ಬಾಗೇಪಲ್ಲಿ: ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಸೆಳೆಯಲು ನಂಗಾನಾಚ್

Posted By:
Subscribe to Oneindia Kannada

ಬಾಗೇಪಲ್ಲಿ, ಜನವರಿ 12: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ನಂಗಾನಾಚ್ ಮಾಡಿಸಲಾಗಿದೆ.

ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹರಿಕೇರಿ ಕೃಷ್ಣಾ ರೆಡ್ಡಿ ಅವರು ಇಂದು ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಯಾತ್ರೆಗೆ ಜನರನ್ನು ಸೆಳೆಯುವ ಉದ್ದೇಶದಿಂದ ಯುವತಿಯರಿಂದ ಅಶ್ಲೀಶ ನೃತ್ಯ ಮಾಡಿಸಿದ್ದಾರೆ.

'ಬಿಜೆಪಿ ನಂಗಾನಾಚ್' ಪ್ರಕರಣಕ್ಕೆ ಹೊಸ ತಿರುವು!

ಗಡಿಭಾಗದಲ್ಲಿ ಬಿಜೆಪಿಗೆ ಒಲವು ಕಡಿಮೆ ಇರುವ ಕಾರಣ ಯಾವುದೇ ವೇದಿಕೆ ಕಾರ್ಯಕ್ರಮ ಆಯೋಜಿಸದೆ ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಹಲವು ಮುಂಖಂಡರ ರೋಡ್ ಶೋ ಆಯೋಜಿಸಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ನಿಗದಿಪಡಿಸಿದ್ದ ರೋಡ್ ಶೋ ತಡವಾಗಿ ಬಾಗೇಪಲ್ಲಿಗೆ ಆಗಮಿಸಿದ ಕಾರಣ ಅಲ್ಲಿಯವರೆಗೆ ಜನರನ್ನು ತಡೆದು ನಿಲ್ಲಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಹರಿಕೇರಿ ಕೃಷ್ಣಾರೆಡ್ಡಿ ಅವರು ನಂಗಾನಾಚ್ ಮೊರೆ ಹೋಗಿದ್ದಾರೆ.

Indecent dance in Bagepalli BJP Parivartana yatre

ಬೆಳಿಗ್ಗೆ 11ರ ಸುಮಾರಿಗೆ ಆರಂಭವಾದ ನಂಗಾನಾಚ್ ಸಂಜೆಯ ವರೆಗೆ ನಡೆದಿದೆ. ಕೆಲವು ಯುವತಿಯರು ಮತ್ತು ಯುವಕರು 'ಅಲ್ಲಾಡ್ಸ್ ಅಲ್ಲಾಡ್ಸ್‌' ಸೇರಿದಂತೆ ಹಲವು ಹಾಡುಗಳಿಗೆ ಮಾದಕವಾಗಿ ವೇದಿಕೆ ಮೇಲೆ ಕುಣಿದರು, ಕಾರ್ಯಕ್ರಮ ನೋಡುತ್ತಿದ್ದವರೊಂದಿಗೂ ಅಶ್ಲೀಲವಾಗಿ ವರ್ತಿಸಿದರು ಎನ್ನಲಾಗಿದೆ.

ಸಂಕ್ರಾಂತಿ ವಿಶೇಷ ಪುಟ

ಯಡಿಯೂರಪ್ಪ ಅವರ ರೋಡ್ ಶೋ ಬಾಗೇಪಲ್ಲಿಗೆ ಬಂದಾಗಲೂ ನಂಗಾನಾಚ್ ಕಾರ್ಯಕ್ರಮ ಮುಂದುವರೆದಿತ್ತು, ರೋಡ್‌ ಶೋ ಗಿಂತಲೂ ಹೆಚ್ಚಿನ ಜನ ನಂಗಾನಾಚ್ ಕಾರ್ಯಕ್ರಮ ನೋಡುವುದರಲ್ಲಿಯೇ ನಿರತರಾಗಿದ್ದರು ಎಂಬುದು ಪ್ರತ್ಯಕ್ಷದರ್ಶಿಗಳ ಮಾತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bagepalli BJP leader Harikeri Krishna reddy organized Indecent dance to hold people for BJP Parivarthana Yatre. Dance video is viral in social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ