‘ಗ್ಯಾರಂಟಿ ಕ್ಲಿನಿಕ್’ ಮೂಲಕ ಡಾಕ್ಟರ್ ಆದ್ರು ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ಗ್ಯಾರಂಟಿಗಳ ಮೂಲಕ ಈಗ ದೇಶಾದ್ಯಂತ ಸದ್ದು ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಸಾಲು ಸಾಲು ಸವಾಲು ಎದುರಾಗಿವೆ. ಆದರೆ ಅದೆಲ್ಲವನ್ನೂ ಗ್ಯಾರಂಟಿ ಯೋಜನೆ ಮೂಲಕ ನಿಭಾಯಿಸುವ ಮತ್ತು ಸಾಮಾನ್ಯರ ಸಂಕಷ್ಟಗಳಿಗೆ ಮುಕ್ತಿ ನೀಡುವ ಧೈರ್ಯ ಸಿಎಂಗೆ ಇದೆ. ಹೀಗಾಗಿ 'ಗ್ಯಾರಂಟಿ ಕ್ಲಿನಿಕ್' ಮೂಲಕ ಸಿದ್ದರಾಮಯ್ಯ ಡಾಕ್ಟರ್ ಕೂಡ ಆಗಿದ್ದಾರಂತೆ!
ಹೌದು ವ್ಯಂಗ್ಯ ಚಿತ್ರಕಾರರೊಬ್ಬರು ರಚಿಸಿರುವ ಕಾರ್ಟೂನ್ ಅಂದರೆ ವ್ಯಂಗ್ಯ ಚಿತ್ರ ಹಲ್‌ಚಲ್ ಎಬ್ಬಿಸಿದೆ. ಇದನ್ನ ಸ್ವತಃ ರಾಜ್ಯ ಕಾಂಗ್ರೆಸ್ ಘಟಕವೂ ಟ್ವೀಟ್ ಮಾಡುವ ಮೂಲಕ, ಸಿಎಂ ಸಿದ್ದರಾಮಯ್ಯ ಅವರೀಗ ಡಾ.ಸಿದ್ದರಾಮಯ್ಯ ಆಗಿದ್ದಾರೆ ಅನ್ನೋದನ್ನ ಒಪ್ಪಿಕೊಂಡಿದೆ. ಅರೆರೆ ಹಾಗಾದ್ರೆ ಕಾರ್ಟೂನ್‌ನಲ್ಲಿ ಏನಿದೆ? ಅಂದ್ರ. ಅದ್ರಲ್ಲಿ ಪೆಟ್ಟು ತಿಂದು ಹಾಸಿಗೆ ಮೇಲೆ ಮಲಗಿದ ವ್ಯಕ್ತಿಗೆ ಸಿಎಂ ಸಿದ್ದರಾಮಯ್ಯ ಟ್ರೀಟ್‌ಮೆಂಟ್ ಕೊಡುವ ಡಾಕ್ಟರ್ ರೀತಿ ನಿಂತಿದ್ದಾರೆ. ಹಿಂದೆ 'ಗ್ಯಾರಂಟಿ ಕ್ಲಿನಿಕ್' ಬೋರ್ಡ್ ಹಾಕಿ, 5 ಗ್ಯಾರಂಟಿಯ ಇಂಜೆಕ್ಷನ್ ಮೂಲಕ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಅನ್ನೋದನ್ನ ತೋರಿಸಲಾಗಿದೆ.

)ಬಿಜೆಪಿಯ ರೋಗಪೀಡಿತ ಆಡಳಿತದಿಂದ ನರಳುತ್ತಿದ್ದ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದ ಚಿಕಿತ್ಸಕ ಯೋಜನೆಗಳು... pic.twitter.com/MmK52v7iqP
— Karnataka Congress (@INCKarnataka) June 6, 2023
ಗೃಹಜ್ಯೋತಿ ಯೋಜನೆ ಬಗ್ಗೆ ಅಧಿಕೃತ ಮಾಹಿತಿ
ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಗೃಹಜ್ಯೋತಿಯು ಯೋಜನೆ ಅನ್ವಯ ಆಗುತ್ತಾ? ಇಲ್ವಾ? ಅನ್ನೋ ಡೌಟ್‌ಗೂ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಸಿಕ್ಕಿದೆ. 'ನಮ್ಮ ಗ್ಯಾರಂಟಿ ಯೋಜನೆಗಳು ಸಮಾಜ ಕಲ್ಯಾಣದ ಕಾರ್ಯಕ್ರಮಗಳಾಗಿವೆ. ಗೃಹಜ್ಯೋತಿ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ. ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಬಲಿಯಾಗಬಾರದು. ಬಾಡಿಗೆ ಮನೆ ವಾಸಿಗಳು ಈ ಕೆಳಕಂಡ ಮಾರ್ಗಸೂಚಿ ಅನುಸರಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.' ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಾದ್ರೆ ಮಾರ್ಗಸೂಚಿಗಳು ಏನು? ಮುಂದೆ ಓದಿ.
()ನಮ್ಮ ಗ್ಯಾರಂಟಿ ಯೋಜನೆಗಳು ಸಮಾಜ ಕಲ್ಯಾಣದ ಕಾರ್ಯಕ್ರಮಗಳಾಗಿವೆ.
— Karnataka Congress (@INCKarnataka) June 6, 2023
ಗೃಹಜ್ಯೋತಿ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ.
ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಬಲಿಯಾಗಬಾರದು.
ಬಾಡಿಗೆ ಮನೆಯ ವಾಸಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಿ ಯೋಜನೆಯ ಪ್ರಯೋಜನ… pic.twitter.com/Wa0btx2zIG
ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ
ಹಾಗೇ ಇನ್ನೊಂದು ಟ್ಟೀಟ್‌ನಲ್ಲಿ ಈ ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದೆ ಕಾಂಗ್ರೆಸ್. 'ಬಿಜೆಪಿ ಸರ್ಕಾರದ ಭ್ರಷ್ಟಾಚಾರ ರಾಜ್ಯದ ಜನರಿಗೆ ಪಿಡುಗಿನಂತೆ ಕಾಡಿತ್ತು. ಶಾಲೆ ಮಕ್ಕಳಿಗೆ ಸಮವಸ್ತ್ರ ನೀಡುವಲ್ಲಿ ವಿಳಂಬ ಮಾಡಿದ್ದಲ್ಲದೆ ಕಮಿಷನ್ ವ್ಯವಹಾರ ನಡೆದು ಕಳಪೆ ಸಮವಸ್ತ್ರ ನೀಡಲಾಗಿತ್ತು. ಈ ಅಕ್ರಮದಲ್ಲಿ ಭಾಗಿಯಾದ KHDC ಅಧಕಾರಿಯನ್ನು ಅಮಾನತು ಮಾಡಲಾಗಿದೆ, ತನಿಖೆ ನಡೆಯಲಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ.' ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಲಾಗಿದೆ.

)ಬಿಜೆಪಿ ಸರ್ಕಾರದ ಭ್ರಷ್ಟಾಚಾರ ರಾಜ್ಯದ ಜನರಿಗೆ ಪಿಡುಗಿನಂತೆ ಕಾಡಿತ್ತು.
— Karnataka Congress (@INCKarnataka) June 6, 2023
ಶಾಲೆ ಮಕ್ಕಳಿಗೆ ಸಮವಸ್ತ್ರ ನೀಡುವಲ್ಲಿ ವಿಳಂಬ ಮಾಡಿದ್ದಲ್ಲದೆ ಕಮಿಷನ್ ವ್ಯವಹಾರ ನಡೆದು ಕಳಪೆ ಸಮವಸ್ತ್ರ ನೀಡಲಾಗಿತ್ತು.
ಈ ಅಕ್ರಮದಲ್ಲಿ ಭಾಗಿಯಾದ KHDC ಅಧಕಾರಿಯನ್ನು ಅಮಾನತು ಮಾಡಲಾಗಿದೆ, ತನಿಖೆ ನಡೆಯಲಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ… pic.twitter.com/48p3g1Azqk
ರಾಜ್ಯವನ್ನು ವಂಚಿಸಿ ಅಧಿಕಾರದ ಗದ್ದುಗೆ...
ಒಂದ್ಕಡೆ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಕಡೆಗೆ ಗಮನ ಹರಿಸಿದ್ರೆ, ಈ ಕಡೆ ಬಿಜೆಪಿ ಲೀಡರ್ಸ್ ಕಾಂಗ್ರೆಸ್ ವಿರುದ್ಧ ಅದೇ ಗ್ಯಾರಂಟಿಗಳನ್ನ ಹಿಡಿದು ತಿರುಗೇಟು ನೀಡ್ತಿದ್ದಾರೆ. 'ರಾಜ್ಯವನ್ನು ವಂಚಿಸಿ ಅಧಿಕಾರದ ಗದ್ದುಗೆ ಏರಿರುವ @INCKarnataka ತನಗೆ ಖುಷಿ ಬಂದಹಾಗೆ ಸ್ವೇಚ್ಛಾಚಾರ ಮಾಡಬಹುದೆಂದು ಅಹಂಕಾರದಿಂದ ಬೀಗುತ್ತಿದ್ದರೆ, ಅದು ಅವರ ಭ್ರಮೆ! ಬಿಜೆಪಿ ಒಂದು ಅತ್ಯಂತ ಜವಾಬ್ದಾರಿಯುತ ವಿರೋಧ ಪಕ್ಷವಾಗಿ, ರಾಜ್ಯದ ಜನರ ಧ್ವನಿಯಾಗಿ ಈ #ConditionsApplyGovt #ATMSarkara #HitlerSarkara ದ ವೈಫಲ್ಯಗಳ ವಿರುದ್ಧ ಹೋರಾಡಲಿದೆ.' ಎಂದು ಆರೋಪ ಮಾಡಿದೆ ಬಿಜೆಪಿ.
()ರಾಜ್ಯವನ್ನು ವಂಚಿಸಿ ಅಧಿಕಾರದ ಗದ್ದುಗೆ ಏರಿರುವ @INCKarnataka ತನಗೆ ಖುಷಿ ಬಂದಹಾಗೆ ಸ್ವೇಚ್ಛಾಚಾರ ಮಾಡಬಹುದೆಂದು ಅಹಂಕಾರದಿಂದ ಬೀಗುತ್ತಿದ್ದರೆ, ಅದು ಅವರ ಭ್ರಮೆ!
— BJP Karnataka (@BJP4Karnataka) June 6, 2023
ಬಿಜೆಪಿ ಒಂದು ಅತ್ಯಂತ ಜವಾಬ್ದಾರಿಯುತ ವಿರೋಧ ಪಕ್ಷವಾಗಿ, ರಾಜ್ಯದ ಜನರ ಧ್ವನಿಯಾಗಿ ಈ #ConditionsApplyGovt #ATMSarkara #HitlerSarkara ದ ವೈಫಲ್ಯಗಳ ವಿರುದ್ಧ… pic.twitter.com/AQGUuex6er
'ಗೃಹಜ್ಯೋತಿಯಲ್ಲ ಇದು ಗೃಹದ್ರೋಹ'
ಹಾಗೇ ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿಯ ಬಗ್ಗೆಯೂ ಬಿಜೆಪಿ ವಾಗ್ದಾಳಿ ನಡೆಸಿದೆ. 'ಮಾರ್ಗಸೂಚಿಗಳ ಮೂಲಕ ಗೊಂದಲ ಗ್ಯಾರಂಟಿ. @DKShivakumar ಒಂದು ಹೇಳಿದ್ರೆ @thekjgeorge ಮತ್ತೊಂದು ಹೇಳುತ್ತಾರೆ, @siddaramaiah ನವರು ಬೇರೆಯೇ ಲೋಕದಲ್ಲಿದ್ದಾರೆ. ಈ ಸರ್ಕಾರದಲ್ಲಿ ಆರಂಭದಿಂದಲೇ ತಾಳಮೇಳವಿಲ್ಲ! ಗೃಹಜ್ಯೋತಿಯಲ್ಲ ಇದು ಗೃಹದ್ರೋಹ.' ಎನ್ನುವ ಮೂಲಕ 'ಗೃಹಜ್ಯೋತಿಯಲ್ಲ ಇದು ಗೃಹದ್ರೋಹ' ಎಂದು ಕಾಂಗ್ರೆಸ್ ಗ್ಯಾರಂಟಿಯನ್ನ ಜರಿದಿದೆ.

ಒಟ್ನಲ್ಲಿ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳ ಮೂಲಕ ಲೋಕಸಭೆ ಚುನಾವಣೆಗೆ & ಬಿಬಿಎಂಪಿ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇನ್ನೊಂದು ಕಡೆ ಅದೇ ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿ ಕೂಡ ಲೋಕಸಭೆ ಚುನಾವಣೆಗೆ & ಬಿಬಿಎಂಪಿ ಚುನಾವಣೆಗೆ ಸಜ್ಜಾಗುತ್ತಿದೆ. ಹಾಗಾದ್ರೆ ಮತದಾರ ಪ್ರಭು ಈ ಬಾರಿ ಯಾರಿಗೆ ಫುಲ್ ಮಾರ್ಕ್ಸ್ ಕೊಡ್ತಾನೆ. ಕೆಲ ದಿನಗಳ ಹಿಂದೆ ಫಲಿತಾಂಶ ಬಂದ ವಿಧಾನಸಭೆ ಚುನಾವಣೆಯ ರಿಸಲ್ಟ್ ಮತ್ತೆ ಮರುಕಳಿಸುತ್ತಾ? ಅಥವಾ ಬಿಜೆಪಿ ಈ ಬಾರಿ ಕಂಬ್ಯಾಕ್ ಮಾಡುತ್ತಾ? ಕಾದು ನೋಡಬೇಕು.












Click it and Unblock the Notifications