ಕರ್ನಾಟಕದಲ್ಲಿ 1 ಲಕ್ಷ ಜನರಿಗೆ 29 ಎಟಿಎಂ

ಬೆಂಗಳೂರು, ಮೇ 28: ದೇಶದಲ್ಲಿರುವ ಒಟ್ಟು ಎಟಿಎಂಗಳ ಸಾಂಧ್ರತೆಯಲ್ಲಿ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ನವದೆಹಲಿ ಹಾಗೂ ತಮಿಳುನಾಡು ಮೊದಲೆರೆಡು ಸ್ಥಾನವನ್ನು ಪಡೆದುಕೊಂಡಿದೆ. ಒಂದು ಲಕ್ಷ ಜನಸಂಖ್ಯೆಗೆ ಕರ್ನಾಟಕದಲ್ಲಿ 29 ಎಟಿಎಂಗಳಿವೆ.

ರಾಜ್ಯದಲ್ಲೇ ಎಟಿಎಂಗಳ ಸಾಂದ್ರತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬೆಂಗಳೂರು ನಗರದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 52 ಎಟಿಎಂಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 12 ಎಟಿಎಂಗಳಿವೆ ಎಂದು ಎಟಿಎಂ ಉದ್ಯಮ ಒಕ್ಕೂಟ ಮಾಹಿತಿ ನೀಡಿದೆ.

ಕರ್ನಾಟಕವು ಆಂಧ್ರ ಪ್ರದೇಶ, ಮಹಾರಾಷ್ಟ್ರಕ್ಕಿಂತ ಸ್ವಲ್ಪ ಹೆಚ್ಚಿನ ಎಟಿಎಂಗಳನ್ನು ಹೊಂದಿದೆ ಎಂದು ತಿಳಿಸುಬಂದಿದೆ. ನೋಟು ಅಮಾನ್ಯದ ಬಳಿಕ ಎಟಿಎಂ ಉದ್ಯಮದ ಲಾಭಕ್ಕೆ ಹೊಡೆತ ಬಿದ್ದಿವೆ ಎಂದು ವರದಿಗಳು ಹೇಳಿದೆ.

In Karnataka, for one lakh population 29 ATMs

ಗ್ರಾಮೀಣ ಪ್ರದೇಶಗಳ ಜನತೆ ಎಟಿಎಂನಲ್ಲಿ ಹಣ ತೆಗೆಯಲು 15 ರಿಂದ 20 ಕಿ.ಮೀ ಪ್ರಯಾಣ ಮಾಡುತ್ತಾರೆ. ಆದರೂ, ಅವರಿಗೆ ಎಟಿಎಂ ಯಂತ್ರದಲ್ಲಿ ಹಣವಿರುವ ಬಗ್ಗೆ ಖಾತ್ರಿಯಿರುವುದಿಲ್ಲ ಎಂದು ಜನರು ದೂರುತ್ತಾರೆ.

ನಗರ ಪ್ರದೇಶಗಳಲ್ಲಿ ಹೆಚ್ಚು ಜನಸಂಖ್ಯೆಯಿರುವುದರಿಂದ ಹಣ ಖಾಲಿಯಾದಂತೆ ಹಣವನ್ನು ಎಟಿಎಂಗೆ ತುಂಬಿಸಲಾಗುತ್ತದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಎಇಟಿಎಂಗೆ ವಾರಕ್ಕೆ 2-3 ಸಲ ಹಣವನ್ನು ಲೋಡ್ ಮಾಡಲಾಗುತ್ತದೆ. ಇದರ ಜತೆಗೆ ಬ್ಯಾಂಕಿನಿಂದ ಎಟಿಎಂಗಳಿಗೆ ವರ್ಗಾಯಿಸಲು ಸಾರಿಗೆಗೆ ಹೆಚ್ಚು ಖರ್ಚಾಗಲಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 18 ಎಟಿಎಂಗಳು ಇದ್ದು, ಇತರೆ ಹಲವು ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಎಟಿಎಂಗಳ ಸಾಂದ್ರತೆ ಕಡಿಮೆಯಿದೆ. ಏಕೆಂದರೆ, ಚೀನಾದಲ್ಲಿ ಒಂದು ಲಕ್ಷಕ್ಕೆ 63, ಬ್ರೆಜಿಲ್81,ಜಪಾನ್‌ನಲ್ಲಿ 107ಎಟಿಎಂಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+