I.N.D.I.A ಮೈತ್ರಿಕೂಟ; ಆಯ್ದ ಪ್ರಬುದ್ಧರ ಹೇಳಿಕೆಗಳ ಪಟ್ಟಿ!
ಬೆಂಗಳೂರು, ಸೆಪ್ಟೆಂಬರ್ 07; ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಿರೋಧ ಪಕ್ಷಗಳ I.N.D.I.A ಮೈತ್ರಿಕೂಟದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ.
ಕರ್ನಾಟಕ ಬಿಜೆಪಿ ಗುರುವಾರ ಟ್ವೀಟ್ ಒಂದನ್ನು ಮಾಡಿದೆ. 'ಅಷ್ಟಕ್ಕೂ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಳಿದುಳಿದ ಪಕ್ಷಗಳನ್ನೆಲ್ಲಾ ಸೇರಿಸಿ ಕಲೆ ಹಾಕಿದ I.N.D.I.A ಹೆಸರಿನ ಮೈತ್ರಿಕೂಟ ಭಾರತ ಪರ ಅಲ್ಲ, ಭಾರತದ ವಿರೋಧಿ ನೀತಿಗಳಿಗೇ ಹೆಸರುವಾಸಿ' ಎಂದು ಆರೋಪ ಮಾಡಿದೆ.

ಬಿಜೆಪಿ ಟ್ವೀಟ್‌ನಲ್ಲಿ 'ಮೈತ್ರಿಕೂಟದ ಆಯ್ದ ಪ್ರಬುದ್ಧರು ನೀಡಿರುವ ಹೇಳಿಕೆಯ ಯಥಾವತ್ ಅರ್ಥವನ್ನು ಈ ಕೆಳಗಿನ ಸಾಲುಗಳಲ್ಲಿ ನೀಡಲಾಗಿದೆ' ಎಂದು ಹೇಳಿದೆ. ಮೈತ್ರಿಕೂಟದ ಪಾಲುದಾರ ಪಕ್ಷಗಳ ಕೆಲವು ನಾಯಕರ ಹೇಳಿಕೆಗಳನ್ನು ಉಲ್ಲೇಖ ಮಾಡಿದೆ.
ಪ್ರಬುದ್ಧರು ನೀಡಿರುವ ಹೇಳಿಕೆ
* ಡಿಎಂಕೆ ನಾಯಕ ಹಾಗೂ ಎಂ. ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಪ್ರಕಾರ ನಮ್ಮ ಈ ಮಣ್ಣಿನಲ್ಲಿ ಸಹಸ್ರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಸನಾತನ ಹಿಂದೂ ಧರ್ಮವೇ ಒಂದು ಸಾಂಕ್ರಾಮಿಕ!
* ಸಮಾಜವಾದಿ ಪಾರ್ಟಿಯ ಶ್ಯಾಮ ಪ್ರಸಾದ್ ಮೌರ್ಯ ಅವರಿಗೆ ಹಿಂದೂ ಅನ್ನುವ ಧರ್ಮವೇ ಒಂದು ವಂಚನಾ ಜಾಲ!
* ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯ ಗುಲಾಂ ರಸೂಲ್ ಬಲ್ಯಾವಿ ಅವರು ಹಿಂದೂ ಸಮಾಜದ ಮೇಲೆ ಹಾಕುವ ಧಮ್ಕಿ ಮತ್ತೂ ಅಪಾಯಕಾರಿಯಾದದ್ದು. ಭಾರತದ ಎಲ್ಲಾ ನಗರಗಳನ್ನೂ ಬೇಕಾದರೆ ನಿರ್ನಾಮ ಮಾಡುವ ತಾಕತ್ತು ನಮಗಿದೆ ಎಂದು ಕರೆ ಕೊಟ್ಟು ಸಮಾಜದಲ್ಲಿ ದ್ವೇಷದ ಸಂತೆಯನ್ನೇ ತೆರೆದಿದ್ದಾರೆ!
* ರಾಮಾಯಣ ಆಧಾರವಾಗಿಟ್ಟು ತುಳಸಿದಾಸರು ಬರೆದ ರಾಮಚರಿತ ಮಾನಸ್ ಸಮಾಜದಲ್ಲಿ ಅಶಾಂತಿಗೆ ಕಾರಣ ಎಂದವರು ಆರ್‌ಜೆಡಿ ಪಕ್ಷದಿಂದ ಬಿಹಾರದ ಶಿಕ್ಷಣ ಸಚಿವರೂ ಆಗಿರುವ ಚಂದ್ರಶೇಖರ್.
* ಜೆಎಂಎಂನ ಹೇಮಂತ್ ಸೊರೇನ್ ಪ್ರಕಾರ ಕಾವಿ ವಸ್ತ್ರಧಾರಿಗಳೆಲ್ಲಾ ಅತ್ಯಾಚಾರಿಗಳು!
* ಕಾಂಗ್ರೆಸ್ ಧುರೀಣ ದಿಗ್ವಿಜಯ್ ಸಿಂಗ್ ಪ್ರಕಾರ ಲಷ್ಕರ್-ಎ-ತೊಯ್ಬಾ, ಐಸಿಸ್, ಪಿಎಫ್‌ಐ ಉಗ್ರಗಾಮಿಗಳನ್ನು ಪೋಷಿಸುವುದೇ ಇಲ್ಲ.
* ಹಿಂದೂ ವಿರೋಧಿ ನೀತಿಯನ್ನೇ ನಿತ್ಯವೂ ಅನುಸರಿಸುತ್ತಾ ಅದನ್ನು ಮತಾಂತರ ಮಾಡಲು ಬಳಸಿಕೊಳ್ಳುವ ತಮಿಳುನಾಡಿನ ಜಾರ್ಜ್ ಪೊನ್ನಯ್ಯನಂಥವರ ಜೊತೆಯಲ್ಲಿ ರಾಹುಲ್ ಗಾಂಧಿಯವರದ್ದು ಘನ ಗಂಭೀರ ಚರ್ಚೆ. ಅವರ ಭಾರತ ವಿರೋಧಿ ನೀತಿಗಳಿಗೆಲ್ಲಾ ಜೈ!
ಬಿಜೆಪಿ ಟ್ವೀಟ್‌ನಲ್ಲಿ, 'ಭಾರತ ವಿರೋಧಿ ಮೈತ್ರಿಕೂಟದ ಸದಸ್ಯರೆಲ್ಲಾ ಹಿಂದುತ್ವವನ್ನೇ ಸರ್ವನಾಶ ಮಾಡುವ ಹೊಂಚು ಹಾಕಿದ್ದರೆ ಅದಕ್ಕೆ ಬೆಂಬಲ ಮತ್ತು ಪ್ರೋತ್ಸಾಹ ಕರ್ನಾಟಕದಿಂದಲೇ ಹೋಗುತ್ತಿದೆ. ಅದು ಹೇಗೆ ಎಂಬುದಕ್ಕೆ ಇಲ್ಲೇ ನಮ್ಮವರ ಹೇಳಿಕೆಗಳನ್ನು ಗಮನಿಸಿ' ಎಂದು ಮತ್ತೊಂದು ಪಟ್ಟಿ ನೀಡಿದೆ.
* ಹಿಂದೂ ಧರ್ಮ ಯಾವಾಗ ಹುಟ್ಟಿತು ಮತ್ತು ಯಾರು ಹುಟ್ಟಿಸಿದರು ಎಂಬುದು ಇಂದಿಗೂ ಕ್ವಶ್ಚನ್ ಮಾರ್ಕ್ ಅಂದವರು ಘನ ಗೃಹಸಚಿವರಾದ ಡಾ. ಪರಮೇಶ್ವರ್ ಅವರು.
* ಹಿಂದೂ ಅನ್ನೋ ಪದವೇ ಹೊಲಸು ಅಂದವರು ಕಾಂಗ್ರೆಸ್ ಪಕ್ಷದ ಸತೀಶ್ ಜಾರಕಿಹೊಳಿಯವರು.
* ಹಿಂದೂ ಧರ್ಮ ಒಂದು ವ್ಯಾಧಿಯಂತೆ ಎಂದ ಸ್ಟಾಲಿನ್ ಹೇಳಿಕೆ ಸರಿಯಾದುದೇ ಎಂದು ಕನ್ನಡದ ನೆಲದಲ್ಲಿ ನಿಂತು ಕೂಗಿ ಹೇಳಿದ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆಯವರು. ಎಂದು ಬಿಜೆಪಿ ಹೇಳಿದೆ.












Click it and Unblock the Notifications