬರ್ 30 ರವರೆಗೆ.
* ರೈಲು 06547: ಸೆಪ್ಟೆಂಬರ್ 3 ಬದಲು ಡಿಸೆಂಬರ್ 24 ರವರೆಗೆ.
* ರೈಲು 06548: ಸೆಪ್ಟೆಂಬರ್ 4 ಬದಲು ಡಿಸೆಂಬರ್ 25 ರವರೆಗೆ ವಿಸ್ತರಣೆ ಮಾಡಲಾಗಿದೆ.












Click it and Unblock the Notifications