ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಬೇಡಿಕೆಯಿರುವ ರೈಲುಗಳಿಗೆ ಹೊಸ ನಿಲುಗಡೆಗಳ ಘೋಷಣೆ- ಯಾವ ನಿಲ್ದಾಣ, ಮಾಹಿತಿ
ಭಾರತೀಯ ರೈಲ್ವೇ ಇಲಾಖೆಯು ಕರಾವಳಿ ಕರ್ನಾಟಕ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ರೈಲುಗಳಿಗೆ ನಿಲುಗಡೆಯನ್ನು ಘೋಷಿಸಿದೆ. ಯಾವ ನಿಲುಗಡೆ? ಮಾಹಿತಿ ಪಡೆಯಿರಿ
ಬೆಂಗಳೂರು, ಮಾರ್ಕ್ 01: ಭಾರತೀಯ ರೈಲ್ವೇ ಇಲಾಖೆಯು ಕರಾವಳಿ ಕರ್ನಾಟಕ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ರೈಲುಗಳಿಗೆ ನಿಲುಗಡೆಯನ್ನು ಘೋಷಿಸಿದೆ. ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳ ಕೆಲ ರೈಲು ನಿಲ್ದಾಣಗಳಲ್ಲಿ ಹೊಸ ನಿಲುಗಡೆಗಳ ಹೆಸರನ್ನು ರೈಲ್ವೇ ಇಲಾಖೆ ಪ್ರಕಟಿಸಿದೆ. ಈ ಕುರಿತು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಬುಧವಾರ ಮಾಡಿದ್ದಾರೆ.
ರೈಲ್ವೆ ಇಲಾಖೆಯ ಪ್ರಕಟಣೆಯನ್ನು ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ, 'ಉಡುಪಿ- ಚಿಕ್ಕಮಗಳೂರಿನ ಜನತೆಗೆ ಸಂತಸದ ಸುದ್ದಿ. ಭಾರತೀಯ ರೈಲ್ವೇ ಕರಾವಳಿ ಕರ್ನಾಟಕ ಮತ್ತು ಚಿಕ್ಕಮಗಳೂರಿನಲ್ಲಿ ಹೆಚ್ಚು ಬೇಡಿಕೆಯಿರುವ ರೈಲುಗಳಿಗೆ ನಿಲುಗಡೆಯನ್ನು ಘೋಷಿಸಿದೆ' ಎಂದು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯ ಘೋಷಿಸಿರುವ ನಿಲುಗಡೆಗಳ ಹೆಸರನ್ನು ಶೋಭಾ ಕರಂದ್ಲಾಜೆ ನೀಡಿದ್ದಾರೆ. ಅವುಗಳ ಪಟ್ಟಿ ಇಂತಿದೆ.
1. ನೇತ್ರಾವತಿ ಎಕ್ಸ್‌ಪ್ರೆಸ್ (16345/46)- ಕುಂದಾಪುರ, ಉಡುಪಿ ಜಿಲ್ಲೆ
2. ಮತ್ಸ್ಯಗಂಧ ಎಕ್ಸ್‌ಪ್ರೆಸ್ (12619/20)- ಬರ್ಕೂರು, ಉಡುಪಿ ಜಿಲ್ಲೆ
3. ಯಶವಂತಪುರ- ಬಾರ್ಮರ್ ಎಕ್ಸ್‌ಪ್ರೆಸ್ (14805/06)- ಬೀರೂರು, ಚಿಕ್ಕಮಗಳೂರು ಜಿಲ್ಲೆ
4. ಯಶವಂತಪುರ-ವಾಸ್ಕೋಡಗಾಮಾ ಎಕ್ಸ್‌ಪ್ರೆಸ್ (17309/10) ಕಡೂರು, ಚಿಕ್ಕಮಗಳೂರು ಜಿಲ್ಲೆ
ನನ್ನ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆಯಿರುವ ನಿಲ್ದಾಣಗಳನ್ನು ಅನುಮೋದಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನನ್ನ ಕೃತಜ್ಞತೆಗಳು ಎಂದೂ ಶೋಭಾ ಕರಂದ್ಲಾಜೆ ಟ್ವೀಟಿಸಿದ್ದಾರೆ.
Good news for the people of Udupi-Chikkamagaluru!@RailMinIndia announced stoppages for the most-demanded trains in Karavali Karnataka & Chikkamgaluru.
— Shobha Karandlaje (@ShobhaBJP) February 28, 2023
1. Netravati Express (16345/46)- at Kundapura, Udupi
2. Matsyagandha Express (12619/20)- at Barkur, Udupi. pic.twitter.com/Ga7z3NqJlN
ಇವುಗಳ ಜೊತೆಗೆ ಇನ್ನೂ ನಾಲ್ಕು ಹೊಸ ನಿಲುಗಡೆಗಳನ್ನು ನಿಲುಗಡೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ. ಅವುಗಳ ಪಟ್ಟಿ ಇಲ್ಲಿದೆ.
5. ತಿರುಪತಿ ಚಾಮರಾಜನಗರ ಎಕ್ಸ್‌ಪ್ರೆಸ್ ( 16220 ) - ಕಾಮಸಮುದ್ರಂ, ಆಂಧ್ರ ಪ್ರದೇಶ
6. ಬೆಂಗಳೂರು ಕಾಕಿನಾಡ ಶೇಶಾದ್ರಿ ಎಕ್ಸ್‌ಪ್ರೆಸ್ ( 17209/ 10 )- ಟೇಕಲ್, ಕೋಲಾರ ಜಿಲ್ಲೆ
7. ಕೋಚುವೇಲಿ ಯಶವಂತಪುರ ಎಕ್ಸ್‌ಪ್ರೆಸ್ ( 22678 )- ಬಂಗಾರಪೇಟೆ, ಕೋಲಾರ ಜಿಲ್ಲೆ
8, ಹುಬ್ಬಳ್ಳಿ ಕಾರಟಗಿ ಎಕ್ಸ್‌ಪ್ರೆಸ್ ( 17303/ 04 )- ಬನ್ನಿ ಕೊಪ್ಪ, ಕೊಪ್ಪಳ ಜಿಲ್ಲೆ
ದಕ್ಷಿಣ ರೈಲ್ವೆ ತನ್ನ ಕಾರ್ಯಾಚರಣೆಗಳಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದೆ. ಸಿಕಂದರಾಬಾದ್ ವಿಭಾಗದ ಮಕುಡಿ - ವೀರೂರ್ ನಿಲ್ದಾಣಗಳ ನಡುವಿನ ಮೂರನೇ ಮಾರ್ಗದ ಕಾರ್ಯಾರಂಭಕ್ಕಾಗಿ ಪೂರ್ವ-ಇಂಟರ್‌ಲಾಕಿಂಗ್/ ಇಂಟರ್‌ಲಾಕಿಂಗ್ ಕೆಲಸಗಳಿಂದಾಗಿ ರೈಲು ಸೇವೆಗಳ ಮಾದರಿಯಲ್ಲಿ ಬದಲಾವಣೆ ಆಗಿದೆ ಎಂದು ಪ್ರಾಧಿಕಾರ ತಿಳಿಸಿದೆ.












Click it and Unblock the Notifications