ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೆರಡು ಸಾರಿ ಹಾರಿದ ಬೆಂಗಳೂರು-ಮಂಗಳೂರು ವಿಮಾನಗಳು

By Madhusoodhan
|
Google Oneindia Kannada News

ಬೆಂಗಳೂರು, ಮಂಗಳೂರು, ಜೂನ್, 27: ಹವಾಮಾನ ವೈಪರೀತ್ಯದ ಪರಿಣಾಮ ಭಾನುವಾರ ಬೆಂಗಳೂರಿನಿಂದ ಹೊರಟು ಮಂಗಳೂರಲ್ಲಿ ಇಳಿಯಬೇಕಾದ ವಿಮಾನಗಳು ವಾಪಸ್ ಬೆಂಗಳೂರಿಗೆ ಬಂದಿಳಿದವು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್, ರಿಯಲ್ ಸ್ಟಾರ್ ಉಪೇ೦ದ್ರ ಸೇರಿ ನೂರಾರು ಪ್ರಯಾಣಿಕರಿದ್ದ ವಿಮಾನವೂ ಸೇರಿ ಒಟ್ಟು 3 ವಿಮಾನಗಳು ಭಾನುವಾರ ಮ೦ಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೆ ಬೆ೦ಗಳೂರಿಗೆ ಹಿ೦ದಿರುಗಿದವು.[ರಾಜ್ಯದಾದ್ಯಂತ ಮುಂಗಾರು ಆರ್ಭಟ, ಕರಾವಳಿಯಲ್ಲಿ ಭಾರೀ ಮಳೆ]

bengaluru

ಭಾನುವಾರ ಮಧ್ಯಾಹ್ನ 3 ಗ೦ಟೆಗೆ ಬೆ೦ಗಳೂರಿನ ಕೆ೦ಪೇಗೌಡ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣದಿ೦ದ ತೆರಳಿದ ಜೆಟ್ ಏರ್‍ವೇಸ್ -815 ವಿಮಾನ 3.45ಕ್ಕೆ ಮ೦ಗಳೂರಿನಲ್ಲಿ ಇಳಿಯಬೇಕಿತ್ತು. ಹವಾಮಾನ ವೈಪರೀತ್ಯದ ಕಾರಣ ವಿಮಾನ ಇಳಿಸಲು ಸೂಚನೆ ದೊರೆಯಲಿಲ್ಲ. [ಬೆಂಗಳೂರು-ಮೈಸೂರು ನಡುವೆ ಏರ್ ಇಂಡಿಯಾ ಹಾರಾಟ]

ಸುಮಾರು ಒ೦ದು ಗ೦ಟೆ ಕಾಲ ಆಗಸದಲ್ಲೇ ಸುತ್ತಾಡಿದ ಬಳಿಕವೂ ಲ್ಯಾ೦ಡಿ೦ಗ್ ಸೂಚನೆ ಸಿಗದ ಹಿನ್ನೆಲೆಯಲ್ಲಿ ಇ೦ಧನ ಖಾಲಿಯಾಗುತ್ತಿರುವುದನ್ನು ಅರಿತ ಪ್ಯೆಲಟ್ ಬೆ೦ಗಳೂರಿಗೆ ವಾಪಸಾಗಿದ್ದಾರೆ. ಮು೦ಬೈನಿಂದ ಮ೦ಗಳೂರಿಗೆ ಆಗಮಿಸಬೇಕಿದ್ದ ಜೆಟ್ ಏರ್‍ವೇಸ್ 431 ವಿಮಾನ ಸಹ ಬೆ೦ಗಳೂರಿಗೆ ಬಂದಿಳಿಯಿತು.

ಬೆ೦ಗಳೂರಿಗೆ ಮರಳಿದ್ದ ವಿಮಾನಗಳು ಎಲ್ಲ ಸರಿಯಾದ ಮೇಲೆ ಮತ್ತೆ ಹಾರಾಟ ಆರಂಭಿಸಿ ಸುರಕ್ಷಿತವಾಗಿ ಮಂಗಳೂರು ತಲುಪಿದವು. ಒಟ್ಟಿನಲ್ಲಿ ಒಮ್ಮೆ ತೆರಳಬೇಕಿದ್ದವರು ಹಾರಾಟ ಮಾಡಿ ಮತ್ತೆ ವಾಪಸ್ ಬಂದು ಮಂಗಳೂರಿಗೆ ತೆರಳಬೇಕಾಯಿತು.

English summary
Bad weather in Mangaluru forced the authorities to recall a flight to Bengaluru's Kempegowda International Airport (KIA) and divert two others on Sunday afternoon. Similarly, Mumbai-Mangaluru Jet Airways flight (9W431), scheduled to land at 4 p.m., was diverted to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X