ಕೊರೊನಾದಿಂದ ಮೃತಪಟ್ಟವರಲ್ಲಿ 90-99ರ ವಯೋಮಾನದವರೇ ಹೆಚ್ಚು
ಬೆಂಗಳೂರು, ಆಗಸ್ಟ್ 23: ಕೊರೊನಾ ಸೋಂಕಿನಿಂದ ಮೃತಪಟ್ಟವರಲ್ಲಿ 90-99ರ ವಯೋಮಾನದವರೇ ಹೆಚ್ಚಿದ್ದಾರೆ ಎಂದು ಕೊರೊನಾ ವಾರ್ ರೂಮ್ ಮಾಹಿತಿ ನೀಡಿದೆ.
ಸಂಖ್ಯಾವಾರು ಮಾಹಿತಿಯನ್ನು ಪರಿಗಣಿಸಿದರೆ ಅತಿ ಹೆಚ್ಚು ಮಂದಿ ಮೃತರು 60- 69 ವಯೋಮಾನಕ್ಕೆ ಸೇರಿದವರಾಗಿದ್ದಾರೆ. ಈ ವರ್ಗದಲ್ಲಿ 10,692 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 50- 59ರ ವಯೋಮಾನದ 8,181 ಮಂದಿ ಇದುವರೆಗೂ ಸಾವನ್ನಪ್ಪಿದ್ದಾರೆ. 70- 79ರ ವಯೋಮಾನದ 7,236 ಮಂದಿ ಸಾವನ್ನಪ್ಪಿದ್ದಾರೆ. 80- 89ರ ವಯೋಮಾನದ 2,668 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 90- 99ರ ವಯೋಮಾನದವರ ವರ್ಗದಲ್ಲಿ 540 ಮೃತ್ಯು ಸಂಭವಿಸಿದೆ.
ರಾಜ್ಯಾದ್ಯಂತ ಭಾನುವಾರ ಒಟ್ಟು 1,189 ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 29,38,616 ಕ್ಕೆ ಏರಿಕೆಯಾಗಿದೆ.
ಶೇ. 12 ಪ್ರತಿಶತ ಮೃತ್ಯು ಈ ವಯೋಮಾನದವರಲ್ಲಿ ಸಂಭವಿಸಿದೆ.
ಅದನ್ನು ಹೊರತು ಪಡಿಸಿದರೆ ಶೇ. 7.7 ಪ್ರತಿಶತ ಮಂದಿ 80- 89ರ ವಯೋಮಾನದವರಾಗಿದ್ದಾರೆ. ಶೇ.6 ಪ್ರತಿಶತ ಮಂದಿ 70- 79 ವಯೋಮಾನದವರಾಗಿದ್ದಾರೆ. ಇದು ಶೇಖಡಾವಾರು ಆಧಾರದಲ್ಲಿ ಸಿಕ್ಕ ಮಾಹಿತಿ.
ನೆರೆ ರಾಜ್ಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿರುವುದು ಆತಂಕವನ್ನು ಸೃಷ್ಟಸಿತ್ತಿದೆ. ಈ ಎರಡೂ ರಾಜ್ಯಗಳು ನಮ್ಮ ಜಿಲ್ಲೆಗಳ ಗಡಿಯಲ್ಲಿದೆ. ರಾಜ್ಯ ಸರ್ಕಾರ ಈಗಾಗಲೇ ಗಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಬೆಂಗಳೂರಿನಲ್ಲಿ ಲಸಿಕೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದೆ. ಸೋಂಕು ಕಡಿಮೆಯಾಗಿರುವಂತೆ ಮಾಡಲು ಜನರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಮಾಡಬೇಕು ಎಂದು ತಿಳಿಸಿದ್ದಾರೆ.
ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಡಿ ಅವರು ಮಾತನಾಡಿ, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮಾರ್ಷಲ್‌ಗಳನ್ನು ಮಾರುಕಟ್ಟೆಗಳಲ್ಲಿ ನಿಯೋಜಿಸಲಾಗಿದೆ ಮತ್ತು ನಗರದ ಜನನಿಬಿಡ ಪ್ರದೇಶಗಳಲ್ಲಿ ಯಾದೃಚ್ಛಿಕ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಆರ್‌ಡಬ್ಲ್ಯೂಎಗಳು ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆಂದು ಹೇಳಿದ್ದಾರೆ.
ಲಸಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, 1,22,31,840 ಜನರಿಗೆ ಲಸಿಕೆ ನೀಡುವ ಮೂಲಕ ಮೊದಲನೆಯ ಸ್ಥಾನದಲ್ಲಿ ಇದೆ. ನಂತರ 96,16,935 ಜನರಿಗೆ ಲಸಿಕೆ ನೀಡುವ ಮೂಲಕ ಬೆಂಗಳೂರು ಎರಡನೇ ಸ್ಥಾನದಲ್ಲಿದೆ, 86,65,037ನೊಂದಿಗೆ ಮುಂಬೈ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ನಿತ್ಯ ನಡೆಯುತ್ತಿರುವ ಕೊರೊನಾ ಪರೀಕ್ಷೆ ಎಷ್ಟು?
ಬೆಂಗಳೂರಿನ ಒಂದು ದಿನದಲ್ಲಿ 50,000-60,000 ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆಗಸ್ಟ್ 20 ರವರೆಗೆ, ನಗರದಲ್ಲಿ 1,79,29,475 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.
ನಗರದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಿರುವುದು ಹಾಗೂ ಪರೀಕ್ಷೆ ನಡೆಸಿರುವುದರಿಂದ ಪಾಸಿಟಿವಿಟಿ ದರ ಕಡಿಮೆಯಾಗಲು ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಳ
ದಕ್ಷಿಣ ಕನ್ನಡ, ಉಡುಪಿ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಕಡಿಮೆಯಾಗಿದೆ. ಇದು ಸಹಜ ಪ್ರಕ್ರಿಯೆಯಾಗಿದೆ. ಸೋಂಕು ಒಮ್ಮೆಲೆ ಉತ್ತುಂಗಕ್ಕೇರಿ ನಾಲ್ಕು ತಿಂಗಳ ಬಳಿಕ ಇಳಿಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕಳೆದ ಮೇ ತಿಂಗಳಿನಲ್ಲಿ ನಗರದಲ್ಲಿ ಸೋಂಕು ಹೆಚ್ಚಾಗಿದ್ದನ್ನು ನಾವು ನೋಡಿದ್ದೆವು. ಇದೀಗ ಇಳಿಕೆಯಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿನ ಪರಿಸ್ಥಿತಿಯನ್ನು ನಾವು ನೋಡಬೇಕಿದೆ ಎಂದಿದ್ದಾರೆ.

ಪಾಸಿಟಿವಿಟಿ ದರ ಇಳಿಕೆ
ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಅಬ್ಬರ ಇಳಿಕೆಯಾಗಿದ್ದು, ಕಳೆದ 40 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆಯೇ ಇರುವುದು ಕಂಡು ಬಂದಿದೆ. ಬಿಬಿಎಂಪಿ ಮಾಹಿತಿ ನೀಡಿರುವ ಪ್ರಕಾರ ಜುಲೈ 12 ರಿಂದ ಆಗಸ್ಟ್ 21 ರವರೆಗೆ, ನಗರದ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದೆ.
Recommended Video

ಮಾಸಿಟಿವಿಟಿ ದರ ಎಷ್ಟಾಗಿದೆ?
ಜುಲೈ 12 ರಂದು, ಪಾಸಿಟಿವಿಟಿ ದರ ಶೇಕಡಾ 0.62 ರಷ್ಟಿತ್ತು ಮತ್ತು ಜುಲೈ 18 ರಂದು ಶೇಕಡಾ 0.55 ರಷ್ಟು ಕುಸಿತ ಕಂಡಿತ್ತು. ಜುಲೈ 24ರಂದು ಅತ್ಯಂತ ಕಡಿಮೆ ಶೇ.0.27 ಶೇಕಡ ಪಾಸಿಟಿವಿಟಿ ದರ ಕಂಡು ಬಂದಿತ್ತು ಎಂದು ಮಾಹಿತಿ ನೀಡಿದೆ. ಇನ್ನು ವಲಯವಾರು ಪಾಸಿಟಿವಿಟಿ ದರದತ್ತ ಗಮನಹರಿಸಿದರೆ, ಕಳೆದ ವಾರ ಮಹದೇವಪುರದಲ್ಲಿ ಶೇ.0.63, ಬೊಮ್ಮನಹಳ್ಳಿಯಲ್ಲಿ ಶೇ.0.59, ರಾಜರಾಜೇಶ್ವರಿ ನಗರ ಶೇ.0.50, ಯಲಹಂಕ ಶೇ.0.45, ದಕ್ಷಿಣ ಮತ್ತು ಪೂರ್ವ ವಲಯದಲ್ಲಿ ಶೇ. 0.42 ಮತ್ತು 0.40 ಶೇಕಡಾ ಮತ್ತು ಪಶ್ಚಿಮ ಮತ್ತು ದಾಸರಹಳ್ಳಿ ವಲಯಗಳಲ್ಲಿ ತಲಾ ಶೇ.0.24 ರಷ್ಟು ಪಾಸಿಟಿವಿಟಿ ದರ ಕಂಡು ಬಂದಿದೆ.












Click it and Unblock the Notifications