India vs Pakistan: ಕರ್ನಾಟಕದ ಎಲ್ಲಾ 17 ಅಣೆಕಟ್ಟು ಸೇರಿ ವಿವಿಧೆಡೆ ಹೈ - ಅಲರ್ಟ್, ಪಂಜಾಬ್‌ನಲ್ಲಿ ಪವರ್ ಕಟ್!
ಯುದ್ಧ ಭೀತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ದೇಶದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದ ಪಂಜಾಬ್ ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡಿರುವುದು ವರದಿಯಾಗಿದೆ. ತುರ್ತು ಸಿದ್ಧತೆಯ ದೃಷ್ಟಿಯಿಂದ ಭಾರತ ಹಾಗೂ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪಂಜಾಬ್ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ. ಈ ರೀತಿ ಇರುವಾಗಲೇ ಕರ್ನಾಟಕ ಸರ್ಕಾರವು ಡ್ಯಾಂಗಳಿಗೆ (ಜಲಾಶಯಗಳ) ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಮಾಡಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಯಾವುದೇ ಕ್ಷಣದಲ್ಲಾದರೂ ಯುದ್ಧ ನಡೆಯಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ದೇಶಗಳ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಇರುವಾಗಲೇ ಕೇಂದ್ರ ಸರ್ಕಾರವು ದೇಶದ ಎಲ್ಲಾ ರಾಜ್ಯಗಳಿಗೂ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಿದೆ. ಇದರಲ್ಲಿ ಕರ್ನಾಟಕಕ್ಕೂ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಭಾರತ ಹಾಗೂ ಪಾಕ್‌ನ ನಡುವೆ ಯುದ್ಧ ಭೀತಿ ಇರುವ ಹಿನ್ನೆಲೆಯಲ್ಲಿ ಹಾಗೂ ವಿವಿಧ ವಿಚಾರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮುಖ್ಯವಾಗಿ ದೇಶದಾದ್ಯಂತ ಸೈಬರ್ ದಾಳಿ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳಿಗೆ ಸಂಭನೀಯ ಸೈಬರ್ ದಾಳಿ ತಡೆಯುವುದಕ್ಕೆ ಬೇಕಾಗಿರುವ ಅಗತ್ಯ ಮುಂಜಾಗ್ರತೆಗಳನ್ನು ವಹಿಸುವುದಕ್ಕೆ ಸೂಚನೆ ನೀಡಲಾಗಿದೆ.
ಕರ್ನಾಟಕ ಸರ್ಕಾರಕ್ಕೆ ಭಾರತ ಸರ್ಕಾರವು ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಿದೆ ಎಂದು ಹೇಳಲಾಗಿದೆ. ಇದರಲ್ಲಿ ರಾಜ್ಯದ ಎಲ್ಲಾ 17 ಅಣೆಕಟ್ಟುಗಳ ಭದ್ರತೆ ವಿಚಾರವು ಸೇರಿದೆ. ದೇಶದ ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕರ್ನಾಟಕದ ಎಲ್ಲಾ 17 ಅಣೆಕಟ್ಟುಗಳ ಭದ್ರತೆ ಹೆಚ್ಚಿಸುವಂತೆ ಹಾಗೂ ವಿಶೇಷ ಭದ್ರತೆ ಕಲ್ಪಿಸುವಂತೆ ರಾಜ್ಯ ಸರ್ಕಾರವು ಆದೇಶ ಮಾಡಿದೆ.
ಕರ್ನಾಟಕದಲ್ಲಿ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಕಾಪಾಡಿಕೊಂಡು ಹೆಚ್ಚಿನ ಭದ್ರತೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ.
ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟೆಗಳಿಗೆ ಭದ್ರತೆ ಕಲ್ಪಿಸಬೇಕು. ಒಂದೊಮ್ಮೆ ಭದ್ರತೆಯಲ್ಲಿ ಯಾವುದೇ ಲೋಪ ಕಂಡು ಬಂದರೂ ಸಂಬಂಧಪಟ್ಟ ಯೋಜನಾಧಿಕಾರಿ ಇಲ್ಲವೇ ಅಣೆಕಟ್ಟು ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನೂ ನೀಡಲಾಗಿದೆ.
ಯಾವ್ಯಾವ ಅಣೆಕಟ್ಟುಗಳಲ್ಲಿ ಭದ್ರತೆ ?
ರಾಜ್ಯದ 17 ಪ್ರಮುಖ ಅಣೆಕಟ್ಟುಗಳಲ್ಲಿ ಭದ್ರತೆಯನ್ನು ನೀಡಲಾಗಿದೆ. ಅದರಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕರ್ನಾಟಕ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕೃಷ್ಣ ಭಾಗ್ಯ ಜಲನಿಗಮ ನಿಯಮಿತ- ಬೆಂಗಳೂರು, ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ- ಬೆಂಗಳೂರು, ಹೇಮಾವತಿ ನಾಲಾವಲಯ- ತುಮಕೂರು, ಹೇಮಾವತಿ ಯೋಜನೆ- ಗೊರೂರು, ನೀರಾವರಿ ಉತ್ತರ- ಬೆಳಗಾವಿ, ತುಂಗಾ ಮೇಲ್ದಂಡೆ- ಶಿವಮೊಗ್ಗ, ಮಲಪ್ರಭಾ ಯೋಜನಾ ವಲಯ- ಧಾರವಾಡ, ನೀರಾವರಿ ಯೋಜನಾ ವಲಯ- ಕಲಬುರಗಿ, ಭದ್ರಾ ಮೇಲ್ದಂಡೆ ಯೋಜನೆ- ಚಿತ್ರದುರ್ಗ ಹಾಗೂ ಆಲಮಟ್ಟಿ ಅಣೆಕಟ್ಟು ವಲಯ, ಕಾಲುವೆ 1 ಭೀಮರಾಯನಗುಡಿ, ಕಾಲುವೆ 2- ರಾಂಪುರ, ನಾರಾಯಣಪುರ ಅಣೆಕಟ್ಟುಗಳು ಪ್ರಮುಖವಾಗಿವೆ.












Click it and Unblock the Notifications