ಈ ಟೈಂನಲ್ಲಿ ನಾವು ಸಿಎಂ ಯಡಿಯೂರಪ್ಪ ಜೊತೆಗಿರಬೇಕು, ಅದು ಮಾನವ ಧರ್ಮ

ಬೆಂಗಳೂರು, ಜುಲೈ 22: ಜುಲೈ 25ಕ್ಕೆ ವರಿಷ್ಠರಿಂದ ಯಾವ ಸೂಚನೆ ಬಂದರೂ, ಅದನ್ನು ಪಾಲಿಸಲಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದರೂ, ಭಾರೀ ಒಳಗೊಳಗಿನ ರಾಜಕೀಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, "ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಕೇಳಿದೆ. ಹೈಕಮಾಂಡ್ ಸೂಚಿಸಿದಂತೆ ನಡೆಯುತ್ತೇನೆ ಎಂದು ಅವರು ಹೇಳಿದ್ದಾರೆ"ಎಂದು ಸುಧಾಕರ್ ಹೇಳಿದರು.

"ಮುಂದಿನ ದಿನಗಳಲ್ಲಿ ನಾವೆಲ್ಲಾ ಸೇರಿ ಪಕ್ಷ ಕಟ್ಟಬೇಕಿದೆ ಎಂದು ಹೇಳಿದ್ದಾರೆ. ನಾವೆಲ್ಲಾ (ಬಾಂಬೆ ಟೀಂ) ರಾಜೀನಾಮೆ ನೀಡುತ್ತಿದ್ದೇವೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದು. ಇಷ್ಟಕ್ಕೂ ನಾವೆಲ್ಲಾ ಯಾಕೆ ರಾಜೀನಮೆ ನೀಡಬೇಕೆಂದು"ಎಂದು ಸುಧಾಕರ್ ಪ್ರಶ್ನಿಸಿದರು.

 In This Tough Time, We Have To Be With CM Yediyurappa, Said Dr.Sudhakar

"ಮಾನ್ಯ ಯಡಿಯೂರಪ್ಪನವರ ನಾಯಕತ್ವವನ್ನು ಮತ್ತು ಬಿಜೆಪಿಯ ತತ್ವ, ಸಿದ್ದಾಂತವನ್ನು ನಂಬಿ ಬಂದವರು ನಾವು. ನಮ್ಮ ಉನ್ನತ ನಾಯಕರು ಏನು ನಿರ್ದೇಶನ ಕೊಡುತ್ತಾರೋ ಅದನ್ನು ನಾವು ಪಾಲಿಸುತ್ತೇವೆ"ಎಂದು ಸುಧಾಕರ್ ಈ ಸಂದರ್ಭದಲ್ಲಿ ಹೇಳಿದರು.

"ಕಳೆದ ಸುಮಾರು ಎರಡು ವರ್ಷಗಳಿಂದ ಮುಖ್ಯಮಂತ್ರಿಗಳ ಜೊತೆಗೆ ನಾವು ಕೆಲಸ ಮಾಡಿದ್ದೇವೆ. ಹಾಗಾಗಿ, ಇಂತಹ ಸಮಯದಲ್ಲಿ ನಾವು ಅವರ ಜೊತೆಗೆ ಇರಬೇಕಾಗುತ್ತದೆ, ಅದು ಮಾನವ ಧರ್ಮ"ಎಂದು ಸುಧಾಕರ್ ಅಭಿಪ್ರಾಯ ಪಟ್ಟರು.

"ನಮಗೆ ಖಾತೆಯ ವಿಚಾರದಲ್ಲಾಗಲಿ ಅಥವಾ ಬಿಜೆಪಿಯಲ್ಲಿನ ನಮ್ಮ ಭವಿಷ್ಯದ ಬಗ್ಗೆ ಯಾವುದೇ ಆತಂಕವಿಲ್ಲ. ಹೈಕಮಾಂಡ್ ಏನು ನಿರ್ದೇಶನ ಕೊಡುತ್ತದೋ ಅದನ್ನು ನಾವು ಪಾಲಿಸುತ್ತೇವೆ"ಎಂದು ಡಾ.ಸುಧಾಕರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+