ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : ಶುಕ್ರವಾರದ 10 ಮಿಂಚಿನ ಬೆಳವಣಿಗೆ

Subscribe to Oneindia Kannada

ಬೆಂಗಳೂರು, ಆಗಸ್ಟ್ 4: ಸತತ ಮೂರನೇ ದಿನವೂ ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರು ಹಾಗೂ ಕುಟುಂಬಸ್ಥರ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರಿದಿದೆ.

ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನ ಡಿಕೆಶಿ ಸುತ್ತ ಮುತ್ತ ಹಲವು ಬೆಳವಣಿಗೆಗಳು ನಡೆದವು. ದೆಹಲಿ, ಮೈಸೂರು, ಹಾಸನದಲ್ಲಿ ಮುಂದುವರಿದ ದಾಳಿ, ಡಿಕೆಶಿ ಆರೋಗ್ಯದಲ್ಲಿ ಏರುಪೇರು, ಅಣ್ಣನನ್ನು ಭೇಟಿಯಾಗಿ ಬಂದ ತಮ್ಮ ಡಿಕೆ ಸುರೇಶ್, ಶಿವಕುಮಾರ್ ಮನೆಗೆ ಆದಾಯ ತೆರಿಗೆ ಇಲಾಖೆ ತನಿಖಾ ವಿಭಾಗದ ಡಿಜಿ ಭೇಟಿ.. ಹೀಗೆ ಹತ್ತು ಹಲವು ಬೆಳವಣಿಗೆಗಳು ನಡೆದವು ಅವುಗಳು ಸಂಪೂರ್ಣ ಚಿತ್ರಣ ಇಲ್ಲಿದೆ.

ಪತ್ರ : ಅಕ್ರಮ ಸಂಪಾದನೆ ಮಾಡಿರುವವರನ್ನು ಬಿಡಬೇಡಿ!

ಮೂರನೇ ದಿನವೂ ಮುಂದುವರಿದ ದಾಳಿ

ಮೂರನೇ ದಿನವೂ ಮುಂದುವರಿದ ದಾಳಿ

ಗುರುವಾರ ಇಡೀ ದಿನ ತಪಾಸಣೆ ನಡೆಸಿ, ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಶುಕ್ರವಾರವೂ ತಮ್ಮ ಕಾರ್ಯಾಚರಣೆ ಮುಂದುವರಿದಿದೆ. ಬೆಂಗಳೂರಿನ ಸದಾಶಿವ ನಗರ ಹಾಗೂ ದೆಹಲಿಯ ಸಫ್ದರ್ ಜಂಗ್ ನಲ್ಲಿರುವ ಡಿಕೆಶಿ ಮನೆ, ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ತಿಮ್ಮಯ್ಯ ಮನೆ, ಹಾಸನದಲ್ಲಿರುವ ಡಿಕೆಶಿ ಆಪ್ತ ಸಚಿನ್ ನಾರಾಯಣ್ ಸೋದರ ಚೇತನ್ ಮನೆ, ಮಂಡ್ಯದಲ್ಲಿರುವ ಶಿವಕುಮಾರ್‌ ಅವರ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ ಮನೆಗಳಲ್ಲಿಯೂ ಶೋಧ ಕಾರ್ಯಾಚರಣೆಯನ್ನು ಐಟಿ ಅಧಿಕಾರಿಗಳು ಮುಂದುವರೆಸಿದ್ದಾರೆ.

 ಹದಗೆಟ್ಟ ಡಿಕೆಶಿ ಆರೋಗ್ಯ

ಹದಗೆಟ್ಟ ಡಿಕೆಶಿ ಆರೋಗ್ಯ

ಮೂರು ದಿನಗಳಿಂದ ಅಕ್ಷರಶಃ ಗೃಹ ಬಂಧನದಲ್ಲಿರುವ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಇಂದು ಏರುಪೇರು ಕಂಡು ಬಂತು. ಕೊನೆಗೆ ಐಟಿ ಅಧಿಕಾರಿಗಳೇ ಮೂವರು ವೈದ್ಯರನ್ನು ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು.

ನಂತರ ಅಣ್ಣ ಅವರನ್ನು ಭೇಟಿಯಾಗಿ ಬಂದ ತಮ್ಮ ಡಿಕೆ ಸುರೇಶ್, "ಡಿಕೆ ಶಿವಕುಮಾರ್ ಆರೋಗ್ಯ ಸ್ಥಿರವಾಗಿದೆ. ಸ್ವಲ್ಪಮಟ್ಟಿಗೆ ರಕ್ತದೊತ್ತಡದಲ್ಲಿ ಏರುಪೇರಾಗಿದೆ. ಒಂದು ವಾರ ವಿಶ್ರಾಂತಿಗೆ ಸೂಚಿಸಿದ್ದಾರೆ," ಎಂದು ಹೇಳಿದರು.

ಡಿಕೆ ಶಿವಕುಮಾರ್ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ: ಸಂಕಷ್ಟದಲ್ಲಿ ಹೈಕಮಾಂಡ್?

 ಎಲ್ಲಾ ದುಡ್ಡು ಡಿಕೆಶಿಗೆ ಸೇರಿದ್ದಲ್ಲ !

ಎಲ್ಲಾ ದುಡ್ಡು ಡಿಕೆಶಿಗೆ ಸೇರಿದ್ದಲ್ಲ !

ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಸುರೇಶ್ "ಒಟ್ಟು 70 ಸ್ಥಳಗಳಲ್ಲಿ ರೈಡ್ ಮಾಡಿದ್ದಾರೆ. ಹಾಗಂಥ ವಶಪಡಿಸಿಕೊಂಡ ಹಣ ಎಲ್ಲವೂ ಡಿಕೆ ಶಿವಕುಮಾರ್ ಅಥವಾ ಕುಟುಂಬಸ್ಥರಿಗೆ ಸೇರಿದ್ದಲ್ಲ," ಅಂತ ಸುರೇಶ್ ಭಿನ್ನ ಹೇಳಿಕೆ ನೀಡಿದ್ದಾರೆ.

"ಎಐಸಿಸಿ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಎಲ್ಲರೂ ನಮಗೆ ಬೆಂಬಲ ನೀಡುತ್ತಿದ್ದಾರೆ. ಹಿರಿಯ ನಾಯಕರೂ ಬೆಂಬಲ ಸೂಚಿಸಿ ಕರೆ ಮಾಡಿದ್ದಾರೆ. 'ನಾವೆಲ್ಲಾ ಜತೆಗಿದ್ದೇವೆ. ಇದೆಲ್ಲಾ ರಾಜಕೀಯ ಪ್ರತೀಕಾರದ ದಾಳಿ' ಎಂದು ಹೇಳಿದ್ದಾರೆ. ನಾವು ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಾಗಿದ್ದೇವೆ. ಗುಜರಾತ್ ಶಾಸಕರೂ ಹೆದರಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಶಾಸಕರೆಲ್ಲಾ ಉತ್ಸಾಹದಲ್ಲಿದ್ದಾರೆ," ಎಂಬುದಾಗಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

 ಡಿಕೆಶಿ ಮನೆ ಮುಂದೆ ಸುರೇಶ್ ಗದ್ದಲ

ಡಿಕೆಶಿ ಮನೆ ಮುಂದೆ ಸುರೇಶ್ ಗದ್ದಲ

ಇಂದು ಮತ್ತೆ ಅಣ್ಣ ಡಿಕೆ ಶಿವಕುಮಾರ್ ರನ್ನು ಭೇಟಿಯಾಗಲು ಸದಾಶಿವ ನಗರದ ಮನೆಗೆ ಸಂಸದ ಡಿಕೆ ಸುರೇಶ್ ಬಂದರು. ಗುಜರಾತ್ ಕಾಂಗ್ರೆಸ್ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಅಣ್ಣನ ಜತೆ ಮಾತನಾಡಬೇಕು ಎಂದು ಹೇಳಿದರು. ಆದರೆ ಅಧಿಕಾರಿಗಳು ಭೇಟಿಗೆ ಅವಕಾಶವನ್ನೇ ನೀಡಲಿಲ್ಲ. ಈ ವೇಳೆ ಅಧಿಕಾರಿಗಳ ಜತೆಗೆ ಸುರೇಶ್ ಜಗಳವಾಡಿದರು. ನಂತರ ಭೇಟಿಗೆ ಅವಕಾಶ ನೀಡಲಾಯಿತು.

ಡಿಕೆಶಿ ಮನೆಯಲ್ಲಿ ಮುಂದುವರಿದ ತನಿಖೆ: ದಿನದ 10 ಪ್ರಮುಖ ಬೆಳವಣಿಗೆ

 ಲೆಕ್ಕಪತ್ರಗಳು ಪಾರದರ್ಶಕವಾಗಿವೆ.

ಲೆಕ್ಕಪತ್ರಗಳು ಪಾರದರ್ಶಕವಾಗಿವೆ.

ಅಣ್ಣನ ಮನೆ ಮುಂದೆ ಹೇಳಿಕೆ ನೀಡಿದ ತಮ್ಮ ಸುರೇಶ್, "ನಾವು ಉದ್ಯಮಿಗಳು ಮತ್ತು ರಾಜಕಾರಣಿಗಳೂ ಹೌದು. ಎಲ್ಲ ಲೆಕ್ಕಪತ್ರಗಳು ಪಾರದರ್ಶಕವಾಗಿವೆ. ಯಾವುದೇ ಹಣವನ್ನು ಐಟಿ ಅಧಿಕಾರಿಗಳು ನಮ್ಮಿಂದ ವಶಪಡಿಸಿಕೊಂಡಿಲ್ಲ. ಐಟಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ನೀಡುತ್ತೇವೆ," ಎಂದು ತಿಳಿಸಿದ್ದಾರೆ.

 ಮಾಧ್ಯಮಗಳ ಮೇಲೆ ಮೊಕದ್ದಮೆ

ಮಾಧ್ಯಮಗಳ ಮೇಲೆ ಮೊಕದ್ದಮೆ

ಕೆಲವು ಮಾಧ್ಯಮಗಳಲ್ಲಿ ಊಹಾಪೋಹದ ವರದಿಗಳು ಪ್ರಸಾರವಾಗುತ್ತಿವೆ. ಅಂತಹ ಮಾಧ್ಯಮಗಳ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಡಿಕೆ ಸುರೇಶ್ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.

 ರಾಜಕೀಯ ಪ್ರೇರಿತ ದಾಳಿ - ಸಿಎಂ

ರಾಜಕೀಯ ಪ್ರೇರಿತ ದಾಳಿ - ಸಿಎಂ

"ಡಿ.ಕೆ.ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ. ಭದ್ರತೆಗೆ ಸಿಆರ್‍'ಪಿಎಫ್ ಪೊಲೀಸರನ್ನು ಕರೆತಂದು ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಧಕ್ಕೆ ತಂದಿದೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಯಾವ ಮನೆಯನ್ನಾದರೂ ಶೋಧ ಮಾಡುವುದಕ್ಕೆ ತನ್ನ ವಿರೋಧವಿಲ್ಲ. ಆದರೆ ಶಿವಕುಮಾರ್ ಮನೆ ಮೇಲೆ ದಾಳಿ ಮಾಡಲು ಆಯ್ಕೆ ಮಾಡಿಕೊಂಡ ಸಮಯ ಮತ್ತು ಉದ್ದೇಶ ರಾಜಕೀಯ ಪ್ರೇರಿತವಾಗಿದೆ," ಎಂದು ಕಿಡಿಕಾರಿದರು.

ಇನ್ನು ಡಿ.ಕೆ.ಶಿವಕುಮಾರ್ ತಾಯಿ ತಮ್ಮ ಮೇಲೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದರು.

 ಅನಂತ್ ಕುಮಾರ್, ಯಡಿಯೂರಪ್ಪ ಮೇಲೂ ಕೇಸ್ ಗಳಿವೆ

ಅನಂತ್ ಕುಮಾರ್, ಯಡಿಯೂರಪ್ಪ ಮೇಲೂ ಕೇಸ್ ಗಳಿವೆ

ಆಂಗ್ಲ ಮಾಧ್ಯಮದವರು ಕೇಂದ್ರ ಸಚಿವ ಅನಂತ್‍ಕುಮಾರ್ ಹಾಗೂ ಬಿಜೆಪಿ ನಾಯಕರು ದಾಳಿ ಸಮರ್ಥಿಸಿಕೊಳ್ಳುತ್ತಿರುವ ಬಗ್ಗೆ ಕೇಳಿದಾಗ, ಸ್ವತಃ ಅನಂತ್‍ಕುಮಾರ್ ಅವರೇ ಭ್ರಷ್ಟಾಚಾರ ಹಗರಣದ ಆರೋಪಿ. ಯಾಗಿದ್ದಾರೆ. ಯಡಿಯೂರಪ್ಪ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಕಾಂಗ್ರೆಸ್ ನಾಯಕರು, ಸಚಿವರ ಮೇಲೆ ಅವರು ಆರೋಪ ಮಾಡುವುದು ಅಸಂಬದ್ಧ," ಎಂದು ಸಿಡುಕಿನಲ್ಲೇ ಉತ್ತರಿಸಿದರು.

 ಡಿಕೆಶಿ ಮನೆಗೆ ಡಿಜಿ ಭೇಟಿ

ಡಿಕೆಶಿ ಮನೆಗೆ ಡಿಜಿ ಭೇಟಿ

ದಾಳಿ ಸೂತ್ರದಾರ ಎನ್ನಲಾದ ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ವಲಯದ ತನಿಖಾ ವಿಭಾಗದ ಡಿಜಿ ಬಿ.ಆರ್ ಬಾಲಕೃಷ್ಣನ್ ಸದಾಶಿವ ನಗರ ಮನೆಗೆ ತೆರಳಿದ್ದಾರೆ. ಮನೆಗೆ ಮೂವರು ಸಿಎಗಳನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರೆಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂತಿಮ ಹಂತದ ದಾಖಲೆಗಳ ಕ್ರೋಢೀಕರಣದಲ್ಲಿ ಅಧಿಕಾರಿಗಳು ನಿರತವಾಗಿರಬಹುದು ಎನ್ನಲಾಗಿದೆ.

 ಇಂದು ದಾಳಿ ಕೊನೆ?

ಇಂದು ದಾಳಿ ಕೊನೆ?

ಮನೆಯೊಳಕ್ಕೆ ಹೋಗಿ ಡಿಕೆ ಶಿವಕುಮಾರ್ ಭೇಟಿಯಾದ ಸುರೇಶ್ ಇಂದು ಅಥವಾ ನಾಳೆ ಬೆಳಿಗ್ಗೆ ದಾಳಿ ಕೊನೆಯಾಗಲಿದೆ. ನಾನು ಅಧಿಕಾರಿಗಳ ಜತೆ ಮಾತನಾಡಿದೆ ಎಂದು ಹೇಳಿದ್ದಾರೆ.

ಇಂದು ದಾಳಿ ಕೊನೆಗೊಳ್ಳುವ ಸಾಧ್ಯತೆ ಇದ್ದು, ಅಧಿಕಾರಿಗಳು ನೀಡುವ ಮಾಹಿತಿಗಾಗಿ ಮಾಧ್ಯಮಗಳು ಜನರು ಕಾತರದಿಂದ ಕಾಯುತ್ತಿದ್ದಾರೆ.

ಸತತ ಮೂರು ದಿನಗಳ ಕಾಲ ದಾಳಿ ನಡೆದಿರುವುದರಿಂದ ಭಾರೀ ಪ್ರಮಾಣದ ನಗದು, ಚಿನ್ನ, ಹೂಡಿಕೆ ಪತ್ರಗಳು ದಾಖಲೆಗಳು ಸಿಕ್ಕಿರಬಹುದು ಎಂದುಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Income Tax Raid on DK Shivakumar – Friday developments. The Income Tax department is still conducting raids at the resident and office premises of DK Shivakumamr, his relatives and associates on its third day.
Please Wait while comments are loading...