ಕರ್ನಾಟಕ; ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾಗಲು ಹಿಂದೇಟು

ಬೆಂಗಳೂರು, ಜೂನ್ 07; ಕೋವಿಡ್ ಸೋಂಕು ಹರಡುವಿಕೆ ಗ್ರಾಮೀಣ ಭಾಗದಲ್ಲಿ ತಡೆಯಲು ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಸೋಂಕಿತರನ್ನು ಹೋಂ ಐಸೋಲೇಷನ್‌ನಿಂದ ಕೋವಿಡ್‌ ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡುತ್ತಿದೆ.

ಗ್ರಾಮೀಣ ಭಾಗದಲ್ಲಿ ಶೇ 50ರಷ್ಟು ಜನರು ಮಾತ್ರ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದಾರೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತಿವೆ. ಶೇ 50ರಷ್ಟು ಸಕ್ರಿಯ ಪ್ರಕರಣಗಳು ಇನ್ನು ಹೋಂ ಐಸೋಲೇಷನ್‌ನಲ್ಲಿಯೇ ಇದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್ ರಾಜ್ ಇಲಾಖೆ ಮಾಹಿತಿಯಂತೆ ಮೇ 30ರ ತನಕ 1.13 ಲಕ್ಷ ಜನರು ಹೋಂ ಐಸೋಲೇಷನ್‌ನಲ್ಲಿದ್ದರು. ಇವರಲ್ಲಿ ಶೇ 50ರಷ್ಟು ಜನರು ಗ್ರಾಮೀಣ ಭಾಗದವರು.

 In Rural Areas Only 50 Per Cent People Admitted To Covid Care Center

ಗ್ರಾಮೀಣ ಭಾಗದಲ್ಲಿ ಎಲ್ಲಾ ಕಡೆ ಪ್ರತ್ಯೇಕ ಶೌಚಾಲಯ, ಕೊಠಡಿ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಸರ್ಕಾರ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುವುದನ್ನು ಉತ್ತೇಜಿಸುತ್ತಿದೆ.

ಯಾವ ಜಿಲ್ಲೆ ಎಷ್ಟು?; ಯಾದಗಿರಿಯಲ್ಲಿ 1398 ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಕೇರ್‌ ಸೆಂಟರ್‌ನಲ್ಲಿ 32 ಜನರು ಮಾತ್ರ ಇದ್ದಾರೆ. ರಾಯಚೂರಿನಲ್ಲಿ 3461 ಸಕ್ರಿಯ ಪ್ರಕರಣಗಳಲ್ಲಿ 774 ಜನರು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದಾರೆ.

ಮೈಸೂರಿನಲ್ಲಿ 15,079 ಸಕ್ರಿಯ ಪ್ರಕರಣಗಳಲ್ಲಿ 334 ಜನರು ಕೇರ್ ಸೆಂಟರ್‌ನಲ್ಲಿದ್ದಾರೆ. ತುಮಕೂರಿನಲ್ಲಿ 11,835 ಸಕ್ರಿಯ ಪ್ರಕರಣವಿದೆ, 613 ಜನರು ಕೇರ್ ಸೆಂಟರ್‌ನಲ್ಲಿದ್ದಾರೆ.

ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಲು ಜನರು ಹೆದರುತ್ತಿದ್ದಾರೆ. ಹಾಗೆಯೇ ಕುಟುಂಬ ಸದಸ್ಯರು ಸಹ ಅವರನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿವೆ. ಆದ್ದರಿಂದ ಸೋಂಕಿತರು ಮನೆಯಲ್ಲೇ ಇರಲು ಬಯಸುತ್ತಾರೆ.ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+