ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಮನೆಯಲ್ಲಿ ಜಾತಿ ಗಣತಿ : ಚಿತ್ರ, ವಿವರ

|
Google Oneindia Kannada News

ಬೆಂಗಳೂರು, ಏ. 16 : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ರಾಜ್ಯದಲ್ಲಿ ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಗಣತಿದಾರರು ಇಂದು ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಿದರು.

ಗುರುವಾರ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಗಣತಿ ಕಾರ್ಯ ನಡೆಯಿತು. ಪ್ರೌಢಶಾಲಾ ಶಿಕ್ಷಕ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದುಕೊಂಡರು. ತಮ್ಮ ಹೆಸರು ಹೇಳಿದ ಸಿಎಂ ಅಡ್ಡಹೆಸರು ಇಲ್ಲ ಎಂದರು.[ಜಾತಿಗಣತಿ ವಿರೋಧಿಸುವವರು ಜಾತಿವಾದಿಗಳು]

ತಮಗೆ ಒಟ್ಟು 72 ಎಕರೆ ಜಮೀನು ಇದೆ. ಕುರಿ, ಕೋಳಿ, ಎಮ್ಮೆ, ಹಸು, ಎತ್ತುಗಳಿವೆ ಎಂದು ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು ಆದಾಯದ ಬಗ್ಗೆ ಮಾಹಿತಿ ನೀಡಲಿಲ್ಲ. ಮದುವೆಯಾದಾಗ 29 ವರ್ಷ ವಾಗಿತ್ತು ಎಂದು ಸಿಎಂ ಗಣತಿದಾರರಿಗೆ ಮಾಹಿತಿ ನೀಡಿದರು. [ಜಾತಿ ಗಣತಿಗೆ ಸಿದ್ಧರಾಗಿ, ಯಾವ ಜಾತಿಗೆ ಯಾವ ಕಾಲಂ]

ಏಪ್ರಿಲ್ 11 ರಿಂದ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಆರಂಭವಾಗಿದೆ. ಸಮಾಜದಲ್ಲಿ ನಿಜವಾಗಿಯೂ ದುರ್ಬಲರು, ಸೌಲಭ್ಯ ವಂಚಿತರನ್ನು ಗುರುತಿಸಿ ಅವರನ್ನು ಸಬಲೀಕರಣಗೊಳಿಸುವುದೇ ಈ ಸಮೀಕ್ಷೆಯ ಮೂಲ ಉದ್ದೇಶವಾಗಿದೆ. ಸಿಎಂ ಗಣತಿದಾರರಿಗೆ ಕೊಟ್ಟ ಮಾಹಿತಿ ಇಲ್ಲಿದೆ

ಮಾಹಿತಿ ಸಂಗ್ರಹಿಸಿದ ಶಿವಕುಮಾರ್

ಮಾಹಿತಿ ಸಂಗ್ರಹಿಸಿದ ಶಿವಕುಮಾರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ಗಣತಿ ಕಾರ್ಯ ನಡೆಯಿತು. ಪ್ರೌಢಶಾಲಾ ಶಿಕ್ಷಕ ಶಿವಕುಮಾರ್ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದುಕೊಂಡರು. ತಮ್ಮ ಹೆಸರು ಹೇಳಿದ ಸಿಎಂ ಅಡ್ಡ ಹೆಸರು ಇಲ್ಲ ಎಂದರು.

ಸಿದ್ದರಾಮಯ್ಯ ಉತ್ತರ ನೀಡಿದ ಪ್ರಶ್ನೆಗಳು

ಸಿದ್ದರಾಮಯ್ಯ ಉತ್ತರ ನೀಡಿದ ಪ್ರಶ್ನೆಗಳು

ಹೆಸರು - ಸಿದ್ದರಾಮಯ್ಯ
ಜಾತಿ - ಕುರುಬ
ಪತ್ನಿ - ಪಾರ್ವತಿ ಸಿದ್ದರಾಮಯ್ಯ
ಪುತ್ರ - ರಾಕೇಶ್, ಯತೀಂದ್ರ
ಕುಲ ಕಸುಬು - ವ್ಯವಸಾಯ

ಬೆಂಗಳೂರಿನಲ್ಲಿ ಸ್ವಂತ ಮನೆ ಇದೆ

ಬೆಂಗಳೂರಿನಲ್ಲಿ ಸ್ವಂತ ಮನೆ ಇದೆ

ಬೆಂಗಳೂರಿನಲ್ಲಿ ಸ್ವಂತ ಮನೆ ಇದೆ. ವಾಣಿಜ್ಯ ಸಂಕೀರ್ಣವಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. ಒಂದು ಕಾರು ಇರುವ ಬಗ್ಗೆಯೂ ವಿವರ ನೀಡಿದರು.

ಸಿದ್ದರಾಮಯ್ಯ ಸಾಲ ಮಾಡಿದ್ದಾರೆ

ಸಿದ್ದರಾಮಯ್ಯ ಸಾಲ ಮಾಡಿದ್ದಾರೆ

ಸ್ವಂತವಾಗಿರುವ ರೆಫ್ರಿಜರೇಟರ್ ಇದೆ, ನನ್ನ ಹೆಸರಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕವಿದೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ಸಾಲವೂ ಇದೆ ಎಂದರು. ಸ್ವಂತ ಊರಿನಲ್ಲಿ ಮನೆ ಇರುವ ಬಗ್ಗೆಯೂ ಮಾಹಿತಿ ತಿಳಿಸಿದರು.

ಸಿಎಂ ಬಳಿ 72 ಎಕರೆ ಜಮೀನು

ಸಿಎಂ ಬಳಿ 72 ಎಕರೆ ಜಮೀನು

ತಮಗೆ ಒಟ್ಟು 72 ಎಕರೆ ಜಮೀನು ಇದೆ ಎಂದು ಸಿದ್ದರಾಮಯ್ಯ ಗಣತಿದಾರರಿಗೆ ಮಾಹಿತಿ ನೀಡಿದರು.

English summary
Socio Economic and Caste Census in Karnataka Chief Minister Siddaramaiah house in Bengaluru on Thursday, April 16th. Here is details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X