1141 ಸ್ಮಶಾನದ ಜಾಗವೂ ಒತ್ತುವರಿ- ಹೈಕೋರ್ಟ್‌ಗೆ ಸರಕಾರದ ಹೇಳಿಕೆ

ಬೆಂಗಳೂರು, ಸೆ.7. ರಾಜ್ಯದಲ್ಲಿ ಗೋಮಾಳ, ಸರಕಾರಿ ಜಾಗ ಒತ್ತುವರಿ ಆಗುವುದು ಕಾಮನ್. ಆದರೆ, ಜನರು ಸ್ಮಶಾನದ ಜಾಗವನ್ನೂ ಸಹ ಬಿಡೋದಿಲ್ಲ.ಹೌದು ಅದು ನಿಜ, ಸರ್ಕಾರವೇ ಹೈಕೋರ್ಟ್ ಗೆ ಮಂಗಳವಾರ ನೀಡಿರುವ ಮಾಹಿತಿಯಂತೆ ಒಟ್ಟು 1,141 ಕಡೆ ಸ್ಮಶಾನ ಜಾಗಗಳು ಒತ್ತುವರಿಯಾಗಿದೆಯಂತೆ. ಆ ಪೈಕಿ ಸರ್ಕಾರ ಈವರೆಗೆ ತೆರವು ಮಾಡಿರುವುದು ಕೇವಲ 282, ಇನ್ನೂ 859 ಕಡೆ ಸ್ಮಶಾನ ಜಾಗಗಳ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಹೈಕೋರ್ಟ್‌ ನೀಡಿದ್ದ ಆದೇಶ ಪಾಲನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬೆಂಗಳೂರಿನ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ವಿಭಾಗೀಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಸರ್ಕಾರದ ಪರ ವಕೀಲರು, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಸಲ್ಲಿಸಿದ ಅನುಪಾಲನಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

In 1141 places burial ground space also encroached: Karnataka Government informs HC

ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಶೇ.92ರಷ್ಟು ಸ್ಮಶಾನ ಜಾಗಗಳನ್ನು ಮಂಜೂರು ಮಾಡಲಾಗಿದ್ದು, ಕಾನೂನು ತೊಡಕುಗಳ ಕೆಲ ಕಾರಣಗಳಿಂದಾಗಿ ಒಂದಿಷ್ಟು ಕಡೆ ಸ್ಮಶಾನ ಜಾಗ ಮಂಜೂರು ಮಾಡಲು ವಿಳಂಬವಾಗಿದೆ ಎಂದರು.

ಸರ್ಕಾರದ ವಿವರ:

ರಾಜ್ಯದಲ್ಲಿಒಟ್ಟು 1,141 ಸ್ಮಶಾನ ಜಾಗಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದ್ದು, ಅದೇ ರೀತಿ ರಾಜ್ಯದಲ್ಲಿರುವ ಒಟ್ಟು 29,616 ಗ್ರಾಮಗಳ ಪೈಕಿ 27,458 ಗ್ರಾಮಗಳಲ್ಲಿಶ್ಮಶಾನ ಜಾಗ ಒದಗಿಸಲಾಗಿದ್ದು, ಶೇ.92ರಷ್ಟು ಸ್ಮಶಾನ ಒದಗಿಸಿದಂತಾಗಿದೆ. ಇನ್ನುಳಿದ 1,003 ಗ್ರಾಮಗಳಿಗೆ ಸ್ಮಶಾನ ಜಾಗ ಒದಗಿಸಬೇಕಾಗಿದೆ. ಇದರಲ್ಲಿಅರಣ್ಯ ಸಂರಕ್ಷಣಾ ಕಾಯ್ದೆಯ ಸಮಸ್ಯೆ, ವ್ಯಾಜ್ಯಗಳು ಹಾಗೂ ಜಮೀನು ಖರೀದಿ ಮಾಡಬೇಕಾಗಿರುವ ಕಾರಣದಿಂದ 600 ಗ್ರಾಮಗಳಲ್ಲಿಸ್ಮಶಾನ ಜಾಗ ಒದಗಿಸಲು ಆಗಿಲ್ಲ. 403 ಗ್ರಾಮಗಳಲ್ಲಿಸ್ಮಶಾನ ಜಾಗ ಒದಗಿಸಬೇಕಾಗಿದ್ದು, ಪ್ರಕ್ರಿಯೆ ಚಾಲ್ತಿಯಲ್ಲಿದೆ ಸರ್ಕಾರದ ವರದಿಯಲ್ಲಿ ತಿಳಿಸಲಾಗಿದೆ.

ಅದೇ ರೀತಿ 25,011 ಸ್ಮಶಾನ ಜಾಗಗಳನ್ನು ಆರ್‌ಟಿಸಿಯಲ್ಲಿ ಇಂಡೀಕರಿಸಲಾಗಿದ್ದು, 2,333 ಬಾಕಿ ಇವೆ. 23,815 ಸ್ಮಶಾನ ಜಾಗಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಸುಪರ್ದಿಗೆ ನೀಡಲಾಗಿದ್ದು, 3,765 ಜಾಗಗಳನ್ನು ಸುಪರ್ದಿಗೆ ನೀಡಲು ಬಾಕಿ ಇದೆ. 516 ಸ್ಮಶಾನ ಜಾಗಗಳ ಖರೀದಿ, ಮೀಸಲಿಡುವ ಮತ್ತು ಮಂಜೂರು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸರ್ಕಾರ ಹೇಳಿದೆ.

ಸ್ಮಶಾನ ಜಾಗಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು ಮತ್ತು ಶವಸಂಸ್ಕಾರ ಅಗತ್ಯ ಜಮೀನು ಇಲ್ಲದ ಗ್ರಾಮಗಳನ್ನು ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು ಎಂಬ ನ್ಯಾಯಾಲಯದ ಆದೇಶ ಪಾಲನೆಗೆ ಮೂರು ವಾರ ಕಾಲಾವಕಾಶ ಬೇಕು ಎಂದು ಕೋರಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ಮೂರು ವಾರ ಕಾಲಾವಕಾಶ:

ರಾಜ್ಯದಲ್ಲಿ ಒತ್ತುವರಿಯಾಗಿರುವ ಸ್ಮಶಾನ ಜಾಗಗಳನ್ನು ತೆರವುಗೊಳಿಸಬೇಕು ಮತ್ತು ಶವಸಂಸ್ಕಾರ ಸ್ಥಳಾವಕಾಶ ಇಲ್ಲದ ಗ್ರಾಮಗಳಿಗೆ ಸ್ಮಶಾನ ಮಂಜೂರು ಮಾಡಲು ಮೂರು ವಾರಗಳಲ್ಲಿಕ್ರಮ ಕೈಗೊಳ್ಳುವಂತೆ ಆಗಸ್ಟ್‌ 16ರಂದು ನಿರ್ದೇಶಿಸಿತ್ತು. ಅದರಂತೆ ಸರ್ಕಾರ ಸೆ.5ರಂದು ಅನುಪಾಲನಾ ವರದಿ ಸಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+