ಭಾರತ ಹಿಂದೂ ರಾಷ್ಟ್ರವಾಗಿಲ್ಲ; ಆಗುವುದನ್ನು ಬಯಸುವುದೂ ಇಲ್ಲ: ನಟ ಕಿಶೋರ್ ಕುಮಾರ್
ನಟ ಕಿಶೋರ್ ಕುಮಾರ್ ಅವರು ಹಿಂದೂ ರಾಷ್ಟ್ರದ ವಿಚಾರವಾಗಿ ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ. ನಮ್ಮದು ಹಿಂದೂ ರಾಷ್ಟ್ರವಲ್ಲ, ಆಗಲು ಸಹ ಬಯಸುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹಿಂದೂ ರಾಷ್ಟ್ರ ಪರಿಕಲ್ಪನೆಯ ಹೇಳಿಕೆಗೆ ನಟ ಕಿಶೋರ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ದೇಶದ 142 ಕೋಟಿ ನಾಗರಿಕರು ಬಯಸಿದರೆ ನಾಳೆ ಬೆಳಿಗ್ಗೆಯೊಳಗೆ ಭಾರತವು ಹಿಂದೂ ರಾಷ್ಟ್ರವಾಗಬಹುದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈಚೆಗೆ ಹೇಳಿದ್ದರು. ಈ ಸುದ್ದಿಯೊಂದನ್ನು ಫೇಸ್ ಬುಕ್‌ನಲ್ಲಿ ಹಂಚಿಕೊಂಡಿರುವ ನಟ ಕಿಶೋರ್ ಕುಮಾರ್ ಅವರು ಈ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀ ಭಾಗವತ್ ಅವರೇ, ಇಂದು ಆ ನಿಮ್ಮನಾಳೆಯ ಮರುದಿನ .. ನಾವು ಹಿಂದೂ ರಾಷ್ಟ್ರವಾಗಿಲ್ಲ. ಆಗಲೂ ಬಯಸುವುದಿಲ್ಲ. ನಿಜವಾದ ಸಮಸ್ಯೆಗಳ ಮೇಲೆ ಗಮನ ಹರಿಸುವುದರ ಬದಲು ಜನರನ್ನು ಕೋಮುವಾದಿ ಪದಗಳ ಮೇಲೆ ವಿಭಜಿಸುವ ಇಂತಹ ಜನಗಳ ಮಾತುಗಳನ್ನು ಕೇಳುತ್ತಾ ಹೋದರೆ, ನಾವು ಖಂಡಿತವಾಗಿಯೂ ಹಿಂದೂ ಅಲ್ಲ ಖಾಯಂ ಹಿಂದುಳಿದ ರಾಷ್ಟ್ರವಾಗುತ್ತೇವೆ ಎಂದಿದ್ದಾರೆ. ಇನ್ನು ನಟ ಕಿಶೋರ್ ಕುಮಾರ್ ಅವರ ಈ ಬರಹಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ನೆಟ್ಟಿಗರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ನಾಗರಾಜ್ ಎನ್ನುವವರು, ನಿಜವಾಗ್ಲೂ ದೇಶದ ಸುರಕ್ಷತೆ ಬದ್ಧತೆ ಇದ್ದರೆ, ಈ ತರ ಮಾತಾಡೋಲ್ಲ ನೀವು ಜ್ಯಾತಾತೀತ ಎಂದುಕೊಂಡು ಬಾಂಬ್ ಹಾಕಿದವರ ಬಗ್ಗೆ ಯಾಕೆ. ಮಾತಾಡೋಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ವಸಂತ್ ಕುಮಾರ್ ಎನ್ನುವವರು, ನೀವು ಸೂತ್ರಧಾರಿ ಅಂತ ಜಗತ್ತಿಗೆ ಗೊತ್ತು. ನಿಮ್ಮ ಹಿಂದೆ ಬಹತೇಕರಿದ್ದಾರೆ ಆ ಧೈರ್ಯದಿಂದ ನೀವು ಹಿಂದೂ ವಿರೋಧಿ ಪೋಸ್ಟ್‌ಗಳನ್ನು ಮಾಡುತ್ತಿದ್ದೀರಿ. ಆದರೆ ಅದೇ ಬ್ಲಾಸ್ಟ್ ಬಗ್ಗೆ ಹಾಕಿ ನೋಡುವ.ನಿಮ್ಮ ಸಮಾಜಿಕ ಕಳಕಳಿ ತಿಳಿಯೋಣ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ನಟ ಕಿಶೋರ್ ಅವರ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಸರಿಯಾಗಿ ಹೇಳಿದ್ದೀರಿ ಎಂದು ಕಿಶೋರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications